ಕಲಬುರಗಿ: ಇಬ್ಬರು ಪುತ್ರಿಯರ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾಡಿಯಾಳ ಗ್ರಾಮದ ಬಳಿ ನಡೆದಿದೆ. ಲಕ್ಷ್ಮೀ ಏಳಕೆ(28), ಗೌರಮ್ಮ(6), ಸಾವಿತ್ರಿ(1) ಮೃತಪಟ್ಟಿದ್ದು ಮತ್ತೊಬ್ಬ ಪುತ್ರಿ ಈಶ್ವರಿ(4)ಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೂರು ಜನ ಹೆಣ್ಣು ಮಕ್ಕಳಿರುವ ಕಾರಣಕ್ಕೆ ಗಂಡ, ಗಂಡನ ಮನೆಯವರ ಕಿರುಕುಳ ಹಿನ್ನೆಲೆಯಲ್ಲಿ ಬೇಸತ್ತ ಮಹಿಳೆ ಗ್ರಾಮದ ಹೊರವಲಯದ ಜಮೀನೊಂದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಂಬರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ಸಂಜೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾಡಿಯಾಳ ಗ್ರಾಮ. ಇದೇ ಗ್ರಾಮದ ಲಕ್ಷ್ಮೀ ಎಂಬುವವರು ಕಳೆದ14 ವರ್ಷಗಳ ಹಿಂದೆ ತನ್ನ ಸೋದರಮಾವನನ್ನ ಮದುವೆ ಆಗಿದ್ರು.. ಖುಷಿಯಾಗಿ ಜೀವನ ಕಳೀತಿದ್ದ ಇವರಿಗೆ ಏನೂ ಕೊರತೆ ಇರಲಿಲ್ಲ. ಆದ್ರೆ, ದಂಪತಿಗೆ ಒಂದ್ರೆ ಹಿಂದೆ ಒಂದು ಎಂಬಂತೆ 5 ಹೆಣ್ಣು ಮಕ್ಕಳಾಗಿದ್ವು. ಅದ್ರಲ್ಲಿ 2 ಮಕ್ಕಳು ಮೃತಪಟ್ಟಿದ್ರೆ, ಇನ್ನೂ ಮೂರು ಹೆಣ್ಣು ಮಕ್ಕಳು ಬದುಕಿದ್ವು. ಆದ್ರೆ, ಗಂಡು ಮಗು ಆಗಲಿಲ್ಲ ಅಂತಾ ಲಕ್ಷ್ಮೀ ಕುಗ್ಗಿ ಹೋಗಿದ್ರು. ಕೊನೆಗೆ ಸಾಯುವ ನಿರ್ಧಾರ ಮಾಡಿ, ತನ್ನ ಜೊತೆ ಮಕ್ಕಳಾದ ಈಶ್ವರಿ, ಸ್ವಾತಿ, ಕೀರ್ತಿ ಜೊತೆ ತೋಟದಲ್ಲಿದ್ದ ಬಾವಿಗೆ ಹಾರಿದ್ದಾರೆ. ಇದನ್ನ ಗಮನಿಸಿದ ಸ್ಥಳೀಯರು ಬಾವಿಗಿಳಿದು ಈಶ್ವರಿಯನ್ನ ಕಾಪಾಡಿದ್ದಾರೆ. ಅಷ್ಟರಲ್ಲೇ ಸ್ವಾತಿ, ಕೀರ್ತಿ ಮತ್ತು ತಾಯಿ ಸೇರಿ ಮೂವರು ಮೃತಪಟ್ಟಿದ್ದಾರೆ.
ಇನ್ನು, ನಿನ್ನೆ ಬೆಳಗ್ಗೆ ಲಕ್ಷ್ಮೀ ತನ್ನ ಮಕ್ಕಳಿಗೆ ಹುಷಾರಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಅತ್ತೆಗೆ ಹೇಳಿ ಹೊರ ಹೋಗಿದ್ರಂತೆ. ಆದ್ರೆ ಆಸ್ಪತ್ರೆಗೆ ಹೋಗಬೇಕಿದ್ದ ಲಕ್ಷ್ಮ, ನೇರವಾಗಿ ಜಮೀನಿನ ಕಡೆ ಹೊರಟಿದ್ದಾರೆ ಈ ವೇಳೆ ಮಾರ್ಗ ಮಧ್ಯದಲ್ಲಿ ಗ್ರಾಮಸ್ಥರು ಬೆಳ್ಳಂ ಬೆಳಗ್ಗೆ ಎಲ್ಲಿಗೆ ಹೊರಟಿದ್ದಿಯಾ ಅಂತಾ ವಿಚಾರಿಸಿದ್ದಾರೆ. ಆಗ ಲಕ್ಷ್ಮೀ ನನ್ನ ಗಂಡ ಜಮೀನಿನಲ್ಲಿದ್ದಾರೆ. ಹಾಗಾಗಿ ಜಮೀನಿಗೆ ಹೋಗ್ತಿದ್ದೇನೆ ಅಂದಿದ್ದಾರೆ. ಆದ್ರೆ, ಜಮೀನಿನಲ್ಲಿ ನಡೆದಿದ್ದೇ ಬೇರೆ.
ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಇನ್ನು ಮತ್ತೊಂದೆಡೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮರಪ್ಪ ಲೇಔಟ್‌ನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನೇಣು ಬಿಗಿದುಕೊಂಡು ಕಾರ್ತಿಕ್(29) ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮಗ ಆರ್ಯನ್ ಬಗ್ಗೆ ಚಿಂತಿಸಿ ಶಾರುಖ್ ಖಾನ್ ಹೀಗಾದರೆ? ಈ ಫೋಟೋದ ಅಸಲಿಯತ್ತು ಇಲ್ಲಿದೆ