ಮಗ ಆರ್ಯನ್​ ಬಗ್ಗೆ ಚಿಂತಿಸಿ ಶಾರುಖ್​ ಖಾನ್​ ಹೀಗಾದರೆ? ಈ ಫೋಟೋದ ಅಸಲಿಯತ್ತು ಇಲ್ಲಿದೆ

ಶಾರುಖ್​ ಖಾನ್​ಗೆ ಸರಿಯಾಗಿ ಊಟ ಸೇರುತ್ತಿಲ್ಲ. ಅವರು ರಾತ್ರಿ ನಿದ್ದೆ ಮಾಡುತ್ತಿಲ್ಲ ಎಂಬಿತ್ಯಾದಿ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಇದಾದ ಬೆನ್ನಲ್ಲೇ ಶಾರುಖ್​ ಅವರ ಫೋಟೋ ಒಂದು ವೈರಲ್​ ಆಗುತ್ತಿದೆ.

ಮಗ ಆರ್ಯನ್​ ಬಗ್ಗೆ ಚಿಂತಿಸಿ ಶಾರುಖ್​ ಖಾನ್​ ಹೀಗಾದರೆ? ಈ ಫೋಟೋದ ಅಸಲಿಯತ್ತು ಇಲ್ಲಿದೆ
ಶಾರುಖ್​ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 24, 2021 | 1:37 PM

ಶಾರುಖ್​ ಖಾನ್​ ಅಕ್ಷರಶಃ ಚಿಂತೆಗೆ ಒಳಗಾಗಿದ್ದಾರೆ. ಮಗ ಆರ್ಯನ್​ ಖಾನ್ ಡ್ರಗ್​ ಕೇಸ್​ನಲ್ಲಿ​ ಬಂಧನಕ್ಕೊಳಗಾದ ನಂತರ ಅವರು ಯಾವ ಕೆಲಸದ ಮೇಲೂ ಗಮನ ಕೊಡೋಕೆ ಸಾಧ್ಯವಾಗುತ್ತಿಲ್ಲ. ಜಿಮ್​ಗೆ ಅವರು ಸರಿಯಾಗಿ ತೆರಳುತ್ತಿಲ್ಲ. ಸಿನಿಮಾ ಕೆಲಸಗಳಲ್ಲಿ ಭಾಗಿಯಾಗುವುದಂತೂ ಸದ್ಯದ ಮಟ್ಟಿಗೆ ದೂರದ ಮಾತಾಗಿದೆ. ನವೆಂಬರ್​ 2ರಂದು ಶಾರುಖ್​ ಜನ್ಮದಿನ. ಅದನ್ನು ಕೂಡ ಅವರು ಆಚರಿಸಿಕೊಳ್ಳುತ್ತಿಲ್ಲ. ಆರ್ಯನ್​ ಅವರನ್ನು ಜೈಲಿನಿಂದ ಹೊರಗೆ ತರಬೇಕು ಎನ್ನುವ ಪ್ರಯತ್ನದಲ್ಲಿ ಅವರಿದ್ದಾರೆ. ಈ ಮಧ್ಯೆ ಶಾರುಖ್​ ಅವರ ಫೋಟೋ ಒಂದು ವೈರಲ್​ ಆಗಿದೆ. ಈ ಫೋಟೋ ನೋಡಿದ ಅಭಿಮಾನಿಳು ನಿಜಕ್ಕೂ ಅಚ್ಚರಿಗೊಂಡಿದ್ದಾರೆ.

ಶಾರುಖ್​ ಖಾನ್​ಗೆ ಸರಿಯಾಗಿ ಊಟ ಸೇರುತ್ತಿಲ್ಲ. ಅವರು ರಾತ್ರಿ ನಿದ್ದೆ ಮಾಡುತ್ತಿಲ್ಲ ಎಂಬಿತ್ಯಾದಿ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಇದಾದ ಬೆನ್ನಲ್ಲೇ ಶಾರುಖ್​ ಅವರ ಫೋಟೋ ಒಂದು ವೈರಲ್​ ಆಗುತ್ತಿದೆ. ಶಾರುಖ್​ ಗಡ್ಡ ಬಿಳಿಯಾಗಿದೆ. ಕಣ್ಣ ಕೆಳಗೆ ಸಂಪೂರ್ಣವಾಗಿ ಕಪ್ಪಾಗಿದೆ. ಕಣ್ಣಂತೂ ಹಲವು ದಿನ ನಿದ್ದೆ ಮಾಡದೇ ಇದ್ದಾಗ ಆಗುವಷ್ಟು ಕೆಂಪಾಗಿದೆ. ಮಗನ ಬಗ್ಗೆ ಶಾರುಖ್ ಚಿಂತೆಗೆ ಒಳಗಾಗಿದ್ದಾರೆ. ಈ ಕಾರಣಕ್ಕೆ ಅವರು ಇಷ್ಟು ಕೆಟ್ಟ ಪರಿಸ್ಥಿತಿಗೆ ತಲುಪಿದ್ದಾರೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ, ಇದರ ಅಸಲಿಯತ್ತೇ ಬೇರೆ.

ಅಸಲಿಗೆ ಈ ಫೋಟೋ ಇತ್ತೀಚಿಗಿನದ್ದು ಅಲ್ಲವೇ ಅಲ್ಲ. ಇದು 2017ರ ಫೋಟೋ. ಮಾರ್ಚ್​ 15 ಆಲಿಯಾ ಹುಟ್ಟಿದ ದಿನ. ಆ ವರ್ಷ ಆಲಿಯಾ ಅದ್ದೂರಿಯಾಗಿ ಬರ್ತ್​ಡೇ ಆಚರಣೆ ಮಾಡಿಕೊಂಡಿದ್ದರು. ಮನೆಗೆ ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಲಾಗಿತ್ತು. ಆ ವೇಳೆ ಶಾರುಖ್​ ಕೂಡ ಆಗಮಿಸಿದ್ದರು. ಆಗ ತೆಗೆದ ಫೋಟೋ ಇದಾಗಿದೆ. ಇದು ಈಗ ವೈರಲ್​ ಆಗಿದೆ. ಅಂದು ಮತ್ತೊಂದು ಘಟನೆಯೂ ನಡೆದಿತ್ತು. ಶಾರುಖ್​ ಖಾನ್​ ಕಾರಿನ ಚಕ್ರಕ್ಕೆ ಸಿಲುಕಿ ಫೋಟೋಗ್ರಾಫರ್​ ಒಬ್ಬನ ಕಾಲಿಗೆ ಏಟಾಗಿತ್ತು. ಈ ವೇಳೆ ಶಾರುಖ್​ ಖಾನ್​ ಸಹಾಯಕ್ಕೆ ಧಾವಿಸಿದ್ದರು. ಈ ಮೂಲಕ ಅವರು ಮಾನವೀಯತೆ ಮೆರೆದಿದ್ದರು.

ಇದನ್ನೂ ಓದಿ: ಆರ್ಯನ್​ ಭೇಟಿ ಮಾಡಿದ  ಶಾರುಖ್​ ಖಾನ್ ತೆಗೆದುಕೊಂಡ್ರು ಕಠಿಣ ನಿರ್ಧಾರ; ಪರಿಣಾಮ ಯಾರ ಮೇಲೆ?

‘ಶಾರುಖ್​ ಖಾನ್ ಬಿಜೆಪಿ ಸೇರಿದರೆ, ಡ್ರಗ್ಸ್​ ಸಕ್ಕರೆ ಪುಡಿಯಾಗಿ ಬದಲಾಗುತ್ತದೆ’-ಮಹಾ ಸಚಿವನ ವ್ಯಂಗ್ಯ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ