ಸಲಗ ನಿರ್ಮಾಪಕ ಕೆ.ಪಿ. ಶ್ರೀಕಾಂತ್ಗೆ ಬರ್ತ್ಡೇ ಸಂಭ್ರಮ
ಸಲಗ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಿರ್ದೇಶನದಲ್ಲಿ ದುನಿಯಾ ವಿಜಯ್ ಗೆದ್ದಿದ್ದಾರೆ.
‘ಸಲಗ’ ಸಿನಿಮಾ ನಿರ್ಮಾಣ ಮಾಡಿದ ಕೆ.ಪಿ. ಶ್ರೀಕಾಂತ್ಗೆ ಇಂದು ಜನ್ಮದಿನದ ಸಂಭ್ರಮ. ಸಿನಿಮಾ ಗೆದ್ದು ಬೀಗುತ್ತಿರುವ ಸಂದರ್ಭದಲ್ಲೇ ಅವರ ಜನ್ಮದಿನ ಬಂದಿದೆ. ಬಂಡಿಮಾಕಾಳಮ್ಮ ದೇವಸ್ಥಾನದಲ್ಲಿ ಅವರು ಹುಟ್ಟಹಬ್ಬ ಆಚರಿಸಿಕೊಂಡಿದ್ದಾರೆ.
ಸಲಗ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಿರ್ದೇಶನದಲ್ಲಿ ದುನಿಯಾ ವಿಜಯ್ ಗೆದ್ದಿದ್ದಾರೆ. ಈಗ ಸಿನಿಮಾ ಗೆದ್ದ ಖುಷಿಯಲ್ಲಿ ಚಿತ್ರತಂಡ ರಾಜ್ಯಾದ್ಯಂತ ಗೆಲುವಿನ ಯಾತ್ರೆ ಮಾಡಲಿದೆ.
‘ಸಲಗ’ ಚಿತ್ರದಲ್ಲಿ ಸಾಮ್ರಾಟ್ ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಡಾಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹಲವು ದೃಶ್ಯಗಳಲ್ಲಿ ಅವರು ಆವರಿಸಿಕೊಂಡಿದ್ದಾರೆ. ‘ಟಗರು’ ಬಳಿಕ ಅವರಿಗೆ ಮತ್ತೊಮ್ಮೆ ಭರ್ಜರಿ ಜನಮೆಚ್ಚುಗೆ ಸಿಕ್ಕಿದೆ. ದುನಿಯಾ ವಿಜಯ್ ಮತ್ತು ಡಾಲಿ ಧನಂಜಯ ಅವರ ಮುಖಾಮುಖಿ ದೃಶ್ಯಗಳು ‘ಸಲಗ’ ಸಿನಿಮಾದಲ್ಲಿ ರಾರಾಜಿಸಿವೆ.
ಇದನ್ನೂ ಓದಿ: ‘ಶಿವಣ್ಣ ಮತ್ತು ಅವರ ಕುಟುಂಬಕ್ಕೆ ನಾನು ಚಿರಋಣಿ’; ಸಲಗ ಗೆಲುವಿನಲ್ಲಿ ದುನಿಯಾ ವಿಜಯ್ ಧನ್ಯವಾದ