ರಾಯಚೂರಿನ ಮಾನ್ವಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೂವರು ಶಂಕಿತ ಡೆಂಘೀ ರೋಗಕ್ಕೆ ಬಲಿಯಾದ ಆರೋಪ, ಕುಟುಂಬಸ್ಥರ ಪ್ರತಿಭಟನೆ
ಮಾನ್ವಿಯ ಕ್ಯೂರ್ ಆಸ್ಪತ್ರೆಯ ವೈದ್ಯ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಒಂದೇ ಕುಟುಂಬದ ಮೂವರು ಶಂಕಿತ ಡೆಂಘೀ ರೋಗಕ್ಕೆ ಬಲಿಯಾದರೆಂದು ಮೃತ ಕುಟುಂಬದ ಸದಸ್ಯರು ಆರೋಪಿಸುತ್ತಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ಸಾವನ್ನಪ್ಪುವುದು, ನಂತರ ಮೃತರ ಕುಟುಂಬ ವರ್ಗದವರು ಆಸ್ಪತ್ರೆ, ಸಿಬ್ಬಂದಿ ಮತ್ತು ವೈದ್ಯನ ಮೇಲೆ ನಡೆಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ವಿನಾಕಾರಣ ವೈದ್ಯರನ್ನು ದೂಷಿಸಲಾಗುತ್ತದೆ. ಹಾಗಂತ ವೈದ್ಯರನ್ನು ವಹಿಸಿಕೊಂಡು ಮಾತಾಡುವ ಪ್ರಯತ್ನ ನಾವಿಲ್ಲಿ ಮಾಡುತ್ತಿಲ್ಲ. ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ದೃಶ್ಯ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ್ದು. ಇಲ್ಲಿನ ಕ್ಯೂರ್ ಆಸ್ಪತ್ರೆಯ ವೈದ್ಯ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಒಂದೇ ಕುಟುಂಬದ ಮೂವರು ಶಂಕಿತ ಡೆಂಘೀ ರೋಗಕ್ಕೆ ಬಲಿಯಾದರೆಂದು ಮೃತ ಕುಟುಂಬದ ಸದಸ್ಯರು ಆರೋಪಿಸುತ್ತಿದ್ದಾರೆ. ಅಸ್ಪತ್ರೆಯವರು ಏನು ಹೇಳಿದ್ದಾರೆ ಎನ್ನವುದು ಇನ್ನೂ ಬೆಳಕಿಗೆ ಬಂದಿಲ್ಲ. ಬುಧವಾರ ರಾತ್ರಿ ಕುಟುಂಬದ ಸದಸ್ಯರು, ಇನ್ನಿತರರು ಆಸ್ಪತ್ರೆ ಎದುರು ಘೇರಾಯಿಸಿ ಪ್ರತಿಭಟನೆ ನಡೆಸಿದರು. ವಿಡಿಯೋನಲ್ಲಿ ನೀವು ಆ ದೃಶ್ಯವನ್ನು ನೋಡಬಹುದಾಗಿದೆ.
ಮೃತರ ಕುಟುಂಬದ ಸದಸ್ಯರೊಬ್ಬರು ಮಾಧ್ಯಮದವರೊಂದಿಗೆ ಮಾತಾಡುವಾಗ, ಸಾವಿಗೀಡಾಗಿರುವ ಮೂರು ಜನರನ್ನು ಮೂರು ದಿನಗಳ ಹಿಂದಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಮೂರು ದಿನಗಳ ಚಿಕಿತ್ಸೆಯ ನಂತರವೂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದಾಗ ಆಸ್ಪತ್ರೆಯ ವೈದ್ಯ ಡಾ ಭಾನುಪ್ರಕಾಶ್, ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳುವ ಬದಲು ತಾವೇ ಚಿಕಿತ್ಸೆ ಮುಂದುವರಿಸಿದರು. ಕೊನೆಗೆ ಅವರ ರಕ್ತ ಪರಿಶೀಲನೆ ನಡೆಸಿದಾಗ ಪ್ಲೇಟ್ಲೆಟ್ಗಳ ಸಂಖ್ಯೆ ಬಹಳ ಕಮ್ಮಿಯಾಗಿತ್ತು. ಅವರನ್ನು ಒಂದೆರಡು ದಿನ ಮೊದಲೇ ರಾಯಚೂರಿಗೆ ಕರೆದುಕೊಂಡು ಹೋಗಿದ್ದರೆ ಬದುಕುತ್ತಿದ್ದರು, ಅದರೆ ವೈದ್ಯರ ನಿಷ್ಕಾಳಜಿ ಮತ್ತು ಉದಾಸೀನ ಧೋರಣೆಯಿಂದಾಗಿ ಅವರು ಮರಣವನ್ನಪ್ಪಿದರು ಅಂತ ಆರೋಪಿಸಿದರು.
ವೈದ್ಯ ಭಾನುಪ್ರಕಾಶ್ ಮತ್ತು ಅವರ ಸಿಬ್ಬಂದಿ ಮಾನ್ವಿಯಿಂದ ಪರಾರಿಯಾಗಿದ್ದಾರೆ. ಪ್ರಕರಣವು ಮಾನ್ವಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ದೂರನ್ನು ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದಿಲ್ಲ ಎಂದಿದ್ದಕ್ಕೆ ರೈಲಿನ ಕೆಳಗೆ ಕೂತು, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ

ಕಾಪು ಮಾರಿಗುಡಿ ದೇವಸ್ಥಾನಕ್ಕೆ ಕಂಗನಾ ಭೇಟಿ; ಬ್ರಹ್ಮಕಲಶೋತ್ಸವ ಕಾರ್ಯಕ್ರಮ

ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಅಶೋಕ

ಹಿಮಾನಿ ಶವವನ್ನು ಸೂಟ್ಕೇಸ್ನಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಪತ್ತೆ

ಮಹಿಳೆಯರ ಸ್ಫೂರ್ತಿದಾಯಕ ಪಯಣ ಹಂಚಿಕೊಳ್ಳಲು ಪ್ರಧಾನಿ ಮೋದಿ ಅವಕಾಶ
