ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದಿಲ್ಲ ಎಂದಿದ್ದಕ್ಕೆ ರೈಲಿನ ಕೆಳಗೆ ಕೂತು, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ

ಇದೇ ಅಕ್ಟೋಬರ್ 23 ರ ಮಧ್ಯಾಹ್ನ 4.30ಕ್ಕೆ ಮನೆ ಬಿಟ್ಟಿದ್ದ 16 ವರ್ಷದ ಬಾಲಕ, ರಾತ್ರಿ 7 ಗಂಟೆಗೆ ಹೊರಡುವ ಕೆಕೆ‌ ಎಕ್ಸ್​ಪ್ರೇಸ್​ ಟ್ರೈನ್ ಅಡಿ ಮಲಗಿದ್ದಾನೆ. ಬಳಿಕ ಅಲ್ಲಿಂದಲೇ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವಿಡಿಯೋದಲ್ಲಿ ತಂದೆ ಬೈಯಬಾರದಿತ್ತು ಎಂದು ಹೇಳಿರುವ ಬಾಲಕ, ಮಾಡಿದ ವಿಡಿಯೋವನ್ನು ತನ್ನ ಚಿಕ್ಕಪ್ಪನಿಗೆ ಕಳುಹಿಸಿದ್ದಾನೆ.

ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದಿಲ್ಲ ಎಂದಿದ್ದಕ್ಕೆ ರೈಲಿನ ಕೆಳಗೆ ಕೂತು, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ
ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದ ಟ್ರೈನ್ ಅನೌನ್ಸ್ ಮೆಂಟ್ ಸುಳಿವಿನಿಂದ ಬಾಲಕ ಪತ್ತೆ

ಬೆಂಗಳೂರು: ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆಯಲಿಲ್ಲ ಎಂದು ತಂದೆ ಬೈದ ಮಾತಿಗೆ ಬೇಸರಗೊಂಡ ಬಾಲಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಮಹಾದೇವಪುರದಲ್ಲಿ ನಡೆದಿದೆ. ತಂದೆ ಬೈದಿದಕ್ಕೆ ಬೇಸರಗೊಂಡ ಬಾಲಕ ರೈಲಿನ ಕೆಳಗೆ ಕೂತು, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಹದೇವಪುರದಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಬಾಲಕ, ಆ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದೇ ಅಕ್ಟೋಬರ್ 23 ರ ಮಧ್ಯಾಹ್ನ 4.30ಕ್ಕೆ ಮನೆ ಬಿಟ್ಟಿದ್ದ 16 ವರ್ಷದ ಬಾಲಕ, ರಾತ್ರಿ 7 ಗಂಟೆಗೆ ಹೊರಡುವ ಕೆಕೆ‌ ಎಕ್ಸ್​ಪ್ರೇಸ್​ ಟ್ರೈನ್ ಅಡಿ ಮಲಗಿದ್ದಾನೆ. ಬಳಿಕ ಅಲ್ಲಿಂದಲೇ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವಿಡಿಯೋದಲ್ಲಿ ತಂದೆ ಬೈಯಬಾರದಿತ್ತು ಎಂದು ಹೇಳಿರುವ ಬಾಲಕ, ಮಾಡಿದ ವಿಡಿಯೋವನ್ನು ತನ್ನ ಚಿಕ್ಕಪ್ಪನಿಗೆ ಕಳುಹಿಸಿದ್ದಾನೆ.

ಈ ವಿಡಿಯೋದಲ್ಲಿ ಕೆಎಸ್​ಆರ್​ ರೈಲ್ವೆ ನಿಲ್ದಾಣದ ಬಗ್ಗೆ ಅನೌನ್ಸ್​ಮೆಂಟ್ ಕೂಡ ರೆಕಾರ್ಡ್ ಆಗಿತ್ತು. ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದ ಟ್ರೈನ್ ಅನೌನ್ಸ್​ಮೆಂಟ್​ ಸುಳಿವಿನಿಂದ ಬಾಲಕ ಪತ್ತೆಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಮೆಜೆಸ್ಟಿಕ್ ರೆಲ್ವೆ ನಿಲ್ದಾಣಕ್ಕೆ ಬಾಲಕನ ಪೋಷಕರು ಆಗಮಿಸಿದ್ದಾರೆ. ಬಳಿಕ ಆರ್​ಪಿಎಫ್​ ತಂಡದ ಆಂಟಿ ಚೈಲ್ಡ್ ಟ್ರಾಫಕಿಂಗ್ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಕೆಕೆ ಎಕ್ಸ್​ಪ್ರೇಸ್​ ಟ್ರೈನ್ ಅಡಿ ಬಾಲಕ ಪತ್ತೆಯಾಗಿದ್ದಾನೆ. ಸದ್ಯ ಆತ್ಮಹತ್ಯೆಗೆ ಯತ್ನಿಸಿ, ರೈಲಿನ ಕೆಳಗೆ ಅವಿತಿದ್ದ ಬಾಲಕನ ರಕ್ಷಣೆ ಮಾಡಲಾಗಿದೆ. ಅಲ್ಲದೆ ಬಾಲಕನಿಗೆ ಬುದ್ಧಿವಾದ ಹೇಳಿ, ಪೋಷಕರಿಗೆ ಒಪ್ಪಿಸಲಾಗಿದೆ.

ಚಾಮರಾಜನಗರ: ಸಾಲಬಾಧೆ ತಾಳಲಾರದೆ ಯುವಕ ನೇಣಿಗೆ ಶರಣು
ಸಾಲಬಾಧೆ ತಾಳಲಾರದೆ ಯುವಕ ನೇಣಿಗೆ ಶರಣಾದ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿ ಬಳಿ ನಡೆದಿದೆ. ಬಂಗಾರು(26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್, ಜೂಜಾಟದಲ್ಲಿ ತೊಡಗಿದ್ದ ಬಂಗಾರು, ಚಾಮರಾಜನಗರ ಪಟ್ಟಣದ ಸೋಮುವಾರಪೇಟೆ ಬಳಿಯ ಹೊರ ವಲಯದಲ್ಲಿ ಇರುವ ಮಾಳದಲ್ಲಿ ನೇಣಿಗೆ ಶರಣಾಗಿದ್ದಾರೆ. ಮದ್ಯಪಾನ ಮಾಡಿ ಮನೆಗೆ ಹೋಗುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ನನ್ನ ಬಲಿದಾನ ದಾರಿ ದೀಪವಾಗಲಿ’, ಅಂತ್ಯಸಂಸ್ಕಾರಕ್ಕೆ ಸಿಎಂ ಬೊಮ್ಮಾಯಿ ಬರಬೇಕು; ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ಕಲಬುರಗಿಯಲ್ಲಿ ಇಬ್ಬರು ಮಕ್ಕಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ತಾಯಿ ಆತ್ಮಹತ್ಯೆ; ಪುತ್ರಿ ಸಾವು, ಪುತ್ರ ಬಚಾವು

Click on your DTH Provider to Add TV9 Kannada