AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರಿನ ಟ್ರಿಪ್ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ವಂಚಕ ಅರೆಸ್ಟ್, ಮತ್ತೊಂದೆಡೆ ನಕಲಿ ನೋಟು ಜೆರಾಕ್ಸ್ ಮಾಡಿ ವಂಚಿಸುತ್ತಿದ್ದ 7 ಜನರ ಸೆರೆ

ಆರೋಪಿ ಪ್ರಶಾಂತ್ ಫಾರಿನ ಟ್ರಿಪ್ ಹೆಸರಲ್ಲಿ ಜನರನ್ನು ಸೆಳೆದು ಮೋಸ ಮಾಡುತ್ತಿದ್ದ. ಬಳಿಕ ಚೈನ್ ಲಿಂಕ್ ನಲ್ಲಿ ಬೇರೆಯವರನ್ನು ಕಂಪನಿಗೆ ಸೇರಿಸುವಂತೆ ಬೇಡಿಕೆ ಇಡುತಿದ್ದ. ಹೊಸದಾಗಿ ಸೇರಿಸಿದ್ರೆ ಅವರ ಲಾಭದಲ್ಲಿ 25% ಹಣ ನೀಡುವುದಾಗಿ ನಂಬಿಸುತಿದ್ದ.

ಫಾರಿನ ಟ್ರಿಪ್ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ವಂಚಕ ಅರೆಸ್ಟ್, ಮತ್ತೊಂದೆಡೆ ನಕಲಿ ನೋಟು ಜೆರಾಕ್ಸ್ ಮಾಡಿ ವಂಚಿಸುತ್ತಿದ್ದ 7 ಜನರ ಸೆರೆ
Royal Dream to fly pvt Ltd ಎಂಬ ಕಂಪನಿ ಹೆಸರಿನಲ್ಲಿ ಜನರಿಗೆ ವಂಚನೆ
TV9 Web
| Updated By: ಆಯೇಷಾ ಬಾನು|

Updated on:Oct 26, 2021 | 4:47 PM

Share

ಬೆಂಗಳೂರು: Royal Dream to fly pvt Ltd ಎಂಬ ಕಂಪನಿ ಹೆಸರಿನಲ್ಲಿ ಜನರಿಗೆ ವಂಚನೆ ಮಾಡ್ತಿದ್ದ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ಬಿ ಬಂಧಿತ ಅರೋಪಿ. ಈತ ರಾಯಲ್ ಡ್ರೀಮ್ ಟು ಫ್ಲೈ ಪ್ರೈ.ಲಿ ಕಂಪನಿ ಮೂಲಕ ಜನರಿಗೆ ವಿಧ ವಿಧದ ಆಸೆ, ಆಮಿಷ ತೋರಿಸಿ ವಂಚಿಸುತಿದ್ದ.

ಆರೋಪಿ ಪ್ರಶಾಂತ್ ಫಾರಿನ ಟ್ರಿಪ್ ಹೆಸರಲ್ಲಿ ಜನರನ್ನು ಸೆಳೆದು ಮೋಸ ಮಾಡುತ್ತಿದ್ದ. ಬಳಿಕ ಚೈನ್ ಲಿಂಕ್ ನಲ್ಲಿ ಬೇರೆಯವರನ್ನು ಕಂಪನಿಗೆ ಸೇರಿಸುವಂತೆ ಬೇಡಿಕೆ ಇಡುತಿದ್ದ. ಹೊಸದಾಗಿ ಸೇರಿಸಿದ್ರೆ ಅವರ ಲಾಭದಲ್ಲಿ 25% ಹಣ ನೀಡುವುದಾಗಿ ನಂಬಿಸುತಿದ್ದ. ಬಳಿಕ ಯಾವುದೆ ಹಣ ನೀಡದೆ ಟ್ರಿಪ್ ಸಹ ಕರೆದುಕೊಂಡು ಹೋಗದೆ ವಂಚಿಸುತಿದ್ದ. ಸದ್ಯ ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನಕಲಿ ನೋಟು ಜೆರಾಕ್ಸ್ ಮಾಡಿ ವಂಚಿಸುತ್ತಿದ್ದ 7 ಜನರ ಸೆರೆ ಇನ್ನು ಮತ್ತೊಂದು ಕಡೆ ನಕಲಿ ನೋಟು ಜೆರಾಕ್ಸ್ ಮಾಡಿ ವಂಚಿಸುತ್ತಿದ್ದ 7 ಜನರನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಷೇಧಿತ ನೋಟು ಬದಲಾವಣೆ ಮಾಡುತ್ತೇವೆಂದು ಹೇಳಿ ಈ ಆರೋಪಿಗಳು ಮೋಸ ಮಾಡುತ್ತಿದ್ದರು. ನಿಷೇಧಿತ ₹1000 ಮುಖಬೆಲೆಯ ನೋಟುಗಳ ಜೆರಾಕ್ಸ್ ಮಾಡಿ ವಂಚಿಸುತ್ತಿದ್ದರು. 5 ಕೋಟಿ ರೂ. ಮುಖಬೆಲೆಯ ನಕಲಿ ನೋಟುಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮೊದಲಿಗೆ 35 ಲಕ್ಷ ನಿಷೇಧಿತ ನೋಟು ತಂದು ಬ್ಲಾಕ್ ಅಂಡ್ ವೈಟ್ ಮಾಡಿ ವಂಚನೆಗೆ ಯತ್ನಿಸಿದ್ದಾರೆ. ಈ ವೇಳೆ ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ 1000, 500 ಮುಖಬೆಲೆಯ 70 ಲಕ್ಷ ನಿಷೇಧಿತ ನೋಟು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಗಳ ವಿಚಾರಣೆ ವೇಳೆ ಮತ್ತಷ್ಟು ಮಾಹಿತಿ ಬಹಿರಂಗವಾಗಿದ್ದು ಕಾಸರಗೋಡಿನಲ್ಲಿ ಉಳಿದ ನಕಲಿ ನೋಟು ಇಟ್ಟಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಕಾಸರಗೋಡಿಗೆ ಹೋದಾಗ 5 ಕೋಟಿ ಜೆರಾಕ್ಸ್ ನೋಟು ಪತ್ತೆಯಾಗಿವೆ. ಅಲ್ಲದೇ ಪೊಲೀಸರು 16 ಮೂಟೆ ಪೇಪರ್ ವಶಕ್ಕೆ ಪಡೆದಿದ್ದಾರೆ. ಮಂಜುನಾಥ್, ದಯಾನಂದ ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಸ್ಟಾರ್​ ನಟಿ ತಮನ್ನಾಗೆ ಸಂಭಾವನೆ ಕೊಡದೆ ಮೋಸ; ಹೀಗಾದ್ರೆ ಉಳಿದವರ ಕಥೆ ಏನು?

Published On - 1:38 pm, Tue, 26 October 21