AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್​ ನಟಿ ತಮನ್ನಾಗೆ ಸಂಭಾವನೆ ಕೊಡದೆ ಮೋಸ; ಹೀಗಾದ್ರೆ ಉಳಿದವರ ಕಥೆ ಏನು?

ತೆಲುಗಿನ ಜನಪ್ರಿಯ ವಾಹಿನಿ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಡುಗೆ ಶೋ ‘ಮಾಸ್ಟರ್​ ಶೆಫ್’​ಅನ್ನು ತಮನ್ನಾ ನಡೆಸಿಕೊಡುತ್ತಿದ್ದರು. ಈ ಶೋ ನಿರೂಪಣೆಗೆ ತಮನ್ನಾ ಕೋಟಿ ಮೊತ್ತದ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.

ಸ್ಟಾರ್​ ನಟಿ ತಮನ್ನಾಗೆ ಸಂಭಾವನೆ ಕೊಡದೆ ಮೋಸ; ಹೀಗಾದ್ರೆ ಉಳಿದವರ ಕಥೆ ಏನು?
ತಮನ್ನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 25, 2021 | 3:10 PM

ನಟಿ ತಮನ್ನಾ ಭಾಟಿಯಾಗೆ ದೇಶಾದ್ಯಂತ ಫ್ಯಾನ್ಸ್​ ಇದ್ದಾರೆ. ಅವರ ಮೈಮಾಟ ಹಾಗೂ ನಟನೆಗೆ ಫಿದಾ ಆಗದವರೇ ಇಲ್ಲ. ಹಲವು ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ತಮನ್ನಾಗೆ ಇದೆ. ಇಷ್ಟೊಂದು ಸ್ಟಾರ್ ಗಿರಿ ಇಟ್ಟುಕೊಂಡ ಹೊರತಾಗಿಯೂ ಅವರಿಗೆ ಮೋಸ ಆಗಿದೆ. ಈ ಕುರಿತಂತೆ ಅವರು ಕೋರ್ಟ್​ ಮೆಟ್ಟಿಲು ಹತ್ತೋಕೆ ನಿರ್ಧರಿಸಿದ್ದಾರೆ.

ತೆಲುಗಿನ ಜನಪ್ರಿಯ ವಾಹಿನಿ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಡುಗೆ ಶೋ ‘ಮಾಸ್ಟರ್​ ಶೆಫ್’​ಅನ್ನು ತಮನ್ನಾ ನಡೆಸಿಕೊಡುತ್ತಿದ್ದರು. ಈ ಶೋ ನಿರೂಪಣೆಗೆ ತಮನ್ನಾ ಕೋಟಿ ಮೊತ್ತದ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಈಗ ಅವರಿಗೆ ಸಂಭಾವನೆ ಸರಿಯಾಗಿ ಸಿಕ್ಕಿಲ್ಲ. ಇದರ ಜತೆಗೆ ಸೆಟ್​ನಲ್ಲಿ ಅವರ ಜತೆಗೆ ಯಾರೂ ಸರಿಯಾಗಿ ನಡೆದುಕೊಂಡಿಲ್ಲ. ಈ ಕಾರಣಕ್ಕೆ ಅವರು ಕೋರ್ಟ್​ ಮೆಟ್ಟಿಲು ಹತ್ತುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಆಗಸ್ಟ್​ 27ರಂದು ಈ ಶೋ ಆರಂಭಗೊಂಡಿತ್ತು. 20ಕ್ಕೂ ಹೆಚ್ಚು ಎಪಿಸೋಡ್​ಗಳಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಆದರೆ, ಈಗ ವಾಹಿನಿಯವರು ತಮನ್ನಾಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ. ಇನ್ನು, ಅವರಿಗೆ ಬರಬೇಕಾದ ಸಂಭಾವನೆ ಕೂಡ ಬಂದಿಲ್ಲ. ಈ ಎಲ್ಲಾ ಕಾರಣಕ್ಕೆ ಅವರು ಶೋನಿಂದ ಹೊರ ಬಂದಿದ್ದಾರೆ. ಖ್ಯಾತ ಆ್ಯಂಕರ್​ ಅನುಸೂಯಾ ಭಾರದ್ವಾಜ್​ ಈ ಶೋ ಮುನ್ನಡೆಸಿಕೊಡುತ್ತಿದ್ದಾರೆ. ಸ್ಟಾರ್​ ನಟಿಗೆ ಈ ರೀತಿ ಮೋಸ ಆದರೆ, ಯುವ ಕಲಾವಿದರ ಕಥೆ ಏನು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಹಿಂದಿಯಲ್ಲಿ ತೆರೆಗೆ ಬಂದಿದ್ದ ಸೂಪರ್​ ಹಿಟ್​ ಚಿತ್ರ ‘ಅಂಧಾಧುನ್​’ ಸಿನಿಮಾದ ತೆಲುಗು ರಿಮೇಕ್​ನಲ್ಲಿ ತಮನ್ನಾ ನಟಿಸಿದ್ದರು. ಈ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಹಿಂದಿಯಲ್ಲಿ ಟಬು ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ತಮನ್ನಾ ಮಾಡಿದ್ದರು. ರಾಧಿಕಾ ಆಪ್ಟೆ ಮಾಡಿದ ಪಾತ್ರಕ್ಕೆ ನಭಾ ನಟೇಶ್​ ಜೀವ ತುಂಬಿದ್ದರು. ​ ಆಯುಷ್ಮಾನ್​ ಖುರಾನಾ ಮಾಡಿದ ಪಾತ್ರದಲ್ಲಿ ನಿತೀನ್ ಕಾಣಿಸಿಕೊಂಡಿದ್ದರು. ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿಲ್ಲ. ತಮನ್ನಾ ಸದ್ಯ, ‘ಎಫ್​3: ಫನ್​ ಆ್ಯಂಡ್​ ಫ್ರಸ್ಟ್ರೇಷನ್​’  ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನಿಲ್​ ರವಿಪುಡಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಬೆತ್ತಲೆ ದೃಶ್ಯವನ್ನು ಏಳು ಬಾರಿ ಶೂಟ್​ ಮಾಡಿಸಿದ್ದರು, ನಾನು ನೆಲದಮೇಲೆ ಬಿಕ್ಕಿಬಿಕ್ಕಿ ಅತ್ತಿದೆ’; ಕುಬ್ರಾ ಸೇಠ್​

ಆರ್ಯನ್​ ಖಾನ್​ ವಿರುದ್ಧದ ತನಿಖೆಗೆ ತೊಂದರೆ ಕೊಡುವವರಿಗೆ ಪಾಠ ಕಲಿಸೋಕೆ ಮುಂದಾದ ಸಮೀರ್​ ವಾಂಖೆಡೆ

ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ