‘ಬೆತ್ತಲೆ ದೃಶ್ಯವನ್ನು ಏಳು ಬಾರಿ ಶೂಟ್​ ಮಾಡಿಸಿದ್ದರು, ನಾನು ನೆಲದಮೇಲೆ ಬಿಕ್ಕಿಬಿಕ್ಕಿ ಅತ್ತಿದೆ’; ಕುಬ್ರಾ ಸೇಠ್​

TV9kannada Web Team

TV9kannada Web Team | Edited By: Rajesh Duggumane

Updated on: Oct 24, 2021 | 10:08 PM

‘ಸೇಕ್ರೆಡ್​ ಗೇಮ್ಸ್​’ ವೆಬ್​ ಸರಣಿಯಲ್ಲಿ ಕುಬ್ರಾ ಸೇಠ್​ ಮಾಡಿದ್ದ ಕುಕೂ ಎಂಬ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್​ ಸೀರಿಸ್​ನಲ್ಲಿ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.

‘ಬೆತ್ತಲೆ ದೃಶ್ಯವನ್ನು ಏಳು ಬಾರಿ ಶೂಟ್​ ಮಾಡಿಸಿದ್ದರು, ನಾನು ನೆಲದಮೇಲೆ ಬಿಕ್ಕಿಬಿಕ್ಕಿ ಅತ್ತಿದೆ’; ಕುಬ್ರಾ ಸೇಠ್​
ಕುಬ್ರಾ ಸೇಠ್​

ನಟ, ಆ್ಯಂಕರ್​ ಹಾಗೂ ಆರ್​ಸಿಬಿ ಇನ್​ಸೈಡರ್​ ದ್ಯಾನಿಶ್ ಸೇಠ್​ ಸಹೋದರಿ ಕುಬ್ರಾ ಸೇಠ್​ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವೆಬ್​ ಸೀರಿಸ್​ನಲ್ಲಿ ಮಿಂಚಿರುವ ಅವರಿಗೆ ಹಾಲಿವುಡ್​ನಿಂದಲೂ ಆಫರ್​ ಇದೆ. ಈಗ ಅವರು ಹಳೆಯ ಘಟನೆ ಒಂದನ್ನು ನೆನಪು ಮಾಡಿಕೊಂಡಿದ್ದಾರೆ. ಈ ಘಟನೆ ಬಗ್ಗೆ ವಿವರಿಸುವಾಗ ಅವರು ಭಾವುಕರಾಗಿದ್ದರು.

‘ಸೇಕ್ರೆಡ್​ ಗೇಮ್ಸ್​’ ವೆಬ್​ ಸರಣಿಯಲ್ಲಿ ಕುಬ್ರಾ ಸೇಠ್​ ಮಾಡಿದ್ದ ಕುಕೂ ಎಂಬ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್​ ಸೀರಿಸ್​ನಲ್ಲಿ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಕೂಡ ಎಲ್ಲರ ಗಮನ ಸೆಳೆದಿತ್ತು. ಆದರೆ, ಈ ದೃಶ್ಯ ಶೂಟ್​ ಮಾಡುವಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ . ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿ

ಗಣೇಶ್​ ಕಾಯ್ತೊಂಡೆಗೆ (ನವಾಜುದ್ದೀನ್​ ಸಿದ್ಧಕಿ) ಕೂಕು (ಕುಬ್ರಾ ಸೇಟ್​​) ಮೇಲೆ ಪ್ರೀತಿ ಮೂಡುತ್ತದೆ. ಇಬ್ಬರೂ ಒಂದೆಡೆ ಸೇರುತ್ತಾರೆ. ಈ ವೇಳೆ ಇಬ್ಬರ ನಡುವೆ ಇಂಟಿಮೇಟ್​ ದೃಶ್ಯಗಳಿವೆ. ಇಬ್ಬರ ನಡುವೆ ಮೊಳೆತ ಪ್ರೀತಿಯನ್ನು ವ್ಯಕ್ತಪಡಿಸಲು ಈ ದೃಶ್ಯದ ಅವಶ್ಯಕತೆ ಇತ್ತು. ಆದರೆ, ಇದನ್ನು ಶೂಟ್​ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಈ ದೃಶ್ಯದ ಶೂಟ್​ ಮಾಡುವಾಗ ಬರೋಬ್ಬರಿ ಏಳು ಟೇಕ್​ ತೆಗೆದುಕೊಳ್ಳಲಾಗಿತ್ತು. ಇದರಿಂದ ಕುಬ್ರಾ ಆಘಾತಕ್ಕೆ ಒಳಗಾಗಿದ್ದರು. ಅಲ್ಲದೆ, ನೆಲದ ಮೇಲೆ ಬಿಕ್ಕಿಬಿಕ್ಕಿ ಅತ್ತಿದ್ದರು.

‘ಆ ದೃಶ್ಯವನ್ನು ಆರು ಬಾರಿ ಶೂಟ್​ ಮಾಡಲಾಗಿತ್ತು. ಆದರೆ, ನಿರ್ದೇಶಕರಿಗೆ ಆ ಬಗ್ಗೆ ಖುಷಿ ಇರಲಿಲ್ಲ. ಏಳನೇ ಬಾರಿಗೆ ಶೂಟ್​ ಮಾಡಿ ಮುಗಿಸಿದೆ. ನಂತರ ನಾನು ನೆಲದಮೇಲೆ ಮಲಗಿಕೊಂಡು ಬಿಕ್ಕಿಬಿಕ್ಕಿ ಅತ್ತೆ. ನಾನು ತುಂಬಾನೇ ಎಮೋಷನಲ್​ ಆಗಿದ್ದೆ.  ನಿರ್ದೇಶಕರು ಬಂದು ನೀವು ಹೊರಗೆ ಕಾಯಬಹುದು ಎಂದರು. ಆಗ ನನ್ನ ದೃಶ್ಯದ ಶೂಟ್​ ಮುಗಿದಿದೆ ಎಂಬುದು ಖಚಿತವಾಗಿತ್ತು.  ಆದಾಗ್ಯೂ ನಾನು ನೆಲದ ಮೇಲೆ ಮಲಗಿಕೊಂಡು ಅಳುತ್ತಲೇ ಇದ್ದೆ. ಆಗ ನವಾಜುದ್ದೀನ್​ ಸಿದ್ಧಕಿ ಬಂದು, ನೀವು ಹೊರ ಹೋಗಬಹುದು. ನನ್ನ ದೃಶ್ಯದ ಶೂಟಿಂಗ್​ ಇದೆ ಎಂದಿದ್ದರು’  ಎಂದು ಹಳೆಯ ಘಟನೆ ವಿವರಿಸಿದ್ದಾರೆ ಅವರು.

‘ಸೇಕ್ರೆಡ್​ ಗೇಮ್ಸ್​’ ಎರಡು ಸೀಸನ್​ ಪ್ರಸಾರವಾಗಿದೆ. ನೆಟ್​ಫ್ಲಿಕ್ಸ್​ನಲ್ಲಿ ಇದು ಪ್ರಸಾರವಾಗಿದೆ. ಅನುರಾಗ್ ಕಶ್ಯಪ್​, ವಿಕ್ರಮಾದಿತ್ಯ ಮೋಟ್ವಾನೆ, ನೀರಜ್​ ಗಾಯ್ವನ್​ ಇದನ್ನು ನಿರ್ದೇಶಿಸಿದ್ದಾರೆ. ಸೈಫ್​ ಅಲಿ ಖಾನ್​ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ಗೆ ‘ಫೌಂಡೇಶನ್​’ ಅವಕಾಶ; ಹಾಲಿವುಡ್​ ಕಲಾವಿದರ ಜತೆ ನಟನೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada