AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಟ್ಟೆ ಧರಿಸದೇ ರಸ್ತೆಗೆ ಬಂದ್ರಾ ಶಾಹಿದ್​ ಕಪೂರ್​ ಪತ್ನಿ ಮೀರಾ ರಜಪೂತ್​? ನೆಟ್ಟಿಗರಿಂದ ವ್ಯಂಗ್ಯದ ಪ್ರಶ್ನೆ

ಶಾಹಿದ್​ ಕಪೂರ್ ಮತ್ತು ಮೀರಾ ರಜಪೂತ್​ ಅವರು ಮಾಲ್ಡೀವ್ಸ್​ ಪ್ರವಾಸಕ್ಕೆ ಹೋಗಿದ್ದರು. ವಾಪಸ್​ ಬರುವಾಗ ಮುಂಬೈ ಏರ್​ಪೋರ್ಟ್​ನಲ್ಲಿ ಮೀರಾ ಧರಿಸಿದ್ದ ಡ್ರೆಸ್​ ಎಲ್ಲರ ಕಣ್ಣು ಕುಕ್ಕಿದೆ. ಅದು ಟ್ರೋಲ್​ಗೆ ಕಾರಣ ಆಗಿದೆ.​

ಬಟ್ಟೆ ಧರಿಸದೇ ರಸ್ತೆಗೆ ಬಂದ್ರಾ ಶಾಹಿದ್​ ಕಪೂರ್​ ಪತ್ನಿ ಮೀರಾ ರಜಪೂತ್​? ನೆಟ್ಟಿಗರಿಂದ ವ್ಯಂಗ್ಯದ ಪ್ರಶ್ನೆ
ಮೀರಾ ರಜಪೂತ್, ಶಾಹಿದ್ ಕಪೂರ್
TV9 Web
| Edited By: |

Updated on: Oct 25, 2021 | 3:47 PM

Share

ಬಾಲಿವುಡ್​ನ ಖ್ಯಾತ ನಟ ಶಾಹಿದ್​ ಕಪೂರ್​ ಅವರ ಪತ್ನಿ ಮೀರಾ ರಜಪೂತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ. ಅದಕ್ಕೆಲ್ಲ ಕಾರಣ ಅವರು ಧರಿಸಿರುವ ಬಟ್ಟೆ. ಯಾವ ರೀತಿಯ ಬಟ್ಟೆ ಧರಿಸಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಸೆಲೆಬ್ರಿಟಿಗಳು ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ. ಮೀರಾ ರಜಪೂತ್​ ಅವರು ಇತ್ತೀಚೆಗೆ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ರೀತಿಗೆ ಎಲ್ಲರೂ ಬೆರಗಾಗಿದ್ದಾರೆ. ಒಂದು ವರ್ಗದ ನೆಟ್ಟಿಗರು ತುಂಬ ವ್ಯಂಗ್ಯವಾಗಿ ಕಾಲೆಳೆಯುತ್ತಿದ್ದಾರೆ.

ಇಬ್ಬರು ಮಕ್ಕಳ ತಾಯಿ ಮೀರಾ ರಜಪೂತ್​. ಅವರು ಚಿತ್ರರಂಗಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಿದೆಯಾದರೂ ಅದು ನಿಜವಾಗಿಲ್ಲ. ನೋಡಲು ಹೀರೋಯಿನ್​ ರೀತಿಯೇ ಸುಂದರವಾಗಿರುವ ಮೀರಾ ಅವರು ಗ್ಲಾಮರಸ್​ ಫೋಟೋಶೂಟ್​ಗಳ ಮೂಲಕ ಮಿಂಚುತ್ತಾರೆ. ಈ ನಡುವೆ ವಿಮಾನ ನಿಲ್ದಾಣದಲ್ಲಿ ಹಾಟ್​ ಆಗಿ ಕಾಣಿಸಿಕೊಂಡಿದ್ದನ್ನು ಜನರು ಯಾಕೋ ಸಹಿಸುತ್ತಿಲ್ಲ.

ಇಬ್ಬರು ಮಕ್ಕಳನ್ನು ಕರೆದುಕೊಂಡು ಶಾಹಿದ್​ ಕಪೂರ್​ ಮತ್ತು ಮೀರಾ ರಜಪೂತ್​ ಅವರು ಮಾಲ್ಡೀವ್ಸ್​ ಪ್ರವಾಸಕ್ಕೆ ಹೋಗಿದ್ದರು. ಇತ್ತೀಚೆಗೆ ಅವರು ಪ್ರವಾಸ ಮುಗಿಸಿ ಬಂದಿದ್ದಾರೆ. ವಾಪಸ್​ ಬರುವಾಗ ಪಾಪರಾಜಿಗಳು ಮುಂಬೈ ಏರ್​ಪೋರ್ಟ್​ನಲ್ಲಿ ಅವರ ಫೋಟೋ ಮತ್ತು ವಿಡಿಯೋ ಸೆರೆ ಹಿಡಿದಿದ್ದಾರೆ. ಅದರಲ್ಲಿ ಮೀರಾ ಧರಿಸಿರುವ ಡ್ರೆಸ್​ ಹೈಲೈಟ್​ ಆಗಿದೆ.

ಮೀರಾ ಅವರು ಪ್ಯಾಂಟ್​ ಬದಲಿಗೆ ಅತಿ ಚಿಕ್ಕ ಶಾರ್ಟ್ಸ್​ ಧರಿಸಿರುವುದು ಟ್ರೋಲಿಗರ ಕಣ್ಣು ಕುಕ್ಕುತ್ತಿದೆ. ಅದನ್ನು ಕಂಡು ಬಗೆಬಗೆಯಲ್ಲಿ ಕಮೆಂಟ್​ ಮಾಡಲಾಗುತ್ತಿದೆ. ‘ಅವರು ಏನು ಧರಿಸಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಅವರಿಗೆ ಹುಚ್ಚು ಹಿಡಿದಿದೆ ಎನಿಸುತ್ತದೆ’ ಎಂದು ವ್ಯಕ್ತಿಯೊಬ್ಬರು ಖಾರವಾಗಿ ಕಮೆಂಟ್​ ಮಾಡಿದ್ದಾರೆ. ‘ಮೀರಾ ಯಾಕೆ ಬೆತ್ತಲಾಗಿ ಬರುತ್ತಿದ್ದಾರೆ? ಬಟ್ಟೆ ಹಾಕುವುದನ್ನು ಮರೆತು ಅವರು ರಸ್ತೆಗೆ ಬಂದಿರಬಹುದು. ಇಷ್ಟೆಲ್ಲ ಹಣ ಗಳಿಸುವವರು ಒಳ್ಳೆಯ ಬಟ್ಟೆ ಯಾಕೆ ಕೊಂಡುಕೊಳ್ಳುವುದಿಲ್ಲ? ಇದೆಲ್ಲ ಪ್ರಚಾರದ ಗಿಮಿಕ್​ ಇದಕ್ಕಾಗಿ ಒಂದು ವಾರದಿಂದ ಪ್ಲ್ಯಾನ್​ ಮಾಡಿರುತ್ತಾರೆ’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

2015ರ ಜುಲೈ 7ರಂದು ಶಾಹಿದ್​ ಕಪೂರ್​ ಮತ್ತು ಮೀರಾ ರಜಪೂತ್​ ಮದುವೆಯಾದರು. ಈ ಜೋಡಿಗೆ ಮಿಶಾ ಮತ್ತು ಝೈನ್​ ಎಂಬಿಬ್ಬರು ಮಕ್ಕಳಿದ್ದಾರೆ. ನಿರ್ದೇಶಕರಾದ ರಾಜ್ ಮತ್ತು ಡಿಕೆ ಅವರ ಹೊಸ ವೆಬ್​ ಸರಣಿಯಲ್ಲಿ ಶಾಹಿದ್​ ಕಪೂರ್​ ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಅಮಿತ್​ ಶಾಗೆ ಬರ್ತ್​ಡೇ ವಿಶ್​ ಮಾಡಿ ಟ್ರೋಲ್​ ಆದ ಸಾರಾ ಅಲಿ ಖಾನ್​; ಇದರ ಹಿಂದಿದೆ ಡ್ರಗ್​ ವಿಚಾರ

‘ದುಡ್ಡಿಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಆ ಕೆಲಸ ಮಾಡಿದೆ; ನಂತರ ಅದೇ ಜೀವನ ಆಯ್ತು’: ಮಲೈಕಾ ಅರೋರಾ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್