ಅಕ್ರಮ ಹಣ ವರ್ಗಾವಣೆ ಪ್ರಕರಣದ ಕಿಂಗ್ ಪಿನ್ ಜತೆ ‘ವಿಕ್ರಾಂತ್ ರೋಣ’ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಡೇಟಿಂಗ್?
ಸುಕೇಶ್ ಪರ ಅನಂತ್ ಮಲ್ಲಿಕ್ ಹೆಸರಿನ ವಕೀಲರು ವಾದ ಮಂಡಿಸುತ್ತಿದ್ದಾರೆ. ಅವರು ಜಾಕ್ವೆಲಿನ್ ಬಗ್ಗೆ ಆರೋಪ ಒಂದನ್ನು ಮಾಡಿದ್ದಾರೆ. ಈ ಹೇಳಿಕೆ ಸೆನ್ಸೇಶನ್ ಸೃಷ್ಟಿ ಮಾಡಿದೆ.
ಉದ್ಯಮಿಗಳಿಗೆ 200 ಕೋಟಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕರಣದ ಕಿಂಗ್ಪಿನ್ ಸುಕೇಶ್ ಚಂದ್ರಶೇಖರ್ ಲಿಂಕ ಹೊಂದಿದ್ದರು ಎನ್ನಲಾಗಿದೆ. ಹೀಗಿರುವಾಗಲೇ ಶಾಕಿಂಗ್ ಹೇಳಿಕೆ ಹೊರ ಬಿದ್ದಿದೆ.
ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸುಕೇಶ್ ಚಂದ್ರಶೇಖರ್ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಮೇಲೂ ಅನುಮಾನ ಮೂಡಿದೆ. ಜಾಕ್ವೆಲಿನ್ ಫರ್ನಾಂಡಿಸ್ ಜತೆ ಮುಖ್ಯ ಆರೋಪಿ ಸುಕೇಶ್ ಚಂದ್ರಶೇಖರ್ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು? 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಕೈವಾಡ ಇದೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಈ ಮಧ್ಯೆ ಅವರ ವಿರುದ್ಧ ಸ್ಫೋಟಕ ಆರೋಪ ಕೇಳಿ ಬಂದಿದೆ.
ಸುಕೇಶ್ ಪರ ವಕೀಲ ಅನಂತ್ ಮಲ್ಲಿಕ್ ವಾದ ಮಂಡಿಸುತ್ತಿದ್ದಾರೆ. ಅವರು ಜಾಕ್ವೆಲಿನ್ ಬಗ್ಗೆ ಆರೋಪ ಒಂದನ್ನು ಮಾಡಿದ್ದಾರೆ. ‘ಜಾಕ್ವಲಿನ್ ಅವರು ಸುಕೇಶ್ ಜತೆ ಡೇಟಿಂಗ್ ನಡೆಸುತ್ತಿದ್ದರು’ ಎಂದಿದ್ದಾರೆ. ಈ ಹೇಳಿಕೆ ಸೆನ್ಸೇಶನ್ ಸೃಷ್ಟಿ ಮಾಡಿದೆ. ಆದರೆ, ಇದನ್ನು ಜಾಕ್ವಲಿನ್ ಅಲ್ಲಗಳೆದಿದ್ದಾರೆ.
ಸುಕೇಶ್ ಅವರನ್ನು ಶನಿವಾರ ದೆಹಲಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಅವರು ನೋರಾ ವಿರುದ್ಧ ಆರೋಪ ಮಾಡಿದ್ದರು. ‘ನೋರಾಗೆ ನಾನು ಕಾರನ್ನು ಉಡುಗೊರೆಯಾಗಿ ನೀಡಿದ್ದೇನೆ. ನೀವೇಕೆ ಅವರನ್ನು ಪ್ರಶ್ನಿಸುವುದಿಲ್ಲ’ ಎಂದು ಕೇಳಿದ್ದಾರೆ. ಈ ಹೇಳಿಕೆಯಿಂದ ನಟಿಗೆ ಸಾಕಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸುಕೇಶ್ ಚಂದ್ರಶೇಖರ್ ವಿರುದ್ಧ ವಂಚನೆ ಆರೋಪ ಇದೆ. ಹೀಗಾಗಿ, ಒಡೆತನದಲ್ಲಿ ಇದ್ದ ಚೆನ್ನೈನ ಬಂಗಲೆ, 82 ಲಕ್ಷ ರೂ. ಹಣ ಹಾಗೂ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ನೋರಾ ಫತೇಹಿಗೆ ಗಿಫ್ಟ್ ಆಗಿ ಸಿಕ್ಕಿತ್ತು ಐಷಾರಾಮಿ ಕಾರು; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿಗೆ ಸಂಕಷ್ಟ
Published On - 7:27 pm, Sun, 24 October 21