AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Antim Movie Trailer: ‘ಅಂತಿಮ್’​ ಟ್ರೇಲರ್​ನಲ್ಲಿ ಪೊಲೀಸ್​ ಆಗಿ ಮಿಂಚಿದ ಸಲ್ಮಾನ್​ ಖಾನ್​; ಸಲ್ಲು ಲುಕ್​ಗೆ ಫ್ಯಾನ್ಸ್​ ಫಿದಾ

Antim The Final Truth: ಆಯುಶ್​ ಶರ್ಮಾ ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಂಡರೆ, ಸಲ್ಲು ಸಿಖ್​ ಪೊಲೀಸ್​ ಆಗಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂದು ರಿಲೀಸ್​ ಆದ ಟ್ರೇಲರ್ ಸಿನಿಮಾ ಬಗ್ಗೆ ಭರವಸೆ ಮೂಡಿಸುವಂತೆ ಮಾಡಿದೆ.

Antim Movie Trailer: ‘ಅಂತಿಮ್’​ ಟ್ರೇಲರ್​ನಲ್ಲಿ ಪೊಲೀಸ್​ ಆಗಿ ಮಿಂಚಿದ ಸಲ್ಮಾನ್​ ಖಾನ್​; ಸಲ್ಲು ಲುಕ್​ಗೆ ಫ್ಯಾನ್ಸ್​ ಫಿದಾ
ಸಲ್ಮಾನ್​ ಖಾನ್​
TV9 Web
| Edited By: |

Updated on:Oct 25, 2021 | 10:09 PM

Share

ಸಲ್ಮಾನ್​ ಖಾನ್​ ನಟನೆಯ ಸಿನಿಮಾ ಎಂದರೆ ಅಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳು ಇರುತ್ತವೆ. ಇದು ‘ಅಂತಿಮ್​-ದಿ ಫೈನಲ್​ ಟ್ರುತ್​’ ಸಿನಿಮಾದಲ್ಲೂ ಮುಂದುವರಿದಿದೆ. ಈ ಸಿನಿಮಾದ ಟ್ರೇಲರ್​ ಇಂದು ರಿಲೀಸ್​ ಆಗಿದ್ದು, ಸಖತ್​ ಆ್ಯಕ್ಷನ್​ನಿಂದ ಕೂಡಿದೆ. ಸಲ್ಲು ಖಡಕ್​ ಸಿಖ್​ ಪೊಲೀಸ್​ ಆಫೀಸರ್​ ಆಗಿ ಮಿಂಚಿದ್ದಾರೆ. ಈ ಟ್ರೇಲರ್ ನೋಡಿದ ಮೇಲೆ ‘ಅಂತಿಮ್​’ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ನವೆಂಬರ್​ 26ರಂದು ಸಿನಿಮಾ ತೆರೆಗೆ ಬರುತ್ತಿದೆ.

ಆಯುಶ್​ ಶರ್ಮಾ ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಂಡರೆ, ಸಲ್ಲು ಸಿಖ್​ ಪೊಲೀಸ್​ ಆಗಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂದು ರಿಲೀಸ್​ ಆದ ಟ್ರೇಲರ್ ಸಿನಿಮಾ ಬಗ್ಗೆ ಭರವಸೆ ಮೂಡಿಸುವಂತೆ ಮಾಡಿದೆ. ಒಂದು ದೃಶ್ಯದಲ್ಲಿ ಸಲ್ಮಾನ್​ ಖಾನ್​ ಸಿಕ್ಸ್​ ಪ್ಯಾಕ್​ ತೋರಿಸುತ್ತಾರೆ. ಈ ದೃಶ್ಯಗಳಿಗೆ ಚಿತ್ರಮಂದಿರದಲ್ಲಿ ಶಿಳ್ಳೆ ಬೀಳೋದು ಪಕ್ಕಾ. ಸಲ್ಮಾನ್ ಖಾನ್​ ನಟನೆಯ ಈ ಹಿಂದಿನ ‘ರಾಧೆ: ಯುವರ್​ ಮೋಸ್ಟ್ ವಾಂಟೆಡ್​ ಭಾಯ್’​ ಚಿತ್ರ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಈಗ ‘ಅಂತಿಮ್​’ ಸಿನಿಮಾ ಮೂಲಕ ಗೆಲುವು ಕಾಣಲೇ ಬೇಕಾದ ಅನಿವಾರ್ಯತೆ ಸಲ್ಲುಗೆ ಎದುರಾಗಿದೆ.

ಜಾನ್​ ಅಬ್ರಾಹಂ ನಟನೆಯ ‘ಸತ್ಯಮೇವ ಜಯತೆ’ ಸಿನಿಮಾ ಹಿಟ್​ ಆಗಿತ್ತು. ಅದರ ಸೀಕ್ವೆಲ್​ ಆಗಿ ‘ಸತ್ಯಮೇವ ಜಯತೆ 2’ ತೆರೆಗೆ ಬರುತ್ತಿದೆ. ಈ ಚಿತ್ರವೂ ನವೆಂಬರ್​ 26ರಂದು ರಿಲೀಸ್​ ಆಗುತ್ತಿದೆ. ಈಗ ಅದೇ ದಿನ ಸಲ್ಲು ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ. ಹೀಗಾಗಿ, ಬಾಕ್ಸ್​ ಆಫೀಸ್​ನಲ್ಲಿ ಎರಡು ದೊಡ್ಡ ಬಜೆಟ್​ ಸಿನಿಮಾಗಳು ಮುಖಾಮುಖಿ ಆಗುತ್ತಿವೆ. ‘ಅಂತಿಮ್​-ದಿ ಫೈನಲ್​ ಟ್ರುತ್​’ ಸಿನಿಮಾ ದೀಪಾವಳಿಗೆ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾದ ಕೆಲ ದೃಶ್ಯಗಳನ್ನು ರೀಶೂಟ್​ ಮಾಡಲಾಗಿದೆ. ಇದರ ಎಡಿಟಿಂಗ್​ಗೆ ಹೆಚ್ಚು ಸಮಯ ಹಿಡಿದಿದೆ. ಹೀಗಾಗಿ, ನವೆಂಬರ್ 26ಕ್ಕೆ ಸಿನಿಮಾ ರಿಲೀಸ್​ ಆಗುತ್ತಿದೆ.

ಇದನ್ನೂ ಓದಿ: ಜಾನ್​ ಅಬ್ರಾಹಂ ಎದುರು ತೊಡೆತಟ್ಟಿದ ಸಲ್ಮಾನ್​ ಖಾನ್​; ಗೆಲ್ಲೋರು ಯಾರು?

ಸಲ್ಮಾನ್​ ಖಾನ್​ ಜೊತೆ ಶಮಿತಾ ಶೆಟ್ಟಿ ತುಳು ಮಾತುಕತೆ; ಮಾತೃಭಾಷೆ ಅಭಿಮಾನಕ್ಕೆ ಜನರು ಫಿದಾ

Published On - 9:50 pm, Mon, 25 October 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್