ಸಲ್ಮಾನ್​ ಖಾನ್​ ಜೊತೆ ಶಮಿತಾ ಶೆಟ್ಟಿ ತುಳು ಮಾತುಕತೆ; ಮಾತೃಭಾಷೆ ಅಭಿಮಾನಕ್ಕೆ ಜನರು ಫಿದಾ

ಸಲ್ಮಾನ್​ ಖಾನ್​ ಜೊತೆ ಶಮಿತಾ ಶೆಟ್ಟಿ ತುಳು ಮಾತುಕತೆ; ಮಾತೃಭಾಷೆ ಅಭಿಮಾನಕ್ಕೆ ಜನರು ಫಿದಾ
ಶಮಿತಾ ಶೆಟ್ಟಿ, ಸಲ್ಮಾನ್​ ಖಾನ್​

ಎಷ್ಟೋ ವರ್ಷಗಳ ಹಿಂದೆಯೇ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಮುಂಬೈ ಸೇರಿಕೊಂಡಿದ್ದರೂ ಕೂಡ ಅವರು ತುಳು ಮಾತನಾಡುವುದನ್ನು ಬಿಟ್ಟಿಲ್ಲ. ಈಗ ಶಮಿತಾ ಶೆಟ್ಟಿ ಅವರು ಬಿಗ್​ ಬಾಸ್​ನಲ್ಲಿ ಮಾತೃಭಾಷೆಯ ಅಭಿಮಾನ ಮೆರೆದಿದ್ದಾರೆ.

TV9kannada Web Team

| Edited By: Madan Kumar

Oct 15, 2021 | 5:05 PM

ನಟಿ ಶಮಿತಾ ಶೆಟ್ಟಿ ಅವರು ಸಿನಿಮಾ ರಂಗದಲ್ಲಿ ಮಾಡಲಾಗದ ಸಾಧನೆಯನ್ನು ಬಿಗ್ ಬಾಸ್​ ಮೂಲಕ ಮಾಡುತ್ತಿದ್ದಾರೆ. ಭಾವ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಬಳಿಕ ಶಮಿತಾ ಅವರು ಬಿಗ್​ ಬಾಸ್​ ಓಟಿಟಿಗೆ ಕಾಲಿಡುವ ನಿರ್ಧಾರ ಮಾಡಿದ್ದರಿಂದ ತುಂಬ ಅನುಕೂಲ ಆಯಿತು. ಅದರಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್​ ನೀಡಿದ ಅವರಿಗೆ ‘ಬಿಗ್​ ಬಾಸ್​ 15’ರಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಸಲ್ಮಾನ್​ ಖಾನ್​ ನಿರೂಪಣೆ ಮಾಡುತ್ತಿರುವ ಈ ಶೋನಲ್ಲಿ ಅವರು ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ತುಳು ಭಾಷೆಯಲ್ಲಿ ಮಾತನಾಡಿ ಸುದ್ದಿ ಆಗಿದ್ದಾರೆ.

ಶಿಲ್ಪಾ ಶೆಟ್ಟಿ ಕುಟುಂಬದವರು ಮೂಲತಃ ಮಂಗಳೂರಿನವರು. ಅವರ ಮಾತೃಭಾಷೆ ತುಳು. ಆದರೆ ಅವರು ವಾಸವಾಗಿರುವುದು ಮುಂಬೈನಲ್ಲಿ. ಎಷ್ಟೋ ವರ್ಷಗಳ ಹಿಂದೆಯೇ ಶಿಲ್ಪಾ, ಶಮಿತಾ ಮುಂಬೈ ಸೇರಿಕೊಂಡಿದ್ದರೂ ಕೂಡ ಅವರು ತುಳು ಮಾತನಾಡುವುದನ್ನು ಬಿಟ್ಟಿಲ್ಲ. ಅನೇಕ ವೇದಿಕೆಗಳಲ್ಲಿ ಶಿಲ್ಪಾ ತುಳು ಮಾತನಾಡಿದ್ದರು. ಈಗ ಶಮಿತಾ ಶೆಟ್ಟಿ ಕೂಡ ಬಿಗ್​ ಬಾಸ್​ನಲ್ಲಿ ಮಾತೃಭಾಷೆಯ ಅಭಿಮಾನ ಮೆರೆದಿದ್ದಾರೆ.

ಅಚ್ಚರಿ ಎಂದರೆ ಶಮಿತಾ ಶೆಟ್ಟಿ ತುಳು ಮಾತನಾಡಿರುವುದು ಸಲ್ಮಾನ್​ ಖಾನ್​ ಜೊತೆ. ಈ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ‘ಹೇಗಿದ್ದೀರಿ?’, ‘ಚೆನ್ನಾಗಿದ್ದೇನೆ’ ಎಂಬಿತ್ಯಾದಿ ಪದಗಳನ್ನು ತುಳುನಲ್ಲಿ ಹೇಗೆ ಹೇಳಬೇಕು ಎಂಬುದನ್ನು ಸಲ್ಮಾನ್​ ಖಾನ್​ಗೆ ಶಮಿತಾ ಕಲಿಸಿಕೊಟ್ಟಿದ್ದಾರೆ.

ಬಿಗ್​ ಬಾಸ್​ ಓಟಿಟಿ ಶೋನಲ್ಲಿ ಶಮಿತಾ ಮತ್ತು ರಾಕೇಶ್​ ಬಾಪಟ್​ ತುಂಬ ಕ್ಲೋಸ್​ ಆಗಿದ್ದರು. ಆ ಶೋನಿಂದ ಹೊರಬಂದ ಬಳಿಕವೂ ಅವರ ನಡುವಿನ ಆಪ್ತತೆ ಮುಂದುವರಿದಿತ್ತು. ಈಗ ‘ಬಿಗ್​ ಬಾಸ್​ 15’ಕ್ಕೆ ಶಮಿತಾ ಮಾತ್ರ ಎಂಟ್ರಿ ನೀಡಿದ್ದು, ರಾಕೇಶ್​ ಬಾಪಟ್​ಗೆ ಈ ಅವಕಾಶ ಸಿಕ್ಕಿಲ್ಲ.

ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ಮಾರಾಮಾರಿ ನಡೆದಿತ್ತು. ಬಿಗ್​ ಬಾಸ್ ಶೋನಲ್ಲಿ ನಡೆದ ಫೈಟ್​ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಎಲ್ಲರೂ ಮುಖಮೂತಿ ನೋಡದೆ ಹೊಡೆದುಕೊಂಡಿದ್ದಾರೆ. ಹೆಣ್ಣು ಮಕ್ಕಳಿಗೂ ಹೊಡೆತಗಳು ಬಿದ್ದಿವೆ. ಇದನ್ನು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದು ಅತಿಯಾಯಿತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:

ಶಾರುಖ್​ ಪುತ್ರನ ಅರೆಸ್ಟ್​ ಬೆನ್ನಲ್ಲೇ ಓಡೋಡಿ ಬಂದ ಸಲ್ಮಾನ್​ ಖಾನ್​; ‘ಮನ್ನತ್​’ನಲ್ಲಿ ನಡೆದಿದ್ದು ಏನು?

ಬಿಗ್​ ಬಾಸ್​​​ನಲ್ಲಿ ರಾಜ್​ ಕುಂದ್ರಾ ಬಗ್ಗೆ ಜೋಕ್​ ಮಾಡಿದ ಸಲ್ಮಾನ್​; ಮುಜುಗರಕ್ಕೊಳಗಾದ ಶಮಿತಾ ಶೆಟ್ಟಿ

Follow us on

Related Stories

Most Read Stories

Click on your DTH Provider to Add TV9 Kannada