ಸೌಂದರ್ಯ ಜಗದೀಶ್ ಹಲ್ಲೆ ಪ್ರಕರಣ: ದೂರು ನೀಡಿದ ಮಂಜುಳ ಅದನ್ನು ವಾಪಸ್ಸು ಪಡೆಯುವ ನಿರ್ಧಾರಕ್ಕೆ ಬಂದರು

ಸೌಂದರ್ಯ ಜಗದೀಶ್ ಹಲ್ಲೆ ಪ್ರಕರಣ: ದೂರು ನೀಡಿದ ಮಂಜುಳ ಅದನ್ನು ವಾಪಸ್ಸು ಪಡೆಯುವ ನಿರ್ಧಾರಕ್ಕೆ ಬಂದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 28, 2021 | 5:56 PM

ಎರಡು ಕುಟುಂಬಗಳ ನಡುವೆ ರಾಜಿ-ಸಂಧಾನ ನಡೆದಂತೆ ಕಾಣುತ್ತದೆ. ಯಾಕೆಂದರೆ, ದೂರು ಕೊಟ್ಟ ಬಳಿಕ ಆವೇಷಭರಿತರಾಗಿ ಮಾತಾಡಿದ್ದ ಇದೇ ಮಂಜುಳಾ ಅವರು ಇಂದು ವಾತ್ಸಲ್ಯಮಯಿ ಮಾತೃಹೃದಯಿ ಮಹಿಳೆಯಂತೆ ಮತಾಡಿದರು.

ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪತ್ನಿ ರೇಖಾ ಮತ್ತು ಮಗ ಸ್ನೇಹಿತ್ ಅವರನ್ನೊಳಗೊಂಡಂತೆ ಕುಟಂಬದ ಇತರ ಸದಸ್ಯರು ಮತ್ತು ಡ್ರೈವರ್ ರಕ್ಷಿತ್ಅವರ ಹಲ್ಲೆ ಪ್ರಕರಣ ಗುರುವಾರದಂದು ಹೊಸ ತಿರುವು ಪಡೆದುಕೊಂಡಿತು. ನಿರ್ಮಾಪಕ ವಿರುದ್ಧ ದೂರು ನೀಡಿದ್ದ ಮತ್ತು ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಮಂಜುಳಾ ಹೆಸರಿನ ಮಹಿಳೆ ತಮ್ಮ ದೂರನ್ನು ವಾಪಸ್ಸು ಪಡೆದರಲ್ಲದೆ, ಮಾಧ್ಯಮದವರೆದುರು ಅದಕ್ಕೆ ಸಮಜಾಯಿಷಿಯನ್ನೂ ನೀಡಿದರು. ಅವರು ನಿನ್ನೆ ಮಾತಾಡಿದ್ದು ಮತ್ತು ಇವತ್ತಿನ (ಗುರುವಾರ) ಮಾತಿನ ವರಸೆ ನಡುವೆ ಅಜಗಜಾಂತರ ವ್ಯತ್ಯಾಸವಿತ್ತು. ನಿರ್ಮಾಪಕನ ಮನೆಯವರು ತಮ್ಮಲ್ಲಿಗೆ ಬಂದು, ತಮ್ಮ ಮಗ ಕೆಲಸದಾಕೆಯ ಮೇಲೆ ಹಲ್ಲೆ ಮಾಡಿಲ್ಲ, ವಿಡಿಯೋವನ್ನು ಮತ್ತೊಮ್ಮೆ ನೋಡಿ, ಹಲ್ಲೆಯಲ್ಲಿ ತಮ್ಮ ಮಗನ ಪಾತ್ರವೇ ಇಲ್ಲ. ಹಾಗಾಗಿ ಕೊಟ್ಟಿರುವ ದೂರಿನ ಬಗ್ಗೆ ಮರು ಪರಿಶೀಲನೆ ಮಾಡಿ, ಇದು ನಮ್ಮ ಮಗನ ಭವಿಷ್ಯ ಪ್ರಶ್ನೆ, ಕೇಸು ದಾಖಲಾದರೆ ಅದು ಹಾಳಾಗುತ್ತದೆ, ಮುಂದೆ ಯಾವತ್ತೂ ಇಂಥ ಘಟನೆ ನಡೆಯದಂತೆ ಎಚ್ಚರವಹಿಸುತ್ತವೆ ಎಂದು ಜಗದೀಶ್ ವಿನಂತಿ ಮಾಡಿಕೊಂಡ ಬಳಿಕ ತಾನು ನಿರ್ಧಾರ ಬದಲಿಸಿದ್ದಾಗಿ ಮಂಜುಳ ಹೇಳಿದರು.

ಅವರ ಮಾತಿನ ವರಸೆ ನೋಡಿದರೆ ಎರಡು ಕುಟುಂಬಗಳ ನಡುವೆ ರಾಜಿ-ಸಂಧಾನ ನಡೆದಂತೆ ಕಾಣುತ್ತದೆ. ಯಾಕೆಂದರೆ, ದೂರು ಕೊಟ್ಟ ಬಳಿಕ ಆವೇಷಭರಿತರಾಗಿ ಮಾತಾಡಿದ್ದ ಇದೇ ಮಂಜುಳಾ ಅವರು ಇಂದು ವಾತ್ಸಲ್ಯಮಯಿ ಮಾತೃಹೃದಯಿ ಮಹಿಳೆಯಂತೆ ಮತಾಡಿದರು. ಒಬ್ಬ ಶಿಕ್ಷಕಿಯಾಗಿ ತನ್ನ ಜವಾಬ್ದಾರಿ ಏನು ಅನ್ನೋದನ್ನು ವಿವರಿಸುವ ಪ್ರಯತ್ನ ಮಾಡಿದರು.

ಜಗದೀಶ್ ಅವರು ತನ್ನ ಮಗ ಮತ್ತು ಪತ್ನಿ ಕೇವಲ ಜಗಳ ಬಿಡಿಸುವುದಕ್ಕೆ ಪ್ರಯತ್ನಿಸಿದರು, ನೀವು ನನ್ನ ತಂಗಿಯ ಹಾಗೆ ಅಂತೆಲ್ಲ ವಿನಂತಿ ಮಾಡಿಕೊಂಡ ನಂತರ ಅವರ ಮಗನೂ ತನ್ನ ಮಗನಂತೆಯೇ ಎಂದು ಭಾವಿಸಿ ಪೊಲಿಸರಿಗೆ ವಿಡಿಯೋವನ್ನ ಮತ್ತೊಮ್ಮೆ ವೀಕ್ಷಿಸಿ ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿಸಿಕೊಂಡಿದ್ದಾಗಿ ಮಂಜುಳ ಹೇಳಿದರು. ಹಲ್ಲೆ ಮಾಡಿರುವ ಬೌನ್ಸರ್ಗಳು ನಾಪತ್ತೆಯಾಗಿದ್ದಾರೆ, ಅವರನ್ನು ಪತ್ತೆ ಹಚ್ಚುವ ಕೆಲಸವಾಗಬೇಕು ಎಂದು ಅವರು ಹೇಳಿದರು.

ಇಲ್ಲಿ ಗಮನಿಸಬೇಕಿರುವ ಸಂಗತಿಯೇನೆಂದರೆ, ಮಂಜುಳ ದೂರು ನೀಡಿದ ನಂತರ ಪೊಲೀಸರು ಜಗದೀಶ್ ಅವರ ಸೆಕ್ಯುರಿಟಿ ಗಾರ್ಡನ್ನು ವಶಕ್ಕೆ ಪಡೆದುಕೊಂಡಿದ್ದರು. ಆದೇ ದಿನ ಜಗದೀಶ ಅವರ ಪತ್ನಿ ರೇಖಾ, ಮಗ ಸ್ನೇಹಿತ್, ಡ್ರೈವರ್ ರಕ್ಷಿತ್, ಭುವನಾ, ಲತಾ ಹೆಸರಿನ ಮಹಿಳೆಯರು ಮತ್ತು ನಿಖಿಲ್, ಕುಮಾರ್ ಮತ್ತು ರೋಹಿತದ ಹೆಸರಿನ ಬೌನ್ಸರ್ ಗಳು ಮನೆಯಿಂದ ನಾಪತ್ತೆಯಾಗಿದ್ದರು.

ಇದನ್ನೂ ಓದಿ:   ಯೂಟ್ಯೂಬ್​​ನಲ್ಲಿ ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಪಾಲಕರಿಗೆ ಗೊತ್ತಾಗದಂತೆ ನಿಭಾಯಿಸಿದ ರೀತಿ ನಿಜಕ್ಕೂ ಶಾಕಿಂಗ್​​