AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಫ್​ ಅಲಿ ಖಾನ್​ ಮನೆಯಲ್ಲಿ ದೀಪಾವಳಿ; ಕರೀನಾಗೆ ಪೋಸ್​ ನೀಡಲು ಅಡ್ಡಿಪಡಿಸಿದ ಮಗ ಜೇಹ್​

ಸೈಫ್​ ಅಲಿ ಖಾನ್​​-ಕರೀನಾ ಕಪೂರ್ ಖಾನ್​​ ದಂಪತಿ ಮನೆಯಲ್ಲಿ ದೀಪಾವಳಿ ಸಂಭ್ರಮ ಗರಿಗೆದರಿದೆ. ತಮ್ಮ ಮನೆಯ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಫೋಟೋವನ್ನು ಕರೀನಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಸೈಫ್​ ಅಲಿ ಖಾನ್​ ಮನೆಯಲ್ಲಿ ದೀಪಾವಳಿ; ಕರೀನಾಗೆ ಪೋಸ್​ ನೀಡಲು ಅಡ್ಡಿಪಡಿಸಿದ ಮಗ ಜೇಹ್​
ಸೈಫ್​ ​​-ಕರೀನಾ ಮನೆಯಲ್ಲಿ ದೀಪಾವಳಿ ಸಂಭ್ರಮ
TV9 Web
| Edited By: |

Updated on: Nov 05, 2021 | 2:26 PM

Share

ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಎಲ್ಲರ ಬಾಳಿನಲ್ಲೂ ಕತ್ತಲು ಕಳೆದು ಬೆಳಕು ಬರಲಿ ಎಂದು ಪ್ರಾರ್ಥಿಸಲಾಗುತ್ತಿದೆ. ಸೆಲೆಬ್ರಿಟಿಗಳ ಮನೆಯಲ್ಲೂ ದೀಪದ ಹಬ್ಬ ಕಳೆಗಟ್ಟಿದೆ. ಬಾಲಿವುಡ್​ ತಾರೆಯರು ಕೂಡ ದೀಪಾವಳಿ ಸಂಭ್ರಮದಲ್ಲಿ ಮುಳುಗಿದ್ದಾರೆ. ದೇವರಿಗೆ ಅಲಂಕಾರ ಮಾಡಿ, ವಿಶೇಷ ಖಾದ್ಯಗಳನ್ನು ತಯಾರಿಸಿ, ನೈವೇದ್ಯ ಮಾಡಿ, ಇಡೀ ಮನೆಯನ್ನು ದೀಪಗಳಿಂದ ಸಿಂಗರಿಸಿ ಖುಷಿಪಡಲಾಗುತ್ತಿದೆ. ಸೈಫ್​ ಅಲಿ ಖಾನ್​ ಮನೆಯಲ್ಲೂ ದೀಪಗಳು ಝಗಮಗಿಸುತ್ತಿವೆ. ಕರೀನಾ ಕಪೂರ್​ ಖಾನ್​ ಅವರು ಹಬ್ಬದ ಖುಷಿಯಲ್ಲಿ ತೇಲುತ್ತಿದ್ದು, ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಅವರದ್ದು ಅಂತರ್​ ಧರ್ಮೀಯ ವಿವಾಹ. ಹಾಗಾಗಿ ಅವರ ಮನೆಯಲ್ಲಿ ಎರಡೂ ಧರ್ಮಗಳ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವರ್ಷ ಗಣೇಶ ಚತುರ್ಥಿಯನ್ನು ಅವರು ಅದ್ದೂರಿಯಾಗಿ ಆಚರಿಸಿದ್ದರು. ಈಗ ದೀಪಾವಳಿಯ ಸಡಗರ ಬಂದಿದೆ. ಸಾಂಪ್ರದಾಯಿಕ ಉಡುಗೆ ಧರಿಸಿ ಮನೆಯ ಸದಸ್ಯರೆಲ್ಲ ಮಿಂಚುತ್ತಿದ್ದಾರೆ. ಸೈಫ್​-ಕರೀನಾ ಪುತ್ರರಾದ ತೈಮೂರ್​ ಅಲಿ ಖಾನ್​ ಮತ್ತು ಜೇಹ್​ ಅಲಿ ಖಾನ್​ ಈ ಬಾರಿಯ ದೀಪಾವಳಿ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ತಮ್ಮ ಮನೆಯ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಫೋಟೋವನ್ನು ಕರೀನಾ ಕಪೂರ್​ ಖಾನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದೇ ಬಗೆಯ ದಿರಿಸಿನಲ್ಲಿ ಸೈಫ್​ ಮತ್ತು ತೈಮೂರ್​ ಮಿಂಚಿದ್ದಾರೆ. ಪುಣಾಣಿ ಜೇಹ್​ ಗಮನವೆಲ್ಲ ಅಮ್ಮನ ಕಡೆಗಿದೆ. ಆತನ ಆರೈಕೆಯಲ್ಲೇ ಕರೀನಾಗೆ ಸಮಯ ಕಳೆಯುತ್ತಿದೆ. ‘ಪೋಸ್​ ನೀಡಲು ನನಗೆ ತೊಂದರೆ ಕೊಡುವುದು ಇವನೊಬ್ಬನೆ’ ಎಂದು ಆ ಫೋಟೋಗೆ ಕರೀನಾ ಕ್ಯಾಪ್ಷನ್​ ನೀಡಿದ್ದಾರೆ.

ಹಬ್ಬ ಆಚರಿಸಿ ಟ್ರೋಲ್​ ಆದ ಫರ್ಹಾನ್​ ಅಖ್ತರ್​:

ತಮ್ಮ ನೇರ ನಡೆ-ನುಡಿಗಳಿಂದ ಗುರುತಿಸಿಕೊಂಡವರು ಫರ್ಹಾನ್​ ಅಖ್ತರ್​. ತಮಗೆ ಸರಿ ಎನಿಸಿದ್ದನ್ನು ಅವರು ಮಾಡುತ್ತಾರೆ. ಆ ಕಾರಣಕ್ಕಾಗಿ ಪದೇಪದೇ ಅವರು ಟ್ರೋಲಿಗರಿಗೆ ಆಹಾರ ಆಗುತ್ತಾರೆ. ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಸೆಲೆಬ್ರೇಟ್​ ಮಾಡಲಾಗುತ್ತಿದೆ. ಅದೇ ರೀತಿ ಫರ್ಹಾನ್​ ಅಖ್ತರ್​ ಕೂಡ ತಮ್ಮ ‘ಎಕ್ಸೆಲ್​ ಎಂಟರ್​ಟೇ ನ್​ಮೆಂಟ್​’ ಕಚೇರಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ. ಪ್ರೇಯಸಿ ಶಿಬಾನಿ ದಂಡೇಕರ್​, ಬ್ಯುಸಿನೆಸ್​ ಪಾರ್ಟ್ನರ್​ ರಿತೇಶ್​​ ಸಿದ್ವಾನಿ, ರಿತೇಶ್ ಪತ್ನಿ ಡಾಲಿ ಸಿದ್ವಾನಿ ಮುಂತಾದವರು ಹಬ್ಬದ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಮುಸ್ಲಿಂ ಧರ್ಮದವರಾದ ಫರ್ಹಾನ್​ ಅಖ್ತರ್​ ಅವರು ಹಿಂದುಗಳ ಹಬ್ಬವನ್ನು ಆಚರಿಸಿರುವುದಕ್ಕೆ ಕೆಲವರು ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ:

ಅಭಿಮಾನಿಗಳಿಗೆ ರಶ್ಮಿಕಾ ದೀಪಾವಳಿ ವಿಶ್ ಮಾಡಿದ್ದು ಹೇಗೆ?

ಮೇಘನಾ ರಾಜ್​-ಚಿರು ಸರ್ಜಾ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ ರಾಯನ್​ ರಾಜ್​ ಸರ್ಜಾ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ