ಮೇಘನಾ ರಾಜ್​-ಚಿರು ಸರ್ಜಾ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ ರಾಯನ್​ ರಾಜ್​ ಸರ್ಜಾ

TV9 Digital Desk

| Edited By: Rajesh Duggumane

Updated on:Nov 04, 2021 | 3:43 PM

ರಾಯನ್​ ರಾಜ್​ ಸರ್ಜಾಗೆ​ ಇತ್ತೀಚೆಗಷ್ಟೇ ಒಂದು ವರ್ಷ ತುಂಬಿತ್ತು. ಮೇಘನಾ ರಾಜ್​ ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಕಾಡಿನ ರೀತಿಯಲ್ಲಿ ಅಲಂಕರಿಸಿ, ರಾಯನ್​ ಬರ್ತ್​ಡೇ ಸೆಲಬ್ರೇಷನ್​ ಮಾಡಲಾಗಿತ್ತು

ಮೇಘನಾ ರಾಜ್​-ಚಿರು ಸರ್ಜಾ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ ರಾಯನ್​ ರಾಜ್​ ಸರ್ಜಾ
ಮೇಘನಾ ರಾಜ್​ ಮತ್ತು ರಾಯನ್

Follow us on

ಬೆಳಕಿನ ಹಬ್ಬ ದೀಪಾವಳಿ ಬಂದಿದೆ. 2020ರಂತೆ 2021ರಲ್ಲೂ ಸಾಕಷ್ಟು ಕಹಿಘಟನೆಗಳು ನಡೆದವು. ಮುಂದಿನ ದಿನಗಳಲ್ಲಿ ಇದು ಮರುಕಳಿಸದಿರಲಿ ಎಂದು ಈ ಹಬ್ಬದಂದು ಎಲ್ಲರೂ ಬೇಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ದೀಪ ಹಚ್ಚುವ ಮೂಲಕ ಹಬ್ಬವನ್ನು ಜೋರಾಗಿ ಆಚರಿಸಲಾಗುತ್ತಿದೆ. ನಟ-ನಟಿಯರು ಕೂಡ ಹಬ್ಬದ ಆಚರಣೆಯ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. ಈಗ ನಟಿ ಮೇಘನಾ ರಾಜ್​ ಮಗ ರಾಯನ್​ ರಾಜ್​ ಸರ್ಜಾ ಕೂಡ ಚಿರು-ಮೇಘನಾ ಅಭಿಮಾನಿಗಳಿಗೆ ವಿಶ್​ ಮಾಡಿದ್ದಾನೆ.

ರಾಯನ್​ ರಾಜ್​ ಸರ್ಜಾಗೆ​ ಇತ್ತೀಚೆಗಷ್ಟೇ ಒಂದು ವರ್ಷ ತುಂಬಿತ್ತು. ಮೇಘನಾ ರಾಜ್​ ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಮನೆಯನ್ನು ಕಾಡಿನ ರೀತಿಯಲ್ಲಿ ಅಲಂಕರಿಸಿ, ರಾಯನ್​ ಬರ್ತ್​ಡೇ ಸೆಲಬ್ರೇಷನ್​ ಮಾಡಲಾಗಿತ್ತು. ಮಗ ಜನಿಸಿದ ನಂತರ ಮೇಘನಾ ಬಾಳಿನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅವರು ಮತ್ತೆ ಮೊದಲಿನ ಖುಷಿಗೆ ಮರಳಿದ್ದಾರೆ. ಈ ಎಲ್ಲಾ ಕಾರಣಕ್ಕೆ ಮಗನ ಮೇಲೆ ಮೇಘನಾಗೆ ಅಪಾರ ಪ್ರೀತಿ. ಹೀಗಾಗಿ, ಮಗನ ಫೋಟೋಗಳನ್ನು ಅವರು ಪೋಸ್ಟ್​ ಮಾಡುತ್ತಲೇ ಇರುತ್ತಾರೆ.

ಈಗ ರಾಯನ್ ಅವರ ವಿವಿಧ ಫೋಟೋವನ್ನು ಮೇಘನಾ ಪೋಸ್ಟ್ ಮಾಡಿದ್ದಾರೆ. ‘ರಾಯನ್​ನ ವಿವಿಧ ಫೋಟೋಗಳು ನಿಮಗೆ ದೀಪಾವಳಿಯ ಶುಭಾಶಯ ಹೇಳುತ್ತಿವೆ. ಈ ಚಿಕ್ಕ ಹುಡುಗ ನನ್ನ ಜೀವನದ ಅದ್ಭುತ. ಈ ಹಬ್ಬವು ಎಲ್ಲರ ಬಾಳಲ್ಲಿ ಬೆಳಕು ಹಾಗೂ ಸಂತೋಷ ತರಲಿ’ ಎಂದು ಅವರು ಬರೆದುಕೊಂಡಿದ್ದಾರೆ.

View this post on Instagram

A post shared by Meghana Raj Sarja (@megsraj)

ಮೇಘನಾ ರಾಜ್​-ಚಿರಂಜೀವಿ ಸರ್ಜಾ ಪುತ್ರ ರಾಯನ್​ ರಾಜ್​ ಸರ್ಜಾ ಅ.22ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಮೇಘನಾ ರಾಜ್​ ಮನೆಯಲ್ಲಿ ಆಚರಿಸಲಾಗಿತ್ತು. ಕಾಡಿನ ಥೀಮ್​ನಲ್ಲಿ ಅದ್ದೂರಿಯಾಗಿ ಡೆಕೊರೇಷನ್​ ಮಾಡಲಾಗಿತ್ತು. ‘ರಾಯನ್​ ಕಿಂಗ್​ಡಮ್​ಗೆ ಸ್ವಾಗತ’ ಎಂಬ ಫಲಕ ಗಮನ ಸೆಳೆದಿತ್ತು.  ಚಿತ್ರರಂಗದ ಸ್ನೇಹಿತರು ಮತ್ತು ಕುಟುಂಬದವರಿಗೆ ಆಹ್ವಾನ ನೀಡಲಾಗಿತ್ತು. ಜ್ಯೂ. ಚಿರುಗೆ ಎಲ್ಲರೂ ಶುಭ ಕೋರಿದ್ದರು.

ಇದನ್ನೂ ಓದಿ: Raayan Raj Sarja: ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬಕ್ಕೆ ಧ್ರುವ ಬಂದಿಲ್ಲ; ಕಾರಣ ತಿಳಿಸಿದ ಮೇಘನಾ ರಾಜ್​

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada