Puneeth Rajkumar: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ; ಅಪ್ಪು ಜೊತೆ ಹಾಡಿದ ಕೊನೆಯ ವಿಡಿಯೋಗಳಲ್ಲಿ ಒಂದನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್

Raghavendra Rajkumar: ಸಹೋದರ ಪುನೀತ್ ರಾಜಕುಮಾರ್ ಅವರೊಂದಿಗೆ ಜೊತೆಯಾಗಿ ಹಾಡಿದ್ದ ಕೊನೆಯ ವಿಡಿಯೋಗಳಲ್ಲಿ ಒಂದನ್ನು ರಾಘವೇಂದ್ರ ರಾಜಕುಮಾರ್ ಹಂಚಿಕೊಂಡಿದ್ದಾರೆ.

Puneeth Rajkumar: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ; ಅಪ್ಪು ಜೊತೆ ಹಾಡಿದ ಕೊನೆಯ ವಿಡಿಯೋಗಳಲ್ಲಿ ಒಂದನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್
ರಾಘವೇಂದ್ರ ರಾಜಕುಮಾರ್ ಹಂಚಿಕೊಂಡಿರುವ ವಿಡಿಯೋ ತುಣುಕು (ಮೂಲ ಕೃಪೆ: ರಾಘವೇಂದ್ರ ರಾಜಕುಮಾರ್/ ಇನ್ಸ್ಟಾಗ್ರಾಂ)
Follow us
TV9 Web
| Updated By: shivaprasad.hs

Updated on: Nov 04, 2021 | 2:59 PM

ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಎಲ್ಲರನ್ನೂ ಅಪಾರ ದುಃಖಕ್ಕೆ ತಳ್ಳಿದೆ. ಪುನೀತ್ ಸಹೋದರರಾದ ರಾಘವೇಂದ್ರ ರಾಜಕುಮಾರ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳುತ್ತಾ, ಆ ಮೂಲಕ ಅಪ್ಪುವನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಪುನೀತ್ ಜೊತೆಗೆ ಒಟ್ಟಾಗಿ ಹಾಡಿದ ಕೊನೆಯ ವಿಡಿಯೋಗಳಲ್ಲಿ ಒಂದು ಎಂದು ಬರೆದುಕೊಂಡು ತುಣುಕೊಂದನ್ನು ಹಂಚಿಕೊಂಡಿದ್ದಾರೆ. ‘ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ’ ಗೀತೆಯನ್ನು ಸಹೋದರರು ಜೊತೆಯಾಗಿ, ಸಂತಸದಿಂದ ಹಾಡಿದ್ದಾರೆ. ಒಂದು ಸಂತಸದ ಕೂಡದಲ್ಲಿ ಈರ್ವರೂ ಭಾಗಿಯಾಗಿದ್ದು, ಆ ಸಂದರ್ಭದ ವಿಡಿಯೋ ತುಣುಕು ಅದಾಗಿದೆ. ಈ ವಿಡಿಯೋವನ್ನು ಹಂಚಿಕೊಂಡು ರಾಘವೇಂದ್ರ ರಾಜಕುಮಾರ್, ‘ಇದು ನಾನು ಮತ್ತು ಅಪ್ಪು ಜೊತೆಯಾಗಿ ಹಾಡಿದ ಕೊನೆಯ ವಿಡಿಯೋಗಳಲ್ಲೊಂದು’ ಎಂದು ಬರೆದುಕೊಂಡಿದ್ದಾರೆ. ‘ಮರೆಯಲಾಗ ನೆನಪುಗಳು. ಮಿಸ್ ಯೂ ಮಗನೇ’ ಎಂದು ಬರೆದಿರುವ ರಾಘಣ್ಣ, ಅಪ್ಪು ಜೊತೆಗಿನ ದಿನಗಳನ್ನು ಬಹಳ ಬೇಸರದಿಂದಲೇ ಸ್ಮರಿಸಿಕೊಂಡಿದ್ದಾರೆ.

ರಾಘವೇಂದ್ರ ರಾಜಕುಮಾರ್ ಹಂಚಿಕೊಂಡಿರುವ ವಿಡಿಯೋ:

ರಾಘವೇಂದ್ರ ರಾಜಕುಮಾರ್ ಕುಟುಂಬದೊಂದಿಗೆ ತೆಗೆಸಿಕೊಂಡಿರುವ ಇತರ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿ ಡಾ.ರಾಜ್, ಪಾರ್ವತಮ್ಮನವರ ಜೊತೆಯಿರುವ ಚಿತ್ರಗಳು ಸೇರಿದಂತೆ ಹಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡು, ‘ಈಗ ಅವೆಲ್ಲವೂ ಕೇವಲ ನೆನಪುಗಳು’ ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳು ದುಡುಕಿನ ನಿರ್ಧಾರ ಕೈಗೊಳ್ಳದಂತೆ ರಾಘಣ್ಣ ಮನವಿ: ಪುನೀತ್ ರಾಜಕುಮಾರ್ ನಿಧನದಿಂದ ಆಘಾತಗೊಂಡಿರುವ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಕುರಿತು ರಾಘವೇಂದ್ರ ರಾಜಕುಮಾರ್ ಪ್ರತಿಕ್ರಿಯಿಸಿದ್ದಾರೆ. ‘‘ದಯವಿಟ್ಟು ಅಂತಹ ಕೆಲಸಕ್ಕೆ ಯಾರೂ ಮುಂದಾಗಬೇಡಿ. ಅಪ್ಪಾಜಿಯವರು ಅಭಿಮಾನಿಗಳನ್ನು ದೇವರು ಎಂದಿದ್ಧಾರೆ. ದೇವರು ಇಂತಹ ಕೆಲಸ ಮಾಡಿದರೆ ಜನಕ್ಕೆ ಏನು ಹೇಳುವುದು? ಅಂತಹ ನಿರ್ಧಾರಗಳು ಬಹಳ ದೊಡ್ಡ ತಪ್ಪು. ನಿಮ್ಮ ನಿಮ್ಮ ತಂದೆ- ತಾಯಿಗಳನ್ನು, ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಿ. ಅಭಿಮಾನಿಗಳ ಅಂತಹ ನಿರ್ಧಾರ ಪುನೀತ್ ಪತ್ನಿ ಹಾಗೂ ಕುಟುಂಬಸ್ಥರಿಗೆ ತೀವ್ರ ನೋವು ತಂದಿದೆ. ದಯವಿಟ್ಟು ಯಾರೂ ಅಂತಹ ನಿರ್ಧಾರ ತೆಗೆದುಕೊಳ್ಳಬೇಡಿ’’ ಎಂದು ರಾಘಣ್ಣ ಕೋರಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಕೂಡ ಅಭಿಮಾನಿಗಳು ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:

ನಟ ಪುನೀತ್ ರಾಜ್​​ಕುಮಾರ್​ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ

Puneeth Eye Donation: ಪುನೀತ್ ಪ್ರೇರಣೆ -ನೇತ್ರದಾನಕ್ಕೆ ಸಾಲುಗಟ್ಟಿದ ಜನ, ಒಂದೇ ದಿನ ಸಾವಿರಾರು ಜನರಿಂದ ನೋಂದಣಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ