AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಅಪ್ಪು ಇರದ ನೋವು ಎಲ್ಲರಲ್ಲೂ ಇದೆ; ಅದನ್ನು ಒಪ್ಪಿ ಮುಂದೆ ಸಾಗಬೇಕು, ದುಡುಕಬಾರದು: ಶಿವರಾಜ್ ಕುಮಾರ್

Puneeth Rajkumar: ಅಪ್ಪು ಇರದ ನೋವು ಎಲ್ಲರಲ್ಲೂ ಇದೆ; ಅದನ್ನು ಒಪ್ಪಿ ಮುಂದೆ ಸಾಗಬೇಕು, ದುಡುಕಬಾರದು: ಶಿವರಾಜ್ ಕುಮಾರ್

TV9 Web
| Updated By: shivaprasad.hs

Updated on:Nov 04, 2021 | 6:29 PM

Shiva Rajkumar: ಪುನೀತ್ ಅಗಲುವಿಕೆಯ ಬೇಸರದಿಂದ ಅಭಿಮಾನಿಗಳು ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಒಳ್ಳೆಯ ಕಾರ್ಯಗಳ ಮುಖಾಂತರ ಅವರನ್ನು ಜೀವಂತವಾಗಿರಿಸಬೇಕು ಎಂದು ಶಿವರಾಜ್ ಕುಮಾರ್ ನುಡಿದಿದ್ದಾರೆ. ಅಪ್ಪು ಸಾವಿನ ಕುರಿತು ತನಿಖೆ ಮಾಡಬೇಕು ಎಂಬ ದೂರಿನ ಕುರಿತಂತೆಯೂ ಅವರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ಆತ್ಮಹತ್ಯೆ ನಿರ್ಧಾರ ಮಾಡದಂತೆ ಅಭಿಮಾನಿಗಳಲ್ಲಿ ಶಿವಣ್ಣ ಮನವಿ ಮಾಡಿದ್ದಾರೆ. ಅಪ್ಪು ಇರದ ನೋವು ನಮ್ಮೆಲ್ಲರಲ್ಲೂ ಇದೆ. ಅದನ್ನ ಒಪ್ಪಿ ಮುಂದೆ ಸಾಗಬೇಕು. ಅಪ್ಪು ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸೋಣ. ಆ ಮೂಲಕ ಅಪ್ಪುವನ್ನ ಜೀವಂತವಾಗಿರಿಸೋಣ. ನಿಮ್ಮ ಕುಟುಂಬಕ್ಕೆ ನೀವು ಮುಖ್ಯ, ನಮಗೆ ನೀವು ಮುಖ್ಯ. ದಯವಿಟ್ಟು ಆತ್ಮಹತ್ಯೆಯಂತಹ‌ ನಿರ್ಧಾರ ಮಾಡಬೇಡಿ’’ ಎಂದು ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ. ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಪುನೀತ್ ಹೆಸರು ನಾಮಕರಣ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಖಂಡಿತ ಅಂತಹ ಅಭಿಯಾನಗಳಿಗೆ ಬೆಂಬಲಿಸೋಣ. ಅಪ್ಪು ಮಾಡ್ತಿದ್ದ ಸೋಶಿಯಲ್ ಸರ್ವೀಸ್ ನಾವು ಮುಂದುವರೆಸೋಣ ಎಂದು ನುಡಿದಿದ್ದಾರೆ.

ಅಪ್ಪು ನಿಧನದ ತನಿಖೆ ನಡೆಸಬೇಕು ಎಂದು ದೂರು ನೀಡಿದ್ದರ ಕುರಿತು ಶಿವಣ್ಣ ಪ್ರತಿಕ್ರಿಯೆ:
ಅಪ್ಪು ನಿಧನದ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿರುವ ಕುರಿತಂತೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ‘‘ಅವನೇ ಇಲ್ಲದ ಮೇಲೆ ಈಗ ಯಾಕೆ ಅದೆಲ್ಲ, ದಯವಿಟ್ಟು ಬೇಡ. ಈಗ ಅದೆಲ್ಲವನ್ನ ಮಾತನಾಡಿ ಪ್ರಯೋಜನವಿಲ್ಲ, ಅದೆಲ್ಲವನ್ನ ಬಿಟ್ಟು ಮುಂದೆ ಸಾಗಬೇಕಿದೆ. ಎಲ್ಲವೂ ಅವರವರ ಹೃದಯಕ್ಕೆ ತಿಳಿಯುತ್ತದೆ’’ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ:

Puneeth Rajkumar: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ; ಅಪ್ಪು ಜೊತೆ ಹಾಡಿದ ಕೊನೆಯ ವಿಡಿಯೋಗಳಲ್ಲಿ ಒಂದನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್

ನಟ ಪುನೀತ್ ರಾಜ್​​ಕುಮಾರ್​ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ

Published on: Nov 04, 2021 04:01 PM