Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಪುನೀತ್ ರಾಜ್​​ಕುಮಾರ್​ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ

ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಈ ಬಗ್ಗೆ ಘೋಷಣೆ ಆಗಿದೆ. ಬಸವಶ್ರೀ ಪ್ರಶಸ್ತಿ ಐದು ಲಕ್ಷ ರೂ. ನಗದನ್ನು ಒಳಗೊಂಡಿದೆ. ಬರುವ ಬಸವ ಜಯಂತಿ ದಿನ ಬಸವಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

ನಟ ಪುನೀತ್ ರಾಜ್​​ಕುಮಾರ್​ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ
ಪುನೀತ್​ ರಾಜ್​ಕುಮಾರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 04, 2021 | 2:36 PM

ನಟ ಪುನೀತ್​ ರಾಜ್​ಕುಮಾರ್​ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ಚಿಕ್ಕ ವಯಸ್ಸಿನಿಂದಲೇ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದ ಅವರು ನಂತರ ಹೀರೋ ಆಗಿ ಸ್ಯಾಂಡಲ್​ವುಡ್​ನಲ್ಲಿ ಮೆರೆದರು. ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದರು. ಈಗ ಚಿತ್ರದುರ್ಗದ ಮುರುಘಾಮಠ ಕೊಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಮರಣೋತ್ತರವಾಗಿ ಪುನೀತ್​ಗೆ ಸಿಗುತ್ತಿದೆ. ಮುರುಘಾಶ್ರೀಗಳು ಇಂದು (ನವೆಂಬರ್​ 4) ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಈ ಬಗ್ಗೆ ಘೋಷಣೆ ಆಗಿದೆ. ಬಸವಶ್ರೀ ಪ್ರಶಸ್ತಿ ಐದು ಲಕ್ಷ ರೂ. ನಗದನ್ನು ಒಳಗೊಂಡಿದೆ. ಬರುವ ಬಸವ ಜಯಂತಿ ದಿನ ಬಸವಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಮುರುಘಾಮಠದ ಅನುಭವ ಮಂಟಪದಲ್ಲಿ ಈ ಸಮಾರಂಭ ನಡೆಯಲಿದ್ದು, ಪುನೀತ್ ಪರವಾಗಿ ಪತ್ನಿ ಅಶ್ವಿನಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.  ನಟ ಶಿವರಾಜಕುಮಾರ್ ಅವರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ನವೆಂಬರ್ 10ರಂದು ಪುನೀತ್ ಮನೆಗೆ ಮುರುಘಾಶ್ರೀ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ.

ಅದ್ಭುತ ನಟನೆ ಮೂಲಕ ಗಮನ ಸೆಳೆದ ಪುನೀತ್​ ರಾಜ್​ಕುಮಾರ್​ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಒಲಿದಿವೆ. ಡ್ಯಾನ್ಸ್​ನಲ್ಲಿ ಅವರಿಗೆ ಸರಿಸಾಟಿಯಾಗಿ ನಿಲ್ಲುವ ಮತ್ತೊಬ್ಬರು ಸಿಗೋಕೆ ಸಾಧ್ಯವಿಲ್ಲ. ಪುನೀತ್​ ಅವರದ್ದು ನಟನೆಯಲ್ಲೂ ಎತ್ತಿದ ಕೈ. ಅವರಿಗೆ ಶ್ರೇಷ್ಠ ಪದ್ಮಶ್ರೀ ಪ್ರಶಸ್ತಿ ಸಿಗಬೇಕು ಎಂಬುದು ಅನೇಕರ ಒತ್ತಾಯವಾಗಿತ್ತು. ಅವರ ಮರಣಾ ನಂತರ ಈ ಕೂಗು ಮತ್ತಷ್ಟು ಹೆಚ್ಚಿದೆ. ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಈ ಬಗ್ಗೆ ಆಗ್ರಹಿಸಿದ್ದರು.

ಈ ಬಗ್ಗೆ ಟ್ವೀಟ್​ ಮಾಡಿದ್ದ ಸಿದ್ದರಾಮಯ್ಯ, ‘ಯಾವ ಪ್ರಶಸ್ತಿ ಗೌರವಗಳಿಗಿಂತಲೂ ಪುನೀತ್ ರಾಜಕುಮಾರ್ ಜನತೆಯಿಂದ ಗಳಿಸಿರುವ ಪ್ರೀತಿ-ಅಭಿಮಾನ ದೊಡ್ಡದು. ಹೀಗಿದ್ದರೂ, ಪುನೀತ್ ಬದುಕಿದ್ದರೆ ತನ್ನ ನಟನೆ ಮತ್ತು ಸಾಮಾಜಿಕ ಕಾಳಜಿಯಿಂದಾಗಿ ಖಂಡಿತ ಪಡೆಯುತ್ತಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರವಾಗಿ ನೀಡಬೇಕೆಂದು ಮನವಿ ಮಾಡುತ್ತೇನೆ’ ಎಂದಿದ್ದರು.

ಇದನ್ನೂ ಓದಿ: ‘ಪುನೀತ್​ಗೆ ಪದ್ಮಶ್ರೀ ಪ್ರಶಸ್ತಿ ನೀಡಿ’; ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

ಪುನೀತ್​ ರಾಜ್​ಕುಮಾರ್​ ಸಾವಿನಲ್ಲೂ ಲಾಭ ಪಡೆದ ರಣಹದ್ದುಗಳು; ಆಕ್ರೋಶ ಹೊರ ಹಾಕಿದ ಅಭಿಮಾನಿಗಳು

Published On - 2:30 pm, Thu, 4 November 21

ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ