Puneeth Rajkumar: ಅಪ್ಪು ಅಭಿಮಾನಿಗಳ ಸಾವು ಕುಟುಂಬಕ್ಕೆ ಮತ್ತಷ್ಟು ನೋವು ತಂದಿದೆ; ದುಡುಕಿನ ನಿರ್ಧಾರ ಕೈಗೊಳ್ಳದಂತೆ ರಾಘಣ್ಣ ಮನವಿ
Raghavendra Rajkumar: ಅಭಿಮಾನಿಗಳು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿರುವುದು ಕುಟುಂಬಕ್ಕೆ ಅಪಾರ ನೋವು ತಂದಿದೆ. ಯಾರೂ ಅಂತಹ ಕಾರ್ಯಕ್ಕೆ ಮುಂದಾಗಬೇಡಿ ಎಂದು ರಾಘವೇಂದ್ರ ರಾಜಕುಮಾರ್ ಮನವಿ ಮಾಡಿದ್ದಾರೆ.
ಪುನೀತ್ ರಾಜಕುಮಾರ್ ನಿಧನದಿಂದ ಆಘಾತಗೊಂಡಿರುವ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಕುರಿತು ರಾಘವೇಂದ್ರ ರಾಜಕುಮಾರ್ ಪ್ರತಿಕ್ರಿಯಿಸಿದ್ದು, ದಯವಿಟ್ಟು ಅಂತಹ ಕೆಲಸಕ್ಕೆ ಯಾರೂ ಮುಂದಾಗಬೇಡಿ ಎಂದು ಮನವಿ ಮಾಡಿದ್ದಾರೆ. ‘‘ಅಪ್ಪಾಜಿಯವರು ಅಭಿಮಾನಿಗಳನ್ನು ದೇವರು ಎಂದಿದ್ಧಾರೆ. ದೇವರು ಇಂತಹ ಕೆಲಸ ಮಾಡಿದರೆ ಜನಕ್ಕೆ ಏನು ಹೇಳುತ್ತೀರಾ? ಬಹಳ ದೊಡ್ಡ ತಪ್ಪದು. ನಿಮ್ಮ ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಪುನೀತ್ ಪತ್ನಿ ಹಾಗೂ ಕುಟುಂಬಸ್ಥರು ಇದರಿಂದ ತೀವ್ರ ನೊಂದುಕೊಂಡಿದ್ದಾರೆ. ಅಪ್ಪು ನಿಧನ ಇಷ್ಟು ಜನರ ಸಾವಿಗೆ ಕಾರಣವಾಗಿದ್ದಕ್ಕೆ ಎಲ್ಲರಿಗೂ ಅಪಾರ ನೋವಾಗಿದೆ. ದಯವಿಟ್ಟು ಯಾರೂ ಅಂತಹ ನಿರ್ಧಾರ ತೆಗೆದುಕೊಳ್ಳಬಾರದು ಎಂದು ರಾಘಣ್ಣ ಮನವಿ ಮಾಡಿದ್ದಾರೆ.
ಅಭಿಮಾನಿಗಳು ತಮ್ಮ ಮನೆಯ ಸಮೀಪ ಬರುತ್ತಿರುವುದರ ಕುರಿತು ಉತ್ತರಿಸಿದ ರಾಘವೇಂದ್ರ ರಾಜಕುಮಾರ್, ಅಭಿಮಾನಿಗಳಿಂದಲೇ ನಾವು. ಅವರನ್ನು ಭೇಟಿಯಾಗದೇ ಇನ್ಯಾರನ್ನು ಭೇಟಿಯಾಗಬೇಕು? ಯಾರು ಬಂದರೂ ಅವರನ್ನು ಗೌರವಿಸುವುದು, ಅವರ ಪ್ರೀತಿಗೆ ನಾವು ನಮಸ್ಕರಿಸುವುದು ನಮ್ಮ ಜವಾಬ್ದಾರಿ ಎಂದು ನುಡಿದಿದ್ದಾರೆ.
ಇದನ್ನೂ ಓದಿ:
Puneeth Rajkumar: ಮುಂದಿನ ವಾರ ಪುನೀತ್ ನಿವಾಸಕ್ಕೆ ರಜಿನಿಕಾಂತ್ ಭೇಟಿ ಸಾಧ್ಯತೆ; ರಾಜ್ ಬಹದ್ದೂರ್ ಮಾಹಿತಿ
ರಜಿನೀಕಾಂತ್ಗೆ ಪುನೀತ್ ಸಾವಿನ ಸುದ್ದಿ ನಂಬಲಾಗುತ್ತಿಲ್ಲ, ಅವರಿಗೆ ಅಪ್ಪು ಮೇಲೆ ಬಹಳ ಪ್ರೀತಿ: ಶಿವರಾಜಕುಮಾರ್