ರಜಿನೀಕಾಂತ್ಗೆ ಪುನೀತ್ ಸಾವಿನ ಸುದ್ದಿ ನಂಬಲಾಗುತ್ತಿಲ್ಲ, ಅವರಿಗೆ ಅಪ್ಪು ಮೇಲೆ ಬಹಳ ಪ್ರೀತಿ: ಶಿವರಾಜಕುಮಾರ್
ರಜಿನೀಕಾಂತ್ ಆಸ್ಪತ್ರೆಯಲ್ಲಿದ್ದಾಗ ಅವರ ಡಾಕ್ಟರ್, ಶಿವರಾಜಕುಮಾರ್ ಅವರಿಗೆ ಪೋನ್ ಮಾಡಿದ್ದರಂತೆ. ಬುಧವಾರದಂದು ಖುದ್ದು ರಜಿನಿ ಶಿವಣ್ಣನವರಿಗೆ ಫೋನ್ ಮಾಡಿ ಅತೀವ ದುಃಖ ವ್ಯಕ್ತಪಡಿಸಿದ್ದರಂತೆ.
ಭಾರತೀಯ ಚಿತ್ರರಂಗದ ಮೆಗಾಸ್ಟಾರ್ ರಜಿನಿಕಾಂತ್ ಅವರು ಪುನೀತ್ ರಾಜಕುಮಾರ್ ಅವರ ಸಾವಿನ ಸುದ್ದಿ ಕೇಳಿ ದಿಗ್ಭ್ರಾಂತರಾಗಿದ್ದಾರೆ. ರಜಿನಿ ಖುದ್ದು ಹೃದಯ ಸಂಬಂಧಿ ತೊಂದರೆಗೊಳಗಾಗಿದ್ದರು. ಕಳೆದ ತಿಂಗಳು 28 ರಂದು ಅವರನ್ನು ಅವರನ್ನು ಚೆನೈನ ಕಾವೇರಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಮೂಲಗಳ ಪ್ರಕಾರ ತಲೈವಾಗೆ ಕಾರ್ಟಾಯ್ಡ್ ಆರ್ಟರಿ ರಿವ್ಯಾಸ್ಕುಲರೈಸೇಶನ್ ಮಾಲಾಗಿದೆಯಂತೆ. ಮೂರು ದಿನಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. ರಜಿನಿ ಆಸ್ಪತ್ರೆಗೆ ದಾಖಲಾದ ಮರುದಿನವೇ ಪುನೀತ್ ರಾಜಕುಮಾರ ಅವರನ್ನು ಬೆಂಗಳೂರಿವ ವಿಕ್ರಮ ಆಸ್ಪತ್ರೆಗೆ ದಾಖಲಿಸಲಾಗಿತ್ತು.
70 ವರ್ಷದ ತಮಿಳು ಸೂಪರ್ ಸ್ಟಾರ್ ಚೇತರಿಸಿಕೊಂಡು ನಗುತ್ತಾ ಮನೆಗೆ ಮರಳಿದರೆ 46 ವರ್ಷ ವಯಸ್ಸಿನ ಕನ್ನಡ ಸೂಪರ್ ಸ್ಟಾರ್ ಕುಟುಂಬಸ್ಥರ ಮತ್ತು ಕೊಟ್ಯಾಂತರ ಅಭಿಮಾನಿಗಳ ನಗುವಿನ ಮೇಲೆ ನಿರ್ಬಂಧ ಹೇರಿ ದೊಡ್ಮನೆಯಿಂದ ಮೇಲಿನ ಮನೆಗೆ ಹೋಗಿಬಿಟ್ಟರು. ವಿಧಿ ನಿಷ್ಕರುಣಿ ಮತ್ತು ಕ್ರೂರಿ.
ರಜಿನೀಕಾಂತ್ ಆಸ್ಪತ್ರೆಯಲ್ಲಿದ್ದಾಗ ಅವರ ಡಾಕ್ಟರ್, ಶಿವರಾಜಕುಮಾರ್ ಅವರಿಗೆ ಪೋನ್ ಮಾಡಿದ್ದರಂತೆ. ಬುಧವಾರದಂದು ಖುದ್ದು ರಜಿನಿ ಶಿವಣ್ಣನವರಿಗೆ ಫೋನ್ ಮಾಡಿ ಅತೀವ ದುಃಖ ವ್ಯಕ್ತಪಡಿಸಿದ್ದರಂತೆ. ಬುಧವಾರ ಬೆಳಗ್ಗೆ ಈ ವಿಷಯನ್ನು ಮಾಧ್ಯಮದವರಿಗೆ ತಿಳಿಸಿದರು. ಅಪ್ಪು, ರಜಿನಿ ಸರ್ ಅವರ ಮುಂದೆ ಬೆಳೆದ ಮಗು. ಅವನು ಚಿಕ್ಕವನಿದ್ದಾಗ ಎತ್ತಿ ಆಡಿಸಿದ್ದಾರೆ, ಅವನ ಮೇಲೆ ಅವರಿಗೆ ಬಹಳ ಪ್ರೀತಿ ಇತ್ತು ಎಂದು ಶಿವಣ್ಣ ಹೇಳಿದರು.
ರಜಿನಿಕಾಂತ್ ಅವರ ಪತ್ನಿ ಲತಾ ಅವರು ಸಹ ಶಿವಣ್ಣಗೆ ಫೋನ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್