ಜೊತೆ ಕಲಾವಿದರ ಬಗ್ಗೆ ಪುನೀತ್ ರಾಜಕುಮಾರ್​ಗೆ ಇನ್ನಿಲ್ಲದ ಕಾಳಜಿ ಮತ್ತು ಪ್ರೀತಿ, ವಿಡಿಯೋ ನೋಡಿ

ಕೃಷ್ಣ ಅವರು ಮದುವೆಯಾಗಿದ್ದು ಚಿತ್ರನಟಿ ಮಿಲನ ನಾಗರಾಜ್ ಅವರನ್ನು. ಮದುವೆಯಲ್ಲಿ ಹಾಜರಿದ್ದ ಪುನೀತ್ ದಂಪತಿಗಳನ್ನು ಹಾರೈಸುತ್ತಾರೆ.

TV9kannada Web Team

| Edited By: shruti hegde

Nov 04, 2021 | 9:37 AM

ಪುನೀತ್ ರಾಜಕುಮಾರ್ ಅವರಿಗೆ ತಮ್ಮ ಜೊತೆ ನಟಿಸುತ್ತಿದ್ದ ಕಲಾವಿದರ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ ಇತ್ತು. ಈ ವಿಡಿಯೋನಲ್ಲಿರುವ ದೃಶ್ಯ ಅದಕ್ಕೆ ಸಾಕ್ಷಿ. ಈ ಫೈಟ್ ಸೀನಲ್ಲಿ ಪುನೀತ್ ಮತ್ತು ಚಿತ್ರಜಗತ್ತಿಗೆ ಆಗಿನ್ನೂ ಹೊಸಬರಾಗಿದ್ದ ಡಾರ್ಲಿಂಗ್ ಕೃಷ್ಣ ಭಾಗಿಯಾಗಿದ್ದಾರೆ. ಇವರ ಮೂಲ ಹೆಸರು ಸುನಿಲ್ ಕುಮಾರ್. ನಿರ್ದೇಶಕ ಆಕ್ಷನ್ ಅಂದ ಕೂಡಲೇ ಫೈಟ್ ಸೀನ್ ಶುರುವಾಗುತ್ತದೆ. ಕೆಲ ಹೊತ್ತಿನ ನಂತರ ಕೃಷ್ಣ ಕೆಳಗೆ ಬೀಳುತ್ತಾರೆ ಮತ್ತು ತಲೆಗೆ ಸ್ವಲ್ಪ ಪೆಟ್ಟಾಗುತ್ತದೆ. ಕೂಡಲೇ ಅವರಿಗೆ ಗಾಯವಾದ ಸ್ಥಳವನ್ನು ಮೊದಲು ಮುಟ್ಟಿ ನೋಡಿ ನೋವಾಗುತ್ತಿದೆಯಾ ಅಂತ ಕಕ್ಕುಲತೆಯಿಂದ ವಿಚಾರಿಸಿದ್ದು ಪುನೀತ್ ರಾಜಕುಮಾರ.

ಅವರ ಪ್ರೀತಿ ಮತ್ತು ಕಾಳಜಿ ಕಂಡು ಕೃಷ್ಣ ದಂಗಾಗಿದ್ದಾರೆ. ಕೃಷ್ಣ ಒಬ್ಬ ಜ್ಯೂನಿಯರ್ ಕಲಾವಿದರಾಗಿದ್ದರೂ, ಅವರನ್ನು ತಮ್ಮ ಕುಟುಂಬದ ಒಬ್ಬ ಸದಸ್ಯನಂತೆ ಅವರು ಟ್ರೀಟ್ ಮಡುತ್ತಾರೆ. ಆಮೇಲೆ ಕೃಷ್ಣರ ಯಾವುದೋ ಒಂದು ಪ್ರಾಜೆಕ್ಟ್​ಗೆ ಪುನೀತ್ ಮನಸಾರೆ ಹಾರೈಸುತ್ತಾರೆ. ಕೃಷ್ಣ ಅವರು ಮದುವೆಯಾಗಿದ್ದು ಚಿತ್ರನಟಿ ಮಿಲನ ನಾಗರಾಜ್ ಅವರನ್ನು. ಮದುವೆಯಲ್ಲಿ ಹಾಜರಿದ್ದ ಪುನೀತ್ ದಂಪತಿಗಳನ್ನು ಹಾರೈಸುತ್ತಾರೆ.

ಕರೀಯರ್​ನಲ್ಲಿ ಅಣ್ಣನಂತೆ ಗೈಡ್ ಮಾಡುತ್ತಿದ್ದ ಪುನೀತ್ ಅವರ ಅಗಲುವಿಕೆ ಕೃಷ್ಣ ಅವರನ್ನು ವಿಚಲಿತರಾಗಿಸಿದೆ. ಇಂಗ್ಲಿಷ್ ನಲ್ಲಿ ಒಂದು ನೋಟ್ ಅನ್ನು ಬರೆದು ಅವರು ಆಗಲಿದ ಸೂಪರ್ ಸ್ಟಾರ್ಗೆ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ. ಆ ನೋಟ್ ನಲ್ಲಿ ಅವರ ಹೀಗೆ ಹೇಳಿದ್ದಾರೆ:

ನನ್ನ ಚಿಕ್ಕ ಪಯಣದದಲ್ಲಿ ನೀವು ಬಹುದೊಡ್ಡ ಭಾಗವಾಗಿದ್ದಿರಿ

ಧನ್ಯತೆಯ ಭಾವ ನನ್ನಲ್ಲಿ ಮನೆ ಮಾಡಿದೆ

ನೀವು ಮಾಡಿದ ಎಲ್ಲ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ

ನನ್ನ ಹೃದಯದಲ್ಲಿ ನೀವು ಶಾಶ್ವತವಾಗಿ ನೆಲೆಗೊಂಡಿರುತ್ತೀರಿ

ಇದನ್ನೂ ಓದಿ:   ಬೆಂಗಳೂರಿನ ಎಸ್​ಆರ್​ವಿ ಥಿಯೇಟರ್​ನಲ್ಲಿ ಕೊನೆಯದಾಗಿ ಅಟೆಂಡ್​ ಮಾಡಿದ್ದ ಪುನೀತ್​; ಇಲ್ಲಿದೆ ಸಿಸಿಟಿವಿ ವಿಡಿಯೋ

Follow us on

Click on your DTH Provider to Add TV9 Kannada