ಅಯೋಧ್ಯೆ ಲಕ್ಷ ದೀಪೋತ್ಸವದಲ್ಲಿ ಯೋಗಿ ಸರ್ಕಾರ ಈ ವರ್ಷ ಬೆಳಗಿಸಲಿದೆ ಹೆಚ್ಚುಕಡಿಮೆ 10 ಲಕ್ಷ ಹಣತೆಗಳು!

ಅಯೋಧ್ಯೆ ಲಕ್ಷ ದೀಪೋತ್ಸವದಲ್ಲಿ ಯೋಗಿ ಸರ್ಕಾರ ಈ ವರ್ಷ ಬೆಳಗಿಸಲಿದೆ ಹೆಚ್ಚುಕಡಿಮೆ 10 ಲಕ್ಷ ಹಣತೆಗಳು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 03, 2021 | 8:24 PM

ಕಳೆದ ವರ್ಷ ಯೋಗಿ ಅವರ ಸರ್ಕಾರ ರಾಮ್ ಕಿ ಪೈಡಿ ಘಾಟ್​ನಲ್ಲಿ​ 6,06,569 ಹಣತೆಗಳನ್ನು ಬೆಳಗಿ ಹೊಸ ದಾಖಲೆಯನ್ನು ನಿರ್ಮಿಸಿತ್ತು. ಅದಕ್ಕೂ ಒಂದು ವರ್ಷ ಮೊದಲು ಅಂದರೆ 2019ರಲ್ಲಿ 4,10,000 ದೀಪಗಳನ್ನು ಹಚ್ಚಿದ್ದು ಸಹ ಆಗಿನ ದಾಖಲೆಯಾಗಿತ್ತು.

2017 ರಲ್ಲಿ ಅಧಿಕಾರಕ್ಕೆ ಬಂದ ಯೋಗಿ ಆದಿತ್ಯನಾಥ ಅವರ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ಪ್ರತಿವರ್ಷ ದೀಪಗಳ ಹಬ್ಬ ದೀಪಾವಳಿ ಸಂದರ್ಭದಲ್ಲಿ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಲಕ್ಷ ದೀಪೋತ್ಸವ ಆಚರಿಸುತ್ತಿದೆ. ಗಮನಿಸಬೇಕಾದ ಸಂಗತಿಯೇನೆಂದರೆ, ಪ್ರತಿ ವರ್ಷದ ದೀಪಾವಳಿಯಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚು ಹಣತೆಗಳನ್ನು ನೂತನ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುತ್ತಿದೆ. ಈ ದೀಪಾವಳಿಯು ಸರ್ಕಾರದ 5 ವರ್ಷ ಅವಧಿಯ ಕೊನೆಯ ದೀಪಾವಳಿಯಾಗಿದೆ. ನಮಗೆಲ್ಲ ಗೊತ್ತಿರುವ ಹಾಗೆ 2022 ರಲ್ಲಿ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ನಡೆಯಲಿದೆ.

ಪ್ರಾಯಶಃ ನಿಮಗೆ ನೆನಪಿರಬಹುದು, ಕಳೆದ ವರ್ಷ ಯೋಗಿ ಅವರ ಸರ್ಕಾರ ರಾಮ್ ಕಿ ಪೈಡಿ ಘಾಟ್​ನಲ್ಲಿ​ 6,06,569 ಹಣತೆಗಳನ್ನು ಬೆಳಗಿ ಹೊಸ ದಾಖಲೆಯನ್ನು ನಿರ್ಮಿಸಿತ್ತು. ಅದಕ್ಕೂ ಒಂದು ವರ್ಷ ಮೊದಲು ಅಂದರೆ 2019ರಲ್ಲಿ 4,10,000 ದೀಪಗಳನ್ನು ಹಚ್ಚಿದ್ದು ಸಹ ಆಗಿನ ದಾಖಲೆಯಾಗಿತ್ತು. ನಮಗೆ ಲಭ್ಯವಾಗಿರುವ ಮೂಲಗಳ ಪ್ರಕಾರ ಈ ಬಾರಿ 10 ಲಕ್ಷಕ್ಕಿಂತಲೂ ಹೆಚ್ಚು ದೀಪಗಳನ್ನು ಬೆಳಗಿಸಲಾಗುವುದು.

ಅಯೋಧ್ಯೆಯ ರಾಮ ಮನೋಹರ ಲೋಹಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 14,000 ಸ್ವಯಂ ಸೇವಕರು ದೀಪ ಹಚ್ಚುವ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ದೀಪೋತ್ಸವ ಹೊರತಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ 500ಕ್ಕೂ ಹೆಚ್ಚು ಡ್ರೋಣ್​ಗಳು ಆಕಾಶದಲ್ಲಿ ಅನಿಮೇಶನ್ ಮತ್ತು ಸ್ಟಿಮುಲೇಶನ್ ಮೂಲಕ ರಾಮಾಯಣ ಯುಗದ ದೃಶ್ಯಗಳನ್ನು ಸೃಷ್ಟಿಸುವುದು ಸಹ ಸೇರಿದೆ. ಅಲ್ಲದೆ ಸರಯೂ ನದಿದಂಡೆಯ ಮೇಲಿರುವ ರಾಮ್ ಕಿ ಪೈಡಿ ಘಾಟ್ ನಲ್ಲಿ 3-ಡಿ ಹ್ಯಾಲೊಗ್ರಾಫಿಕ್ ಶೋ, 3-ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಮತ್ತು ಲೇಸರ್ ಶೋ ನಡೆಯಲಿದೆ.

ಇದನ್ನೂ ಓದಿ:   ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ರಸ್ತೆಯ ಮೇಲೆ ಗಜರಾಜ ಪ್ರತ್ಯಕ್ಷ, ಮಹಿಳೆ ಮಾಡಿದ 19 ಸೆಕೆಂಡ್​ಗಳ ವಿಡಿಯೋ ವೈರಲ್