AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ರಾಜಕುಮಾರ್ ಬದುಕಿದ್ದರೆ ಬೆಂಗಳೂರಿನ ಈ ಹುಡುಗನ ಪ್ರತಿಭೆ ಕಂಡು ಅಚ್ಚರಿಪಟ್ಟು ಪ್ರೋತ್ಸಾಹಿಸುತ್ತಿದ್ದರು!

ಪುನೀತ್ ರಾಜಕುಮಾರ್ ಬದುಕಿದ್ದರೆ ಬೆಂಗಳೂರಿನ ಈ ಹುಡುಗನ ಪ್ರತಿಭೆ ಕಂಡು ಅಚ್ಚರಿಪಟ್ಟು ಪ್ರೋತ್ಸಾಹಿಸುತ್ತಿದ್ದರು!

TV9 Web
| Updated By: shruti hegde|

Updated on: Nov 04, 2021 | 9:42 AM

Share

ದೀಪಕ್ ಅಕ್ಷಯ್ ಸುಮಾರು 500 ಕ್ಯೂಬ್​ಗಳನ್ನು ಬಳಸಿ ಪುನೀತ್ ಅವರ ಚಿತ್ರವನ್ನು ರಚಿಸಿದ್ದಾನೆ. ಅಪ್ಪು ಇದ್ದಿದ್ದರೆ ಇವನ ಪ್ರತಿಭೆಯನ್ನು ಮುಕ್ತವಾಗಿ ಕೊಂಡಾಡುತ್ತಿದ್ದರು.

ಪುನೀತ್ ರಾಜಕುಮಾರ ಅದೆಷ್ಟು ಅಭಿಮಾನಿಗಳು! ಕಿರಿವಯಸ್ಸಿನ ಮಕ್ಕಳಿಂದ ಹಿಡಿದು ವಯಸ್ಸು ಮಾಗಿದ ಹಿರಿಯರವರೆಗೆ ಎಲ್ಲರೂ ಅವರ ಅಭಿಮಾನಿಗಳೇ. ಕಾಲೇಜುಗಳಲ್ಲಿ ಓದುತ್ತಿರುವ ಯುವಕರಿಗಂತೂ ಅವರು ಐಕಾನ್ ಆಗಿದ್ದರು. ಶಿವ ಸೇನೆಯ ಸಂಸ್ಥಾಪಕ ಬಾಳಾ ಠಾಕ್ರೆ ನಿಧನ ಹೊಂದಿದಾಗ ಅವರ ಅಂತಿಮ ದರ್ಶನ ಪಡೆದವರು 15 ಲಕ್ಷ ಜನರಂತೆ. ಆಗ ಮಾಧ್ಯಮಗಳಲ್ಲಿ ಅದು ಚರ್ಚೆಯ ವಿಷಯವಾಗಿತ್ತು. ಮಹಾತ್ಮಾ ಗಾಂಧಿಯವರನ್ನು ಹೊರತು ಪಡಿಸಿದರೆ, ಸ್ವಾತಂತ್ರ್ಯ ಸಿಕ್ಕ ನಂತರ ಭಾರತದಲ್ಲಿ ಅತಿ ಹೆಚ್ಚು ಜನ ಠಾಕ್ರೆಯವರ ಅಂತಿಮ ದರ್ಶನ ಪಡೆದಿದ್ದರು. ಆದರೆ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ ಪ್ರಸಾದ ಅವರು ನೀಡಿರುವ ಹೇಳಿಕೆಯೊಂದರ ಪ್ರಕಾರ, ಪುನೀತ್ ಅವರ ಅಂತಿಮ ದರ್ಶನ ಪಡೆದ ಜನರ ಸಂಖ್ಯೆ 25 ಲಕ್ಷ!!

ಅವರ ಜನಪ್ರಿಯತೆ ಎಷ್ಟಿತ್ತು ಅಂತ ತಿಳಿಯಲು ಇಷ್ಟು ಸಾಕು. ಈ ವಿಡಿಯೋನಲ್ಲಿರುವ ಯುವಕನನ್ನು ನೋಡಿ ಮತ್ತು ಪುನೀತ್ ಬಗ್ಗೆ ಅವನಿಗಿರುವ ಪ್ರೀತಿ ಮತ್ತು ಅಭಿಮಾನವನ್ನು ಗಮನಿಸಿ. ಅಂದಹಾಗೆ, ಇವನ ಹೆಸರು ಎಲ್ ದೀಪಕ್ ಅಕ್ಷಯ್ ಮತ್ತು ಬೆಂಗಳೂರಿನ ಪಿಎಸ್ಪಿಬಿ ಕಾಲೇಜಿನಲ್ಲಿ ಓದುತ್ತಿದ್ದಾನೆ. ಹುಡುಗನ ಪ್ರತಿಭೆಗೆ ನಾವು ತಲೆದೂಗಲೇ ಬೇಕು, ರೂಬಿಕ್ಸ್ ಕ್ಯೂಬ್ ಅನ್ನು ಬಣ್ಣದ ಆಧಾರದಲ್ಲಿ ಸೆಟ್ ಮಾಡುವುದು 10 ಜನರಲ್ಲಿ ಕೇವಲ ಇಬ್ಬರಿಗೆ ಮಾತ್ರ ಸಾಧ್ಯವಾಗಬಹುದು.

ಆದರೆ ದೀಪಕ್ ಅಕ್ಷಯ್ ಸುಮಾರು 500 ಕ್ಯೂಬ್​ಗಳನ್ನು ಬಳಸಿ ಪುನೀತ್ ಅವರ ಚಿತ್ರವನ್ನು ರಚಿಸಿದ್ದಾನೆ. ಅಪ್ಪು ಇದ್ದಿದ್ದರೆ ಇವನ ಪ್ರತಿಭೆಯನ್ನು ಮುಕ್ತವಾಗಿ ಕೊಂಡಾಡುತ್ತಿದ್ದರು. ಅಮೋಘವಾದ ರೀತಿಯಲ್ಲಿ ಚಿತ್ರ ರಚಿಸಿದ ನಂತರ ಅವನು, ತನ್ನ ಅತ್ಯಂತ ಪ್ರೀತಿಯ ನಟನಿಗೆ ಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸುವ ಭಾವನೆ ಉತ್ಕಟವಾಗಿತ್ತು, ರೂಬಿಕ್ಸ್ ಕ್ಯೂಬ್ಗಳನ್ನು ಬಳಸಿ ಅವರ ರಚಿಸಿ ಅವರಿಗೆ ನಮನಗಳನ್ನು ಸಲ್ಲಿಸಿರುವುದಾಗಿ ಹೇಳಿದ್ದಾನೆ. ಹ್ಯಾಟ್ಸ್ ಆಫ್ ಟು ಯೂ ಮೇಟ್.

ಇದನ್ನೂ ಓದಿ:  ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್​ ಸೇತುಪತಿ ಮೇಲೆ ಹಲ್ಲೆಗೆ ಯತ್ನ, ವಿಡಿಯೋ ವೈರಲ್