Puneeth Rajkumar: ಮುಂದಿನ ವಾರ ಪುನೀತ್ ನಿವಾಸಕ್ಕೆ ರಜಿನಿಕಾಂತ್ ಭೇಟಿ ಸಾಧ್ಯತೆ; ರಾಜ್ ಬಹದ್ದೂರ್ ಮಾಹಿತಿ
Rajinikanth: ನಟ ರಜಿನಿಕಾಂತ್ ಮುಂದಿನ ವಾರ ಪುನೀತ್ ನಿವಾಸಕ್ಕೆ ತೆರಳಿ ಸಾಂತ್ವನ ಹೇಳುವ ಸಾಧ್ಯತೆ ಇದೆ ಎಂದು ರಜಿನಿ ಸ್ನೇಹಿತ ರಾಜ್ ಬಹದ್ದೂರ್ ಹೇಳಿದ್ದಾರೆ.
ಬೆಂಗಳೂರು: ಮುಂದಿನ ವಾರ ಪುನೀತ್ ಮನೆಗೆ ರಜಿನಿಕಾಂತ್ (Rajinikanth) ಭೇಟಿ ನೀಡುವ ಸಾಧ್ಯತೆ ಇದೆ ಎಂದು ಟಿವಿ9ಗೆ ರಜಿನಿಕಾಂತ್ ಸ್ನೇಹಿತ ರಾಜ್ ಬಹದ್ದೂರ್ (Raj Bahadur) ಹೇಳಿಕೆ ನೀಡಿದ್ದಾರೆ. ಅಪ್ಪುಗೆ ಹೀಗಾಗಿದೆ ಎಂದು ಕೇಳಿ ರಜಿನಿ ಬೇಜಾರು ಮಾಡಿಕೊಂಡರು. ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಯ್ತು ಎಂದು ನೊಂದುಕೊಂಡರು. ಅವರು ಆಸ್ಪತ್ರೆಯಲ್ಲಿ ಇದ್ದಿದ್ದರಿಂದ ಬರಲು ಸಾಧ್ಯವಾಗಲಿಲ್ಲ. ಆದರೆ ಖಂಡಿತವಾಗಿಯೂ ರಜಿನಿ ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ ಎಂದು ರಾಜ್ ಬಹದ್ದೂರ್ ನುಡಿದಿದ್ದಾರೆ. ರಜಿನಿ ಮತ್ತು ಪುನೀತ್ ನಡುವೆ ಅಪರೂಪದ ಬಾಂಧವ್ಯವಿತ್ತು. ಡಾ.ರಾಜ್ ಇರುವ ಕಾಲದಿಂದಲೂ ನಾವು ಅವರ ಮನೆಗೆ ತೆರಳುತ್ತಿದ್ದೆವು. ಆಗ ಬಾಲಕನಾಗಿದ್ದ ಪುನೀತ್ ಓಡಿಬಂದು, ಅಂಕಲ್… ಎಂದು ರಜಿನಿಯವರನ್ನು ತಬ್ಬಿಕೊಳ್ಳುತ್ತಿದ್ದ. ಪುನೀತ್ ಮೇಲೆ ರಜಿನಿಗೆ ಅಪಾರ ಪ್ರೀತಿಯಿತ್ತು ಎಂದು ರಾಜ್ ಬಹದ್ದೂರ್ ನೆನಪಿಸಿಕೊಂಡಿದ್ದಾರೆ.
ಇಂದು ರಜಿನಿಕಾಂತ್ ಅವರ ‘ಅಣ್ಣಾತೆ’ ಚಿತ್ರ ಬಿಡುಗಡೆಯಾಗಿದ್ದು, ರಾಜ್ ಬಹದ್ದೂರ್ ಚಿತ್ರ ವೀಕ್ಷಿಸಿದ್ದಾರೆ. ಇದೇ ವೇಳೆ ಅವರು ಪುನೀತ್ ಭಾವಚಿತ್ರಕ್ಕೆ ನಮನ ಸಲ್ಲಿಸಿದ್ದು, ಅಭಿಮಾಣಿಗಳಿಗೆ ಸಸಿ ವಿತರಣೆ ಮಾಡಿದ್ದಾರೆ.
ಇದನ್ನೂ ಓದಿ:
Puneeth Rajkumar: ಡಾ.ರಾಜ್ ಕುಟುಂಬದಿಂದ ಅಭಿಮಾನಿಗಳಿಗೆ ನವೆಂಬರ್ 9ರಂದು ಅನ್ನ ಸಂತರ್ಪಣೆ ಕಾರ್ಯಕ್ರಮ
ಪುನೀತ್ ನಿಧನ ವಾರ್ತೆ ಕೇಳಿ ರಜನಿಕಾಂತ್ ಪ್ರತಿಕ್ರಿಯೆ ಹೇಗಿತ್ತು? ಶಿವರಾಜ್ಕುಮಾರ್ ವಿವರಿಸಿದ್ದು ಹೀಗೆ