ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ರಸ್ತೆಯ ಮೇಲೆ ಗಜರಾಜ ಪ್ರತ್ಯಕ್ಷ, ಮಹಿಳೆ ಮಾಡಿದ 19 ಸೆಕೆಂಡ್ಗಳ ವಿಡಿಯೋ ವೈರಲ್
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ರಸ್ತೆ ಇಕ್ಕೆಲುಗಳಲ್ಲಿ ಗಜರಾಜ ಪ್ರತ್ಯಕ್ಷನಾಗಿದ್ದಾನೆ. ಬಂಡೀಪುರದಿಂದ ಊಟಿಗೆ ಹೋಗುವ ಮಾರ್ಗ ಮಧ್ಯೆ ರಸ್ತೆಯಲ್ಲಿ ಹೋಗುವಾಗ ಗಂಡು ಆನೆ ಪ್ರತ್ಯಕ್ಷವಾಗಿದ್ದು ವಾಹನದಲ್ಲಿ ತೆರಳುತ್ತಿದ್ದ ಮಹಿಳೆ ಕೆಳಗೆ ಇಳಿದಿದ್ದಾರೆ.
ಚಾಮರಾಜನಗರ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಓಡಾಡುವ ಜನರಿಗೆ ಆಗಾಗ ಹುಲಿ, ಚಿರತೆ, ಆನೆಗಳು ರಸ್ತೆ ಮೇಲೆ ಕಂಡು ಬರುತ್ತಿರುತ್ತವೆ. ಇದರಿಂದ ಜನ ಭಯಭೀತರಾಗಿ ವಾಹನ ಬಿಟ್ಟು ಅಥವಾ ವಾಹನದಲ್ಲೇ ಓಡಿ ಹೋಗುವ ಅದೆಷ್ಟೂ ಸಂಗತಿಗಳನ್ನು ಕೇಳುತ್ತಲೇ ಇರುತ್ತೇವೆ. ಇನ್ನು ಮತ್ತೊಂದು ಕಡೆ ಅಪರೂಪಕ್ಕೆ ಆನೆ ನೋಡಿದ ಖುಷಿಯಲ್ಲಿ ಸವಾರರು ಆನೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಅನಾವುತವನ್ನು ಬರ ಮಾಡಿಕೊಳ್ಳುವ ಅದೆಷ್ಟೂ ಘಟನೆಗಳು ನಡೆದಿವೆ. ಆದ್ರೆ ಇಷ್ಟೆಲ್ಲಾ ನಡೆದರೂ ಅರಣ್ಯ ಅಧಿಕಾರಿಗಳಾಗಲಿ ಇದ್ದಕ್ಕೆ ಸಂಬಂಧಿಸಿದವರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಮತ್ತೊಮ್ಮೆ ಇದೇ ರೀತಿಯ ಘಟನೆ ಮರು ಕಳಿಸಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ರಸ್ತೆ ಇಕ್ಕೆಲುಗಳಲ್ಲಿ ಗಜರಾಜ ಪ್ರತ್ಯಕ್ಷನಾಗಿದ್ದಾನೆ. ಬಂಡೀಪುರದಿಂದ ಊಟಿಗೆ ಹೋಗುವ ಮಾರ್ಗ ಮಧ್ಯೆ ರಸ್ತೆಯಲ್ಲಿ ಹೋಗುವಾಗ ಗಂಡು ಆನೆ ಪ್ರತ್ಯಕ್ಷವಾಗಿದ್ದು ವಾಹನದಲ್ಲಿ ತೆರಳುತ್ತಿದ್ದ ಮಹಿಳೆ ಕೆಳಗೆ ಇಳಿದಿದ್ದಾರೆ. ಆನೆ ಕಂಡು ಒಂದು ಕಡೆ ಸಂತೋಷ ಪಟ್ಟಿದ್ದು ಮತ್ತೊಂದು ಕಡೆ ಗಾಬರಿಗೊಂಡಿದ್ದಾರೆ. ಸುಮಾರು 19 ಸೆಕೆಂಡ್ಗಳ ವಿಡಿಯೋ ವೈರಲ್ ಆಗಿದೆ.
ಮೊದಲಿಗೆ ಮಹಿಳೆ ರಸ್ತೆ ಪಕ್ಕ ಕಂಡ ಆನೆಯನ್ನು ನೋಡಿ ಸಂತೋಷಗೊಂಡಿದ್ದು ‘ನೀವು ನೊಡ್ತಾ ಇರೋದು ಗಜರಾಜ. ಅವರು ನಮ್ಮನೇ ನೋಡ್ತಾ ಇದ್ದಾರೆ ಎಂದು ವಿಡಿಯೋ ಮಾಡಿದ್ದಾರೆ’. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರಿಯಾಗಿ ಗಸ್ತು, ಮೇಲ್ವಿಚಾರಣೆ ನಡೆಸದ ಅಧಿಕಾರಿಗಳ ವಿರುದ್ಧ ಪರಿಸರವಾದಿಗಳು ಗರಂ ಆಗಿದ್ದಾರೆ.
ಕಬಿನಿಯಲ್ಲಿ ಹುಲಿ ಬಿಂದಾಸ್ ಓಡಾಟ ಇನ್ನು ಮತ್ತೊಂದೆಡೆ ಕಬಿನಿ ಹಿನ್ನೀರಿನಲ್ಲಿ ಹುಲಿ ಬಿಂದಾಸ್ ಆಗಿ ಓಡಾಡುವ ದೃಶ್ಯ ಕಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ಮೈಸೂರು ಜಿಲ್ಲೆ ಹೆಚ್ಡಿ ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿಗೆ ತೆರಳಿದ್ದವರಿಗೆ ಹುಲಿಯ ದರ್ಶನವಾಗಿದೆ. ನೀರಿನ ಹೊಂಡದ ಬಳಿ ನಿಂತಿದ್ದ ಹುಲಿ ಸಫಾರಿ ವಾಹನ ಬಂದಾಗ ಕಾಡಿನ ಕಡೆಗೆ ಓಡಿ ಹೋಗಿದೆ. ಬಳಿಕ ಒಂದು ಮರದ ಬಳಿ ಹೋಗಿ ಮತ್ತೆ ರಸ್ತೆಗೆ ಬಂದು ನಿಂತಿದೆ. ಹುಲಿಯ ಓಡಾಡದ ದೃಶ್ಯವನ್ನು ಕಂಡು ಪ್ರವಾಸಿಗರು ಪುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: ಮೈಸೂರು: ಕಬಿನಿ ಹಿನ್ನೀರಿನಲ್ಲಿ ಹುಲಿಯ ಬಿಂದಾಸ್ ಓಡಾಟ; ವಿಡಿಯೋ ನೋಡಿ