ಮಿಸ್ ಟ್ರಾನ್ಸ್ ಗ್ಲೋಬಲ್ ಸ್ಪರ್ಧೆ ರವಿವಾರ : ಕೇರಳದ ಶೃತಿ ಸಿತಾರಾ ಭಾರತವನ್ನು ಪ್ರತಿನಿಧಿಸಲಿದ್ದಾರೆ
ಕೇರಳ ಮೂಲದವರಾಗಿರುವ ಸಿತಾರಾ ಹುಟ್ಟಿದ್ದು ಹುಡುಗನಾಗಿ ಹಾಗೂ ಅವರ ಹೆಸರು ಪ್ರವೀಣ್ ಆಗಿತ್ತು. ಆದರೆ, ಬಾಲ್ಯದಲ್ಲೇ ಅವರಿಗೆ ಹುಡುಗಿಯಾಗುವ ತುಡಿತವಿತ್ತಂತೆ.
ಭಾರತದ ಹಲವಾರು ಚೆಲುವೆಯರು ವಿಶ್ವ ಸುಂದರಿ, ಜಾಗತಕಿ ಸುಂದರಿಗಳಾಗಿ ಮಿಂಚಿದ್ದಾರೆ, ಕಿರೀಟ ತೊಟ್ಟು ಮೆರೆದಿದ್ದಾರೆ. ಹಾಹೆಯೇ ಹಗಲಿರುಳು ದೆಹವನ್ನು ಸಾಮು ಮಾಡಿಕೊಂಡ ಪುರುಷರು ವಿಶ್ವ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಮಹಿಳೆಯರಾಯಿತು, ಪುರುಷರೂ ಆಯಿತು ಇನ್ಯಾರು ಉಳಿದಿದ್ದು ಅಂತ ಯೋಚಿಸುತ್ತಿದ್ದೀರಾ? ನಮ್ಮ ಊಹೆ ನಿಜ, ತೃತೀಯ ಲಿಂಗಿಗಳಿಗೂ ಸೌಂದರ್ಯ ಏರ್ಪಡಿಸಲಾಗುತ್ತಿದೆ ಮತ್ತು ಭಾರತೀಯರು ಇದರಲ್ಲೂ ಹಿಂದೆ ಬಿದ್ದಿಲ್ಲ ಮಾರಾಯ್ರೇ. ಹೌದು ಇದೇ ರವಿವಾರದಂದು, ಮಿಸ್ ಟ್ರಾನ್ಸ್ ಗ್ಲೋಬಲ್ ಸ್ಫರ್ಧೆ ವರ್ಚ್ಯುಯಲ್ ಆಗಿ ನಡೆಯುತ್ತಿದ್ದು ಅದರಲ್ಲಿ ಈ ವಿಡಿಯೋನಲ್ಲಿ ಕಾಣುತ್ತಿರುವ ಬೆಡಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅಸಲಿಗೆ ಈ ಈವೆಂಟ್ ಜೂನ್ 12 ರಂದು ಲಂಡನ್ನಲ್ಲಿ ನಡೆಯಬೇಕಿತ್ತು. ಕೊವಿಡ್-19 ಪಿಡುಗಿನಿಂದಾಗಿ ಇದು ರದ್ದಾಗಿದ್ದಲ್ಲದೆ ಈಗ ವರ್ಚ್ಯುಯಲ್ ಅಗಿ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ಅಂದಹಾಗೆ, ಈ ಬೆಡಗಿಯ ಹೆಸರು ಶೃತಿ ಸಿತಾರಾ. ಕೇರಳ ಮೂಲದವರಾಗಿರುವ ಸಿತಾರಾ ಹುಟ್ಟಿದ್ದು ಹುಡುಗನಾಗಿ ಹಾಗೂ ಅವರ ಹೆಸರು ಪ್ರವೀಣ್ ಆಗಿತ್ತು. ಆದರೆ, ಬಾಲ್ಯದಲ್ಲೇ ಅವರಿಗೆ ಹುಡುಗಿಯಾಗುವ ತುಡಿತವಿತ್ತಂತೆ. ನಂತರದ ದಿನಗಳಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡು ಅವರು ಶೃತಿ ಸಿತಾರಾ ಆದರು ಮತ್ತು 2018 ರಿಂದ ಮಾಡೆಲ್ ಅಗಿ ಮಿಂಚತೊಡಗಿದರು. ಇದೇ ವರ್ಷ ಮಿಸ್ ಟ್ರಾನ್ಸ್ ಗ್ಲೋಬಲ್ ಇಂಡಿಯಾ ಪಟ್ಟವನ್ನು ಧರಿಸಿ ಈಗ ಮಿಸ್ ಟ್ರಾನ್ಸ್ ಗ್ಲೋಬಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
‘ಮಿಸ್ ಟ್ರಾನ್ಸ್ ಗ್ಲೋಬಲ್ ಇಂಡಿಯಾ ಕಿರೀಟ ಧರಿಸುವ ವಿಶ್ವಾಸ ನನಗಿರಲಿಲ್ಲ. ಪ್ರಶಸ್ತಿ ಗೆದ್ದಿರುವುದು ಪ್ರೈಡ್ ಸಮುದಾಯಕ್ಕೆ ಹೆಮ್ಮೆಯ ವಿಚಾರವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರೋದು ರೋಮಾಂಚನ ಹುಟ್ಟಿಸಿದೆ,’ ಎಂದು ಸಿತಾರಾ ಕೊಚ್ಚಿಯಲ್ಲಿ ಮಾಧ್ಯಮದವರಿಗೆ ಹೇಳಿದರು.
ನಟಿಯಾಗಬೇಕೆನ್ನುವುದು ಶೃತಿಯವರ ಕನಸಾಗಿದೆ. ಮಲೆಯಾಳಂ ಚಿತ್ರರಂಗದ ಕೆಲ ನಿರ್ಮಾಪಕರು ಅವರನ್ನು ಈಗಾಗಲೇ ಸಂಪರ್ಕಿಸಿದ್ದಾರಂತೆ. ತೆರೆಮರೆಯಲ್ಲಿ ಸಾಕಷ್ಟು ತೃತೀಯ ಲಿಂಗಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ತೆರೆಯ ಮೇಲೆ ತನ್ನ ಪ್ರತಿಭೆ ಮೆರೆಯುವುದು ಸಿತಾರಾ ಅವರ ಮಹದಾಸೆ.
ಇದನ್ನೂ ಓದಿ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ರಸ್ತೆಯ ಮೇಲೆ ಗಜರಾಜ ಪ್ರತ್ಯಕ್ಷ, ಮಹಿಳೆ ಮಾಡಿದ 19 ಸೆಕೆಂಡ್ಗಳ ವಿಡಿಯೋ ವೈರಲ್