ವಿಶೇಷ ಹಾಡಿನ ಮೂಲಕ ಪುನೀತ್ಗೆ ನಮನ ಸಲ್ಲಿಸಿದ ಯುವತಿ
ಕುಟುಂಬ ಪುನೀತ್ ಇಲ್ಲ ಎನ್ನುವ ನೋವಿನ ಜತೆ ಜೀವನ ನಡೆಸಿಕೊಂಡು ಹೋಗಬೇಕಿದೆ. ಈ ಮಧ್ಯೆ ಅಭಿಮಾನಿಗಳು ಕೂಡ ಅವರ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ವೇದಿಕಾ ಎನ್ನುವ ಯುವತಿ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಪೈಕಿ ಕಿರಿಯವರು ಪುನೀತ್. ಅವರಿಗೆ 46 ವರ್ಷ ವಯಸ್ಸಾಗಿತ್ತು. ಆದರೆ, ದೇವರು ಮೊದಲು ಕರೆದುಕೊಂಡಿದ್ದು ಪುನೀತ್ ಅವರನ್ನು. ಮನೆಯ ಕಿರಿಯ ಮಗ ಮೊದಲು ಹೋದನಲ್ಲ ಎನ್ನುವ ಕೊರಗು ಹಾಗೂ ದುಃಖ ರಾಜ್ಕುಮಾರ್ ಕುಟುಂಬವನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಇನ್ನೂ ಸಾಧನೆ ಮಾಡುತ್ತಿರುವ ವಯಸ್ಸಿನಲ್ಲೇ ಅವರು ನಿಧನ ಹೊಂದಿದ್ದು ನಿಜಕ್ಕೂ ಬೇಸರದ ಸಂಗತಿ. ಆದರೆ, ಈ ನೋವಿನ ಜತೆ ಕುಟುಂಬ ಜೀವನ ನಡೆಸಿಕೊಂಡು ಹೋಗಬೇಕಿದೆ. ಈ ಮಧ್ಯೆ ಅಭಿಮಾನಿಗಳು ಕೂಡ ಅವರ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ವೇದಿಕಾ ಎನ್ನುವ ಯುವತಿ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ತಮ್ಮದೇ ದಾಟಿಯಲ್ಲಿ ವಿಶೇಷ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ ವೇದಿಕಾ. ಅಪ್ಪು ನೆನಪಿನಲ್ಲಿ ಕಣ್ಣೀರು ಹಾಕಿ ಹಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಪರಮಾತ್ಮ ಸಿನಿಮಾದ ಹಾಡನ್ನು ಅವರು ಹಾಡಿದ್ದಾರೆ.
ಇದನ್ನೂ ಓದಿ: ನಟ ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ