ಬಾಕ್ಸ್​​ ಆಫೀಸ್​ನಲ್ಲಿ ಲಾಟರಿ ಹೊಡೆದ ಅಕ್ಷಯ್​ ಕುಮಾರ್​; ಗಳಿಕೆಯಲ್ಲಿ ‘ಸೂರ್ಯವಂಶಿ’ ಕಮಾಲ್​

ನವೆಂಬರ್​ 5ರಂದು ‘ಸೂರ್ಯವಂಶಿ’ ತೆರೆಗೆ ಬಂದಿತ್ತು. ಈ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ಕೇಳಿ ಬಂತು. ಪ್ರೇಕ್ಷಕರು ಕೂಡ ಸಿನಿಮಾ ಇಷ್ಟಪಟ್ಟರು. ಪರಿಣಾಮ ‘ಸೂರ್ಯವಂಶಿ’ ಬಾಕ್ಸ್​ ಆಫೀಸ್​ ಕಲೆಕ್ಷನ್​ ಹೆಚ್ಚುತ್ತಿದೆ.

ಬಾಕ್ಸ್​​ ಆಫೀಸ್​ನಲ್ಲಿ ಲಾಟರಿ ಹೊಡೆದ ಅಕ್ಷಯ್​ ಕುಮಾರ್​; ಗಳಿಕೆಯಲ್ಲಿ ‘ಸೂರ್ಯವಂಶಿ’ ಕಮಾಲ್​
‘ಸೂರ್ಯವಂಶಿ’ ಸಿನಿಮಾ ಪೋಸ್ಟರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 14, 2021 | 1:42 PM

ಅಕ್ಷಯ್​ ಕುಮಾರ್​ (Akshay Kumar) ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ. ಒಪ್ಪಿಕೊಂಡ ವೇಗದಲ್ಲೇ ಅವರು ಒಪ್ಪಿಕೊಂಡ ಕೆಲಸ ಪೂರ್ಣಗೊಳಿಸುತ್ತಾರೆ. ಅವರ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡುತ್ತವೆ. ಈ ಕಾರಣಕ್ಕೆ ನಿರ್ಮಾಪಕರು ಕೂಡ ಅಕ್ಕಿ ಜತೆ ಕೆಲಸ ಮಾಡೋಕೆ ಅಂಜುವುದಿಲ್ಲ. ಆದರೆ, ಅವರ ನಟನೆಯ ‘ಬೆಲ್​ ಬಾಟಮ್​’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸೋತಿತ್ತು. ಉತ್ತಮ ವಿಮರ್ಶೆ ಸಿಕ್ಕ ಹೊರತಾಗಿಯೂ ಸಿನಿಮಾ ಸೋತಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಈ ಕಾರಣಕ್ಕೆ ಬಾಲಿವುಡ್​ ಮಂದಿ ಸಿನಿಮಾ ರಿಲೀಸ್​ ಮಾಡೋಕೆ ಹಿಂದೇಟು ಹಾಕಿದ್ದರು. ಈ ಸಮಯದಲ್ಲೇ ಅಕ್ಷಯ್​ ಕುಮಾರ್​ ನಟನೆಯ ಮತ್ತೊಂದು ಚಿತ್ರ ತೆರೆಗೆ ಬಂದು ಕಮಾಲ್​ ಮಾಡಿದೆ. ದೀಪಾವಳಿ ನಿಮಿತ್ತ ತೆರೆಗೆ ಬಂದ ‘ಸೂರ್ಯವಂಶಿ’ ಸಿನಿಮಾ (Sooryavanshi Movie) ಒಳ್ಳೆಯ ಗಳಿಕೆ ಮಾಡುತ್ತಿದೆ. 

ನವೆಂಬರ್​ 5ರಂದು ‘ಸೂರ್ಯವಂಶಿ’ ತೆರೆಗೆ ಬಂದಿತ್ತು. ಈ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ಕೇಳಿ ಬಂತು. ಪ್ರೇಕ್ಷಕರು ಕೂಡ ಸಿನಿಮಾ ಇಷ್ಟಪಟ್ಟರು. ಪರಿಣಾಮ ‘ಸೂರ್ಯವಂಶಿ’ ಬಾಕ್ಸ್​ ಆಫೀಸ್​ ಕಲೆಕ್ಷನ್​ ಹೆಚ್ಚುತ್ತಿದೆ. ಶನಿವಾರ (ನವೆಂಬರ್​ 13) ಈ ಸಿನಿಮಾ 10.50 ಕೋಟಿ ಗಳಿಸಿದೆ. ಈ ಮೂಲಕ ಚಿತ್ರದ ಬಾಕ್ಸ್​ ಆಫೀಸ್​ ಗಳಿಕೆ 138 ಕೋಟಿ ಆಗಿದೆ. ಇಂದು (ನವೆಂಬರ್​ 14) ಭಾನುವಾರ ಆಗಿರುವುದರಿಂದ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಬಹುದು. ಈ ಮೂಲಕ ಚಿತ್ರ ಅನಾಯಾಸವಾಗಿ 150 ಕೋಟಿ ರೂಪಾಯಿ ಗಳಿಕೆ ಮಾಡಲಿದೆ.

ಸಾಕಷ್ಟು ಚಿತ್ರ ತಂಡಗಳು ರಿಲೀಸ್​ ಮಾಡೋಕೆ ಹಿಂದೇಟು ಹಾಕುತ್ತಿದ್ದವು. ಇನ್ನೂ ಕೆಲ ಸಿನಿಮಾಗಳು ನೇರವಾಗಿ ಒಟಿಟಿ ಮೊರೆ ಹೋಗಿದ್ದವು. ಈಗ ‘ಸೂರ್ಯವಂಶಿ’ ಬಾಕ್ಸ್​ ಆಫೀಸ್​ ಗಳಿಕೆ ನೋಡಿ ಎಲ್ಲರಿಗೂ ಹೊಸ ಹುರುಪು ಸಿಕ್ಕಿದೆ. ಈ ಮೂಲಕ ಸಿನಿಮಾವನ್ನು ನೇರವಾಗಿ ಚಿತ್ರಮಂದಿರದಲ್ಲೇ ರಿಲೀಸ್​ ಮಾಡುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಅಕ್ಷಯ್​ ಕುಮಾರ್​ ಚಿತ್ರ ರಿಲೀಸ್​ ಆದ ದಿನವೇ ಲೀಕ್​ ಆಗಿತ್ತು. ಕೆಲ ಆನ್​ಲೈನ್​ ತಾಣಗಳಲ್ಲಿ ಸಿನಿಮಾದ ಪ್ರತಿ ಹರಿದಾಡಿತ್ತು. ಆದಾಗ್ಯೂ, ಗಳಿಕೆಯಲ್ಲಿ ಕೊಂಚವೂ ಕುಗ್ಗಿಲ್ಲ. ಇದು ಚಿತ್ರತಂಡದ ಸಂತಸವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಮಂಕಾಗಿದ್ದ ಚಿತ್ರಮಂದಿರಗಳ ವಹಿವಾಟಿಗೆ ಮರುಜೀವ ನೀಡಿದ ಅಣ್ಣಾಥೆ, ಸೂರ್ಯವಂಶಿ, ಎಟರ್ನಲ್ಸ್​

ಬಾಕ್ಸಾಫೀಸ್ ಲೂಟಿ‌ ಮಾಡುತ್ತಿರುವ ಸೂರ್ಯವಂಶಿ ಚಿತ್ರಕ್ಕೆ ಅಕ್ಷಯ್, ಕತ್ರಿನಾ ಪಡೆದ ಸಂಭಾವನೆ ಇಷ್ಟೊಂದಾ?

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್