AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajkummar Rao: ನಿಶ್ಚಿತಾರ್ಥ ಮಾಡಿಕೊಂಡ ಬಾಲಿವುಡ್ ಪ್ರೇಮ ಪಕ್ಷಿಗಳು; ಸುಂದರ ಕ್ಷಣದ ವಿಡಿಯೋ ಇಲ್ಲಿದೆ

Patralekha: ಬಾಲಿವುಡ್​ನ ತಾರಾ ಜೋಡಿಗಳಲ್ಲಿ ಒಂದಾಗಿರುವ ರಾಜ್​ಕುಮಾರ್ ರಾವ್ ಹಾಗೂ ಪತ್ರಲೇಖಾ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Rajkummar Rao: ನಿಶ್ಚಿತಾರ್ಥ ಮಾಡಿಕೊಂಡ ಬಾಲಿವುಡ್ ಪ್ರೇಮ ಪಕ್ಷಿಗಳು; ಸುಂದರ ಕ್ಷಣದ ವಿಡಿಯೋ ಇಲ್ಲಿದೆ
ರಾಜ್​ಕುಮಾರ್ ರಾವ್, ಪತ್ರಲೇಖಾ
TV9 Web
| Edited By: |

Updated on: Nov 14, 2021 | 11:50 AM

Share

ಬಾಲಿವುಡ್​ನಲ್ಲಿ ವಿಶಿಷ್ಟ ಪಾತ್ರಗಳ ಮುಖಾಂತರ ಗುರುತಿಸಿಕೊಂಡಿರುವ ನಟ ರಾಜ್​ಕುಮಾರ್​​ ರಾವ್ ಮತ್ತು ನಟಿ ಪತ್ರಲೇಖಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತೆರೆಯ ಮೇಲೆ ದಂಪತಿಯಾಗಿ ಬಣ್ಣಹಚ್ಚಿದ್ದ ಈ ಜೋಡಿ ಈಗ ರಿಯಲ್ ಲೈಫ್​ನಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. ಶನಿವಾರ ಆಪ್ತರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಈ ತಾರಾ ಜೋಡಿ ಮದುವೆಗೆ ಪರಸ್ಪರ ಒಪ್ಪಿಗೆಯನ್ನು ಕೇಳಿ, ರಿಂಗ್ ವಿನಿಮಯ ಮಾಡಿಕೊಂಡಿದ್ದಾರೆ. ಚಂಡೀಗಡದ ಸುಖ್​ವಿಲ್ಸ್ ಸ್ಪಾ ರೆಸಾರ್ಟ್​ನಲ್ಲಿ ನಡೆದ ಕಾರ್ಯಕ್ರಮದ ವಿಡಿಯೋ ಹಾಗೂ ಚಿತ್ರಗಳು ಪ್ರಸ್ತುತ ಆನ್​ಲೈನ್​ನಲ್ಲಿ ವೈರಲ್ ಆಗಿವೆ. ರಾಜ್​ಕುಮಾರ್ ರಾವ್ ಗೆಳತಿಯ ಮುಂದೆ ಮಂಡಿಯೂರಿ ಕುಳಿತು, ‘ಪತ್ರಲೇಖಾ, ನನ್ನನ್ನು ಮದುವೆಯಾಗುತ್ತೀರಾ?’ ಎಂದು ಕೇಳುವಾಗ, ಪತ್ರಲೇಖಾ ಕೂಡಾ ಮಂಡಿಯೂರಿ ಕುಳಿತು, ‘ರಾಜ್​ಕುಮಾರ್ ರಾವ್, ನನ್ನನ್ನು ಮದುವೆಯಾಗುತ್ತೀರಾ?’ ಎಂದು ಕೇಳಿದ್ದಾರೆ. ಪರಸ್ಪರ ಸಂತಸದಿಂದ ಇಬ್ಬರೂ ರಿಂಗ್ ಬದಲಾಯಿಸಿಕೊಂಡಿದ್ದಾರೆ.

ರಾಜ್​ಕುಮಾರ್ ರಾವ್ ಹಾಗೂ ಪತ್ರಲೇಖಾ ಬಿಳಿ ಬಣ್ಣದ ಮ್ಯಾಚಿಂಗ್ ದಿರಿಸನ್ನು ಧರಿಸಿದ್ದು, ವಿಶೇಷವಾಗಿತ್ತು. ಅವರ ಎಂಗೇಜ್​ಮೆಂಟ್ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ರಿಂಗ್ ಬದಲಾಯಿಸಿಕೊಂಡ ನಂತರ ಇಬ್ಬರೂ ತಮ್ಮ ಪ್ರಿಯವಾದ ಹಾಡಿಗೆ ನೃತ್ಯ ಮಾಡಿದ್ದಾರೆ.

ರಾಜ್​ಕುಮಾರ್ ರಾವ್ ಹಾಗೂ ಪತ್ರಲೇಖಾ ಎಂಗೇಜ್​ಮೆಂಟ್ ಸಂದರ್ಭದ ವಿಡಿಯೋ ಇಲ್ಲಿದೆ:

ಸಾಮಾಜಿಕ ಜಾಲತಾಣಗಳಲ್ಲಿ ಎಂಗೇಜ್​ಮೆಂಟ್ ಆದ ಹೋಟೆಲ್ ಹಾಗೂ ಅತಿಥಿಗಳ ಚಿತ್ರಗಳನ್ನು ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ನಟ ಸಾಕಿಬ್ ಸಲೀಮ್ ಹಾಗೂ ನಿರ್ದೇಶಕಿ ಫರಾ ಖಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಚಿತ್ರಗಳು ಇಲ್ಲಿವೆ:

‘ಸಿಟಿಲೈಟ್ಸ್’ ಚಿತ್ರದಲ್ಲಿ ರಾಜ್​ಕುಮಾರ್ ರಾವ್ ಹಾಗೂ ಪತ್ರಲೇಖಾ ತೆರೆಯ ಮೇಲೆ ದಂಪತಿಯಾಗಿ ಕಾಣಿಸಿಕೊಂಡಿದ್ದರು. ನಂತರ ಇಬ್ಬರೂ ‘ಬೋಸ್: ಡೆಡ್/ ಅಲೈವ್’ ವೆಬ್ ಸೀರೀಸ್​ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಕಪಿಲ್ ಶರ್ಮಾ ಶೋನಲ್ಲಿ ಮಾತನಾಡುತ್ತಾ ರಾಜ್​ಕುಮಾರ್ ರಾವ್, ಪತ್ರಲೇಖಾರ ಮೇಲೆ ಪ್ರೀತಿಯಾಗಿದ್ದನ್ನು ಹಂಚಿಕೊಂಡಿದ್ದರು. ‘ಅವರನ್ನು ಮೊದಲ ಬಾರಿ ನೋಡಿದಾಗಲೇ ಎಷ್ಟು ಒಳ್ಳೆಯ ಹುಡುಗಿ. ಅವಳನ್ನು ಮದುವೆಯಾಗಬೇಕು’ ಎಂದುಕೊಂಡಿದ್ದರಂತೆ. ಕಳೆದ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ರಾಜ್​ಕುಮಾರ್ ರಾವ್ ಪತ್ರಲೇಖಾರಿಗೆ ಬರೆದ ಪ್ರೇಮ ಪತ್ರ ವೈರಲ್ ಆಗಿತ್ತು. ಈರ್ವರೂ ಕೆಲಕಾಲದಿಂದ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಎಂಗೇಜ್​ಮೆಂಟ್ ಮೂಲಕ ಸಂಬಂಧವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ:

ರಶ್ಮಿಕಾ ಕೈ ಚರ್ಮದ ಬಣ್ಣ ಚೇಂಜ್​ ಆಗಿದ್ದೇಕೆ? ಪರದೆ ಹಿಂದಿನ ಕಹಾನಿ ಬಿಚ್ಚಿಟ್ಟ ಒಂದು ಫೋಟೋ

Salman Khan: ವಿಕ್ಕಿ- ಕತ್ರಿನಾ ಕಲ್ಯಾಣ; ಅತಿಥಿಗಳ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಸಲ್ಮಾನ್ ಭಾಗಿಯಾಗಲಿದ್ದಾರಂತೆ!

Follow Us
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!