AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸಾಫೀಸ್ ಲೂಟಿ‌ ಮಾಡುತ್ತಿರುವ ಸೂರ್ಯವಂಶಿ ಚಿತ್ರಕ್ಕೆ ಅಕ್ಷಯ್, ಕತ್ರಿನಾ ಪಡೆದ ಸಂಭಾವನೆ ಇಷ್ಟೊಂದಾ?

Akshay Kumar | Katrina Kaif: ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಗಳಿಕೆ‌ ಮಾಡುತ್ತಿರುವ 'ಸೂರ್ಯವಂಶಿ' ಚಿತ್ರಕ್ಕೆ ನಟ ಅಕ್ಷಯ್ ಕುಮಾರ್, ಕತ್ರಿನಾ‌ ಕೈಫ್, ಅಜಯ್ ದೇವಗನ್, ರಣವೀರ್ ಸಿಂಗ್, ನಿರ್ದೇಶಕ ರೋಹಿತ್ ಶೆಟ್ಟಿ‌ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ‌ ಮಾಹಿತಿ.

ಬಾಕ್ಸಾಫೀಸ್ ಲೂಟಿ‌ ಮಾಡುತ್ತಿರುವ ಸೂರ್ಯವಂಶಿ ಚಿತ್ರಕ್ಕೆ ಅಕ್ಷಯ್, ಕತ್ರಿನಾ ಪಡೆದ ಸಂಭಾವನೆ ಇಷ್ಟೊಂದಾ?
‘ಸೂರ್ಯವಂಶಿ’ ಸಿನಿಮಾ ಪೋಸ್ಟರ್​
TV9 Web
| Updated By: shivaprasad.hs|

Updated on:Nov 13, 2021 | 8:07 AM

Share

ಅಕ್ಷಯ್ ಕುಮಾರ್ (Akshay Kumar) ಹಾಗೂ ಕತ್ರಿನಾ ಕೈಫ್‌ (Katrina Kaif) ಕಾಣಿಸಿಕೊಂಡಿರುವ ‘ಸೂರ್ಯವಂಶಿ’ (Sooryavanshi) ಬಾಕ್ಸಾಫೀಸ್ ಧೂಳೆಬ್ಬಿಸುತ್ತಿದೆ. ಚಿತ್ರ ಬಿಡುಗಡೆಯಾಗಿ ಹತ್ತು ದಿನಗಳಾಗುತ್ತಾ ಬಂದರೂ ಕಲೆಕ್ಷನ್ ತಗ್ಗಿಲ್ಲ. ಅಲ್ಲದೇ ವೀಕೆಂಡ್ ಪ್ರಾರಂಭವಾಗಿರುವುದರಿಂದ ಗಳಿಕೆ ಮತ್ತಷ್ಟು ಹೆಚ್ಚಾಗಲಿದೆ‌ ಎಂದು ಬಾಕ್ಸಾಫೀಸ್ ಪರಿಣತರು ಹೇಳುತ್ತಾರೆ. ಚಿತ್ರ‌ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಇದುವರೆಗೆ ಸುಮಾರು ₹ 200 ಕೋಟಿಗೂ ಅಧಿಕ ಹಣ ಗಳಿಸಿದೆ‌ ಎನ್ನಲಾಗಿದೆ. ಮಹಾರಾಷ್ಟ್ರ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲು ಆರಂಭಿಸಿದ್ದು, ಚಿತ್ರಕ್ಕೆ ಬಹುದೊಡ್ಡ ಪ್ಲಸ್ ಆಗಿದೆ. ಅಲ್ಲದೇ ರೋಹಿತ್ ಶೆಟ್ಟಿ (Rohit Shetty) ಹಾಗೂ ಸ್ಟಾರ್ ಕಲಾವಿದರ ಕಾಂಬಿನೇಷನ್‌ ಜನರಿಗೆ ಇಷ್ಟವಾಗಿದ್ದು, ಒಳ್ಳೆಯ ಮನರಂಜನೆ ನೀಡಿದೆ. ಇದೀಗ ಬಾಲಿವುಡ್ ಅಂಗಳದಲ್ಲಿ ಈ ಚಿತ್ರಕ್ಕಾಗಿ ಸ್ಟಾರ್ ಕಲಾವಿದರು ಎಷ್ಟು ಸಂಭಾವನೆ‌ ಪಡೆದಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದು, ಆ ಕುರಿತ ವರದಿ ಇಲ್ಲಿದೆ.

‘ಸೂರ್ಯವಂಶಿ’ಯಲ್ಲಿ ಅಕ್ಷಯ್ ಭಯೋತ್ಪಾದನಾ‌ನಿಗ್ರಹ ದಳದ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ರೋಹಿತ್ ಶೆಟ್ಟಿ ನಿರ್ದೇಶನದ ಪೊಲೀಸ್ ಸರಣಿಯ ಮೂರನೇ‌ ಚಿತ್ರವಾಗಿದ್ದು, ಮೊದಲೆರಡು ಚಿತ್ರಗಳ ನಾಯಕರಾದ ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ಅತಿಥಿ ಪಾತ್ರದಲ್ಲಿ‌ ಕಾಣಿಸಿಕೊಂಡಿದ್ದಾರೆ. ಇದು ಚಿತ್ರಕ್ಕೆ ಒಳ್ಳೆಯ ಮೈಲೇಜ್ ನೀಡಿದ್ದು, ಅಭಿಮಾನಿಗಳಿಗೆ ಪ್ರಿಯವಾಗಿದೆ. ಸೂರ್ಯವಂಶಿ ಚಿತ್ರವು ಸುಮಾರು ₹ 165 ಕೋಟಿ ಬಜೆಟ್ ನಲ್ಲಿ‌ ನಿರ್ಮಾಣವಾಗಿದ್ದು, ಸ್ಟಾರ್ ನಟರು ಎಷ್ಟೆಷ್ಟು ಸಂಭಾವನೆ ಪಡೆದಿದ್ದಾರೆ‌ ಎಂಬ ಮಾಹಿತಿ ಇಲ್ಲಿದೆ.

ಡಿಸಿಪಿ ವೀರ್ ಸೂರ್ಯ ಆಗಿ ಅಬ್ಬರಿಸಿರುವ ನಟ‌ ಅಕ್ಷಯ್ ಕುಮಾರ್ ಸುಮಾರು ₹ 25 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಬಾಲಿವುಡ್ ಲೈಫ್‌ ವರದಿ ಮಾಡಿದೆ. ನಟಿ ಕತ್ರಿನಾ‌ ಕೈಫ್ ಸುಮಾರು‌ ₹ 10 ಕೋಟಿ ಪಡೆದಿದ್ದಾರೆ ಎಂದೂ ಅದು ತಿಳಿಸಿದೆ. ಅಚ್ಚರಿಯ ವಿಚಾರವೆಂದರೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ಸಂಭಾವನೆಯನ್ನೇ ಪಡೆದಿಲ್ಲ! ಈ ಚಿತ್ರದ ಯಶಸ್ಸಿಗೆ ಮುಖ್ಯ ಕಾರಣ ಸ್ಟಾರ್ ನಿರ್ದೇಶಕ ರೋಹಿತ್ ಶೆಟ್ಟಿ. ಅವರು ಸುಮಾರು ₹ 20 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಚಿತ್ರದಲ್ಲಿ‌ ಕಾಣಿಸಿಕೊಂಡಿರುವ ನಟರಾದ ಜಾಕಿ ಶ್ರಾಫ್ ₹ 1 ಕೋಟಿ, ಗುಲ್ಷನ್ ಗ್ರೋವರ್ ₹ 60 ಲಕ್ಷ ಪಡೆದಿದ್ದಾರೆ ಎಂದು ಹೇಳಲಾಗಿದೆ. ನಟರೆಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದು, ಪಕ್ಕಾ ಮನರಂಜನಾ ಚಿತ್ರವಾಗಿ ‘ಸೂರ್ಯವಂಶಿ’ ಮೂಡಿಬಂದಿದೆ. ಆದ್ದರಿಂದಲೇ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿದೆ.

ಇದನ್ನೂ ಓದಿ:

ರಣಬೀರ್​ ಸಿನಿಮಾದಲ್ಲಿನ ಆ ಒಂದು ವಿಚಾರ ರಿಷಿ ಕಪೂರ್​ಗೆ ಇಷ್ಟವಾಗಲೇ ಇಲ್ಲ

ಆರ್ಯನ್​ ಖಾನ್​​ಗೆ ಬಾಡಿಗಾರ್ಡ್​ ಫೈನಲ್​? ವರ್ಷದ ಸಂಬಳ 2.7 ಕೋಟಿ ರೂಪಾಯಿ

Published On - 8:05 am, Sat, 13 November 21

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಖರ್ಗೆಯವರ ಪೂರ್ತಿ ಹೇಳಿಕೆ ಕೇಳಿಸಿಕೊಂಡರೆ ವಿಷಯ ಅರ್ಥವಾಗುತ್ತದೆ: ಪ್ರಿಯಾಂಕ್
ಖರ್ಗೆಯವರ ಪೂರ್ತಿ ಹೇಳಿಕೆ ಕೇಳಿಸಿಕೊಂಡರೆ ವಿಷಯ ಅರ್ಥವಾಗುತ್ತದೆ: ಪ್ರಿಯಾಂಕ್