AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಯನ್​ ಖಾನ್​​ಗೆ ಬಾಡಿಗಾರ್ಡ್​ ಫೈನಲ್​? ವರ್ಷದ ಸಂಬಳ 2.7 ಕೋಟಿ ರೂಪಾಯಿ

ಶಾರುಖ್​ ಖಾನ್​ ಅವರು ‘ಪಠಾಣ್​’  ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಸಾಂಗ್​ ಶೂಟಿಂಗ್​ಗೆ ಅವರು ವಿದೇಶಕ್ಕೆ ತೆರಳಬೇಕಿತ್ತು. ಆದರೆ, ಆರ್ಯನ್​ ಜೈಲಿನಲ್ಲಿ ಇದ್ದಿದ್ದರಿಂದ ಅದು ಸಾಧ್ಯವಾಗಿಲ್ಲ.

ಆರ್ಯನ್​ ಖಾನ್​​ಗೆ ಬಾಡಿಗಾರ್ಡ್​ ಫೈನಲ್​? ವರ್ಷದ ಸಂಬಳ 2.7 ಕೋಟಿ ರೂಪಾಯಿ
ಶಾರುಖ್​ ಕುಟುಂಬ
TV9 Web
| Edited By: |

Updated on:Nov 12, 2021 | 7:57 PM

Share

ಶಾರುಖ್​ ಖಾನ್ (Shah Rukh Khan)​ ಮಗ ಆರ್ಯನ್​ ಖಾನ್ (Aryan Khan)​ ಮುಖಪರಿಚಯ ಅಷ್ಟಾಗಿ ಇರಲಿಲ್ಲ. ಹೀಗಾಗಿ, ಆರ್ಯನ್​ ಸಾಕಷ್ಟು ಕಡೆಗಳಲ್ಲಿ ಬಾಡಿಗಾರ್ಡ್​ ಇಲ್ಲದೆ ಫ್ರೆಂಡ್ಸ್ ಜತೆ ಓಡಾಡುತ್ತಿದ್ದರು. ಆದರೆ, ಈಗ ಹಾಗಿಲ್ಲ. ಆರ್ಯನ್​ ಖಾನ್​ ಎಂದರೆ ಎಲ್ಲರಿಗೂ ಗೊತ್ತಾಗಿದೆ. ಡ್ರಗ್​ ಕೇಸ್​ನಲ್ಲಿ (Bollywood Drug Case) ಸಿಕ್ಕಿ ಬಿದ್ದು ಅವರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಈ ಕಾರಣಕ್ಕೆ ಅಕ್ಟೋಬರ್​ ತಿಂಗಳಿಂದ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ. ಈ ಕಾರಣಕ್ಕೆ ಅವರು ಈಗ ಒಬ್ಬಂಟಿಯಾಗಿ ಹೊರಗೆ ತಿರುಗಾಡುವಂತಿಲ್ಲ. ಅವರು ಹೊರ ಬಂದರೆ ಸಾಕು ಮಾಧ್ಯಮಗಳು ಅವರನ್ನು ಮುತ್ತಿಕೊಳ್ಳುತ್ತವೆ. ಈ ಕಾರಣಕ್ಕೆ ಆರ್ಯನ್​ಗೆ ಬಾಡಿಗಾರ್ಡ್​ ನೇಮಕ ಮಾಡೋದು ಶಾರುಖ್​ಗೆ ಅನಿವಾರ್ಯವಾಗಿದೆ. ಹೀಗಾಗಿ, ಅವರು ಈಗ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ.

ಶಾರುಖ್​ ಖಾನ್​ ಅವರು ‘ಪಠಾಣ್​’  ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಸಾಂಗ್​ ಶೂಟಿಂಗ್​ಗೆ ಅವರು ವಿದೇಶಕ್ಕೆ ತೆರಳಬೇಕಿತ್ತು. ಆದರೆ, ಆರ್ಯನ್​ ಜೈಲಿನಲ್ಲಿ ಇದ್ದಿದ್ದರಿಂದ ಅದು ಸಾಧ್ಯವಾಗಿಲ್ಲ. ಈಗ ಅವರು ಸಿನಿಮಾ ಕೆಲಸಕ್ಕೆ ಮರಳಬೇಕಿದೆ. ಅದಕ್ಕೂ ಮೊದಲು ಆರ್ಯನ್​ಗೆ ಬಾಡಿಗಾರ್ಡ್​ ನೇಮಕ ಮಾಡೋದು ಶಾರುಖ್​ಗೆ ಅನಿವಾರ್ಯ. ಹೀಗಾಗಿ, ಶಾರುಖ್​ ಮಹತ್ವದ ನಿರ್ಧಾರ ತೆಗೆದುಕೊಳ್ಳೋಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕಳೆದ 10 ವರ್ಷಗಳಿಂದಲೂ ಶಾರುಖ್​ ಖಾನ್​ಗೆ ಬಾಡಿಗಾರ್ಡ್​ ಆಗಿ ರವಿ ಸಿಂಗ್​ ಕೆಲಸ ಮಾಡುತ್ತಿದ್ದಾರೆ. ಶಾರುಖ್​ ಎಲ್ಲಿಯೇ ಹೋದರು ಅವರ ಜತೆ ರವಿ ಇರುತ್ತಾರೆ. ಎಷ್ಟೇ ದೊಡ್ಡ ಗುಂಪಿದ್ದರೂ ಶಾರುಖ್​ ಖಾನ್​ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಕೆಲಸವನ್ನು ರವಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಈಗ ಆರ್ಯನ್​ ಜತೆ ರವಿ ಸಿಂಗ್​ ಅವರನ್ನು ಬಿಟ್ಟು, ತಾವು ಹೊಸ ಬಾಡಿಗಾರ್ಡ್ ಹುಡುಕಲು ಶಾರುಖ್​ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಶಾರುಖ್​ ಖಾನ್ ಅವರು ರವಿಗೆ​ ವರ್ಷಕ್ಕೆ 2.7 ಕೋಟಿ ರೂ. ಸಂಬಳ ನೀಡುತ್ತಾರೆ. ಅತಿ ಹೆಚ್ಚು ಸಂಬಳ ಪಡೆಯುವ ಬಾಡಿಗಾರ್ಡ್​ ಎಂಬ ಖ್ಯಾತಿ ರವಿ ಅವರದ್ದು. ಈಗ ಅವರು ಆರ್ಯನ್​ ಬಾಡಿಗಾರ್ಡ್​ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಎಲ್ಲರ ಜತೆ ಮಾತನಾಡುವುದನ್ನೇ ನಿಲ್ಲಿಸಿದ ಆರ್ಯನ್​ ಖಾನ್? ಜೈಲುವಾಸದಿಂದ ಆಘಾತ 

ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್​ ಕಡೆಯಿಂದ 2ನೇ ಚಾನ್ಸ್​; ಸ್ಟಾರ್​ ನಟಿಯ ಉತ್ತರ ಏನು?

Published On - 6:45 pm, Fri, 12 November 21

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ