ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್​ ಕಡೆಯಿಂದ 2ನೇ ಚಾನ್ಸ್​; ಸ್ಟಾರ್​ ನಟಿಯ ಉತ್ತರ ಏನು?

ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್​ ಕಡೆಯಿಂದ 2ನೇ ಚಾನ್ಸ್​; ಸ್ಟಾರ್​ ನಟಿಯ ಉತ್ತರ ಏನು?
ಸಮಂತಾ, ಶಾರುಖ್​ ಖಾನ್

Samantha: ವಿಚ್ಛೇದನ ಪಡೆದುಕೊಂಡ ಬಳಿಕವಾದರೂ ಸಮಂತಾ ಈ ಸಿನಿಮಾ ಒಪ್ಪಿಕೊಳ್ಳಬಹುದು ಎಂದು ಊಹಿಸಲಾಗಿತ್ತು. ಆದರೆ ಎರಡನೇ ಬಾರಿಗೂ ಅವರು ಶಾರುಖ್​ ಚಿತ್ರದ ಆಫರ್​ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

TV9kannada Web Team

| Edited By: Madan Kumar

Nov 12, 2021 | 8:37 AM

ನಟಿ ಸಮಂತಾ ( Samantha) ಅವರಿಗೆ ಬಹುಭಾಷೆಯಲ್ಲಿ ಡಿಮ್ಯಾಂಡ್​ ಇದೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಗೆದ್ದ ಬಳಿಕವಂತೂ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಈ ನಡುವೆ ಅವರು ಸಂಸಾರದ ತಾಪತ್ರಯದಿಂದಾಗಿ ಸಿನಿಮಾ ಕೆಲಸಗಳಿಂದ ಕೊಂಚ ದೂರ ಉಳಿದುಕೊಂಡಿದ್ದರು. ನಾಗ ಚೈತನ್ಯಗೆ (Naga Chaitanya) ವಿಚ್ಛೇದನ (Divorce) ನೀಡಿದ ನಂತರ ಸಮಂತಾ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಮುನ್ನುಗ್ಗುತ್ತಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಸೂಪರ್​ ಹಿಟ್​ ಆದನಂತರ ಬಾಲಿವುಡ್​ನಿಂದಲೂ ಅವರಿಗೆ ಅವಕಾಶಗಳು ಹರಿದುಬರುತ್ತಿವೆ. ಆದರೆ ಅವುಗಳನ್ನು ಒಪ್ಪಿಕೊಳ್ಳುವಲ್ಲಿ ಸಮಂತಾ ಹಿಂದೇಟು ಹಾಕುತ್ತಿದ್ದಾರೆ. ಶಾರುಖ್​ ಖಾನ್​ (Shah Rukh Khan) ಮತ್ತು ನಿರ್ದೇಶಕ ಅಟ್ಲೀ (Atlee) ಕಾಂಬಿನೇಷನ್​ನ ಸಿನಿಮಾದಲ್ಲಿ ನಾಯಕಿಯಾಗಲು ಸಮಂತಾ ಎರಡನೇ ಬಾರಿಗೆ ನಿರಾಕರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿವೆ.

ಶಾರುಖ್​ ಖಾನ್​ ಮತ್ತು ಅಟ್ಲೀ ಜೊತೆಯಾಗಿ ಮಾಡುತ್ತಿರುವ ಚಿತ್ರದಲ್ಲಿ ನಾಯಕಿ ಆಗುವಂತೆ ಸಮಂತಾಗೆ ಕೆಲವು ತಿಂಗಳ ಹಿಂದೆಯೇ ಆಫರ್​ ಬಂದಿತ್ತು. ಆದರೆ ನಾಗ ಚೈತನ್ಯ ಜೊತೆ ಮಗು ಪಡೆದುಕೊಂಡು, ಸಂಸಾರಕ್ಕೆ ಸಮಯ ನೀಡಬೇಕು ಎಂಬ ಕಾರಣದಿಂದ ಅವರು ಶಾರುಖ್​ ಸಿನಿಮಾಗೆ ನೋ ಎಂದಿದ್ದರು. ನಂತರ ಆ ಚಾನ್ಸ್​ ನಯನತಾರಾ ಪಾಲಾಗಿತ್ತು. ಶಾರುಖ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಳಿಕ ಅಟ್ಲೀ ಜೊತೆಗಿನ ಶಾರುಖ್​ ಸಿನಿಮಾದ ಕೆಲಸಗಳು ವಿಳಂಬ ಆಗತೊಡಗಿದವು. ಹಾಗಾಗಿ ನಯನತಾರಾ ಕೂಡ ಆ ಪ್ರಾಜೆಕ್ಟ್​​​ನಿಂದ ಹೊರನಡೆಯುವ ನಿರ್ಧಾರ ತೆಗೆದುಕೊಂಡರು ಎನ್ನುತ್ತಿವೆ ಮೂಲಗಳು.

ಚಿತ್ರತಂಡದಿಂದ ನಯನತಾರಾ ಹೊರನಡೆಯುವ ತೀರ್ಮಾನ ತೆಗೆದುಕೊಂಡ ಬಳಿಕ ನಿರ್ಮಾಪಕರು ಮತ್ತೆ ಬಂದಿದ್ದು ಸಮಂತಾ ಬಳಿಗೆ. ವಿಚ್ಛೇದನ ಪಡೆದುಕೊಂಡು ಅಕ್ಕಿನೇನಿ ಕುಟುಂಬದಿಂದ ಬೇರ್ಪಟ್ಟಿರುವ ಅವರು ಈಗಲಾದಲೂ ಈ ಸಿನಿಮಾ ಒಪ್ಪಿಕೊಳ್ಳಬಹುದು ಎಂದು ಊಹಿಸಲಾಗಿತ್ತು. ಆದರೆ ಎರಡನೇ ಬಾರಿಗೂ ಅವರು ಶಾರುಖ್​ ಚಿತ್ರದ ಆಫರ್​ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಈಗ ಆರ್ಯನ್ ಖಾನ್​ಗೆ ಜಾಮೀನು ಸಿಕ್ಕಿದ್ದು, ಶಾರುಖ್​ ಮತ್ತೆ ಚಿತ್ರೀಕರಣದತ್ತ ಗಮನ ಹರಿಸಲು ಸಜ್ಜಾಗಿದ್ದಾರೆ. ಹಾಗಾಗಿ ಮತ್ತೆ ನಯನತಾರಾ ಅವರನ್ನೇ ಆಯ್ಕೆ ಮಾಡಿಕೊಂಡು ಶೂಟಿಂಗ್​ ಮುಂದುವರಿಸಲು ಚಿತ್ರತಂಡ ನಿರ್ಧರಿಸಿದೆ ಎಂಬುದು ಸದ್ಯ ಕೇಳಿಬರುತ್ತಿರುವ ಗಾಸಿಪ್​.

ಇದನ್ನೂ ಓದಿ:

ಒಂದು ಸಿನಿಮಾಗೆ ಸಮಂತಾ ಪಡೆಯುವ ಸಂಭಾವನೆ ಇಷ್ಟೊಂದಾ; ಅಚ್ಚರಿ ಹೊರ ಹಾಕಿದ ಫ್ಯಾನ್ಸ್​

ವಿದೇಶಿ ಮಾಧ್ಯಮಗಳಿಂದ ಬಿಗ್​ ಪ್ಲ್ಯಾನ್​: ಮಗನ ಡ್ರಗ್ಸ್​ ಕೇಸ್​ ಹಿಂದಿನ ರಹಸ್ಯ ಬಿಚ್ಚಿಡ್ತಾರಾ ಶಾರುಖ್​?

Follow us on

Related Stories

Most Read Stories

Click on your DTH Provider to Add TV9 Kannada