ವಿದೇಶಿ ಮಾಧ್ಯಮಗಳಿಂದ ಬಿಗ್​ ಪ್ಲ್ಯಾನ್​: ಮಗನ ಡ್ರಗ್ಸ್​ ಕೇಸ್​ ಹಿಂದಿನ ರಹಸ್ಯ ಬಿಚ್ಚಿಡ್ತಾರಾ ಶಾರುಖ್​?

Shah Rukh Khan | Aryan Khan: ಶಾರುಖ್​ ಖಾನ್​ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಆರ್ಯನ್​ ಖಾನ್​ ಕೇಸ್​ ಕುರಿತಂತೆ ಅವರ​ ಪ್ರತಿಕ್ರಿಯೆ ತಿಳಿಯಲು ಕೆಲವು ವಿದೇಶಿ ಸುದ್ದಿವಾಹಿನಿಗಳು ಸಂದರ್ಶನಕ್ಕೆ ಏರ್ಪಾಡು ಮಾಡಿಕೊಂಡಿವೆ ಎನ್ನಲಾಗಿದೆ.

ವಿದೇಶಿ ಮಾಧ್ಯಮಗಳಿಂದ ಬಿಗ್​ ಪ್ಲ್ಯಾನ್​: ಮಗನ ಡ್ರಗ್ಸ್​ ಕೇಸ್​ ಹಿಂದಿನ ರಹಸ್ಯ ಬಿಚ್ಚಿಡ್ತಾರಾ ಶಾರುಖ್​?
ಆರ್ಯನ್​ ಖಾನ್​, ಶಾರುಖ್​ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Nov 07, 2021 | 9:37 AM

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರ ಡ್ರಗ್ಸ್​ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಸದ್ಯ ಆರ್ಯನ್​ ಖಾನ್​ ಜಾಮೀನು ಪಡೆದು ಮನೆಯಲ್ಲಿದ್ದಾರೆ. ಎನ್​ಸಿಬಿ ಅಧಿಕಾರಿಗಳ ತನಿಖೆ ಮುಂದುವರಿದಿದೆ. ಅ.2ರಂದು ಆರ್ಯನ್ ಖಾನ್​ ಸಿಕ್ಕಿ ಬಿದ್ದರು. ಅಲ್ಲಿಂದ ಇಲ್ಲಿಯವರೆಗೂ ಈ ವಿಚಾರದ ಬಗ್ಗೆ ಶಾರುಖ್​ ಖಾನ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ತಂಡದವರು ಕೂಡ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಈಗ ಶಾರುಖ್​ ಖಾನ್​ ಮೌನ ಮುರಿಯವ ಸಂದರ್ಭ ಬಂದಿದೆ ಎಂಬ ಸುದ್ದಿ ಹಬ್ಬಿದೆ.

ಮಗನಿಗೆ ಜಾಮೀನು ಕೊಡಿಸಲು ಶಾರುಖ್​ ಖಾನ್​ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿ ಬದುಕುತ್ತಿದ್ದ ಅವರು ಹೀಗೆ ತಿಂಗಳುಗಟ್ಟಲೆ ಮೌನವಾಗಿರುವ ಪರಿಸ್ಥಿತಿ ಬರುತ್ತದೆ ಎಂದು ಅವರು ಊಹಿಸಿರಲಿಲ್ಲ. ಆದರೆ ಈ ಡ್ರಗ್ಸ್​ ಕೇಸ್​ ಹಿಂದೆ ಕೆಲವರ ಹುನ್ನಾರ ಇದೆ ಎಂದು ಕೂಡ ಹೇಳಲಾಗುತ್ತಿದೆ. ಆ ಬಗ್ಗೆ ಶಾರುಖ್​ ಯಾವಾಗ ಮಾತನಾಡುತ್ತಾರೆ ಎಂಬ ಕೌತುಕ ಮನೆ ಮಾಡಿದೆ. ಮೂಲಗಳ ಪ್ರಕಾರ ಅದಕ್ಕಾಗಿ ವಿದೇಶಿ ಮಾಧ್ಯಮಗಳು ದೊಡ್ಡ ಪ್ಲ್ಯಾನ್​ ಮಾಡಿಕೊಂಡಿವೆ.

ಶಾರುಖ್​ ಖಾನ್​ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಮಗನ ಡ್ರಗ್ಸ್​ ಪ್ರಕರಣ ಕೂಡ ಜಾಗತಿಕ ಮಟ್ಟದಲ್ಲಿ ಸುದ್ದಿ ಆಗಿದೆ. ಹಾಗಾಗಿ ಶಾರುಖ್​ ಕಡೆಯಿಂದ ಪ್ರತಿಕ್ರಿಯೆ ತಿಳಿಯಲು ಎಲ್ಲರೂ ಕಾದಿದ್ದಾರೆ. ಅದಕ್ಕಾಗಿ ಕೆಲವು ವಿದೇಶಿ ಸುದ್ದಿವಾಹಿನಿಗಳು ಶಾರುಖ್​ ಅವರ ಸಂದರ್ಶನ ಪಡೆಯಲು ಪ್ರಯತ್ನಿಸುತ್ತಿವೆ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಶಾರುಖ್​ ಮ್ಯಾನೇಜರ್​ಗೆ ಕರೆ ಕೂಡ ಬಂದಿದೆಯಂತೆ. ಆದರೆ ಸದ್ಯಕ್ಕೆ ವಿದೇಶಿ ಸುದ್ದಿವಾಹಿನಿಗಳ ಮನವಿಯನ್ನು ಅವರು ಹೋಲ್ಡ್​ನಲ್ಲಿ ಇರಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅವರು ಸಂದರ್ಶನ ನೀಡಿದ್ದೇ ಹೌದಾದರೆ ಈ ಡ್ರಗ್ಸ್​ ಕೇಸ್​ ಹಿಂದಿನ ಎಲ್ಲ ಹುನ್ನಾರವನ್ನೂ ಬಿಚ್ಚಿಡಲಿದ್ದಾರೆ ಎಂಬ ನಿರೀಕ್ಷೆ ಇದೆ.

ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಬಳಿಕ ಶಾರುಖ್​ ಖಾನ್​ ಅವರ ಪ್ರತಿಷ್ಠೆಗೆ ಧಕ್ಕೆ ಆಗಿದೆ. ಅವರ ಬ್ಯುಸಿನೆಸ್​ ಮೇಲೂ ಹೊಡೆತ ಬಿದ್ದಿದೆ. ಅನೇಕ ಕಂಪನಿಗಳು ಅವರ ಜೊತೆಗಿನ ಒಪ್ಪಂದವನ್ನು ಮುರಿದುಕೊಂಡಿವೆ. ಈ ಎಲ್ಲ ಕಾರಣಗಳಿಂದಾಗಿ ಶಾರುಖ್​ ಕುದಿಯುತ್ತಿದ್ದಾರೆ. ಆದರೂ ಕೂಡ ಅವರು ಮೌನ ವಹಿಸಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:

Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್​ ಖಾನ್​ಗೆ ಈಗ ಮನೆಯವರಿಂದಲೇ ಬ್ಲಡ್​ ಟೆಸ್ಟ್​; ಕಾರಣ ಏನು?

Mohit Kamboj: ಆರ್ಯನ್​ ಖಾನ್​ ಕೇಸ್​ಗೆ ಹೊಸ ಟ್ವಿಸ್ಟ್​; ಬಿಜೆಪಿ ಮುಖಂಡ ಮೋಹಿತ್​ ಕಡೆಯಿಂದ ಗಂಭೀರ ಆರೋಪ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ