Mohit Kamboj: ಆರ್ಯನ್ ಖಾನ್ ಕೇಸ್ಗೆ ಹೊಸ ಟ್ವಿಸ್ಟ್; ಬಿಜೆಪಿ ಮುಖಂಡ ಮೋಹಿತ್ ಕಡೆಯಿಂದ ಗಂಭೀರ ಆರೋಪ
Aryan Khan Case: ‘ಮಹಾರಾಷ್ಟ್ರದ ಕೆಲವು ಸಚಿವರು ಶಾರುಖ್ ಖಾನ್ ಅವರಿಂದ ಹಣ ದೋಚಲು ಪ್ರಯತ್ನಿಸಿರಬಹುದು. ಈ ಹೈ ಪ್ರೊಫೈಲ್ ಡ್ರಗ್ ಕೇಸ್ನಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಗೆ ಲಿಂಕ್ ಇದೆ’ ಎಂದು ಬಿಜೆಪಿ ಮುಖಂಡ ಮೋಹಿತ್ ಕಂಬೋಜ್ ಆರೋಪಿಸಿದ್ದಾರೆ.
ಡ್ರಗ್ಸ್ ಪಾರ್ಟಿ ಮಾಡಿದ ಆರೋಪ ಎದುರಿಸುತ್ತಿರುವ ಆರ್ಯುನ್ ಖಾನ್ ಸದ್ಯ ಜಾಮೀನು ಪಡೆದು ಮನೆಯಲ್ಲಿದ್ದಾರೆ. ಆದರೆ ಅವರ ಕೇಸ್ ಕುರಿತಂತೆ ಅನೇಕ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ಈ ಪ್ರಕರಣದ ಹಿಂದೆ ಪ್ರಮುಖ ವ್ಯಕ್ತಿಗಳ ಕೈವಾಡ ಇದೆ ಎನ್ನಲಾಗುತ್ತಿದೆ. ಶಾರುಖ್ ಖಾನ್ ಅವರಿಂದ ಹಣ ಕೀಳಲು ಕೆಲವು ರಾಜಕೀಯ ವ್ಯಕ್ತಿಗಳು ಹುನ್ನಾರ ನಡೆಸಿದ್ದರಿಂದಲೇ ಆರ್ಯನ್ ಖಾನ್ ಮೇಲೆ ದಾಳಿ ನಡೆಯಿತು ಎಂದು ಬಿಜೆಪಿ ಮುಖಂಡ ಮೋಹಿತ್ ಕಂಬೋಜ್ ಆರೋಪಿಸಿದ್ದಾರೆ. ಈಗ ತಮ್ಮ ಜೀವಕ್ಕೆ ಅಪಾಯ ಇದೆ ಎಂದು ಕೂಡ ಅವರು ಹೇಳಿದ್ದಾರೆ.
‘ಮಹಾರಾಷ್ಟ್ರದ ಕೆಲವು ಸಚಿವರು ಶಾರುಖ್ ಖಾನ್ ಅವರಿಂದ ಹಣ ದೋಚಲು ಪ್ರಯತ್ನಿಸಿರಬಹುದು. ಈ ಹೈ ಪ್ರೊಫೈಲ್ ಡ್ರಗ್ ಕೇಸ್ನಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಗೆ ಲಿಂಕ್ ಇದೆ. ಮಾಜಿ ಗೃಹ ಸಚಿವ ಅನಿಲ್ ದೇಖಮುಖ್ ಅವರಿಗೆ ಆಪ್ತನಾಗಿರುವ ಸುನೀಲ್ ಪಾಟೀಲ್ ಎಂಬ ವ್ಯಕ್ತಿಯೇ ಈ ಡ್ರಗ್ಸ್ ಕೇಸ್ ಹಿಂದಿನ ಮಾಸ್ಟರ್ ಮೈಂಡ್’ ಎಂದು ಮೋಹಿತ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿರುವ ಮೋಹಿತ್ ಅವರು ಸುನೀಲ್ ಪಾಟೀಲ್ರದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ತಾವು ಹೋಮ್ ಮಿನಿಸ್ಟರ್ಗೆ ಆಪ್ತ ಎಂದು ಸುನೀಲ್ ಪಾಟೀಲ್ ಹೇಳಿಕೊಂಡಿದ್ದಾರೆ. ಆ ಆಡಿಯೋ ಕ್ಲಿಪ್ನ ಸತ್ಯಾಸತ್ಯತೆ ಬಗ್ಗೆ ಇನ್ನೂ ತನಿಖೆ ಆಗಬೇಕಿದೆ. ಸುದ್ದಿಗೋಷ್ಠಿ ನಡೆಸಿದ ಬಳಿಕ ತಮ್ಮ ಜೀವಕ್ಕೆ ಅಪಾಯ ಇದೆ ಎಂದು ಮೋಹಿತ್ ಹೇಳಿದ್ದಾರೆ.
BIGGEST EXPOSE in the history of Maharashtra in this Press Conference प्रेस वार्ता: महाराष्ट्र के इतिहास का सबसे बड़ा खुलासा https://t.co/avVBCnutBn
— Mohit Bharatiya ( Mohit Kamboj ) (@mohitbharatiya_) November 6, 2021
ಮೋಹಿತ್ ಅವರ ಎಲ್ಲ ಆರೋಪಗಳನ್ನು ಎನ್ಸಿಪಿ ಮುಖಂಡ ನವಾಬ್ ಮಲಿಕ್ ತಳ್ಳಿ ಹಾಕಿದ್ದಾರೆ. ‘ಸಮೀರ್ ದಾವೂದ್ ವಾಂಖೆಡೆಯ ಖಾಸಗಿ ಸೈನ್ಯ ಈಗ ಒಂದು ಸುದ್ದಿಗೋಷ್ಠಿ ನಡೆಸಿದೆ’ ಎಂದು ವ್ಯಂಗ್ಯವಾಗಿ ಅವರು ಟ್ವೀಟ್ ಮಾಡಿದ್ದಾರೆ. ‘ಗಮನ ಬೇರೆಡೆಗೆ ಸೆಳೆದು ಸತ್ಯದ ದಾರಿ ತಪ್ಪಿಸಲು ಈ ವಿಫಲ ಪ್ರಯತ್ನ ಮಾಡಲಾಗಿದೆ’ ಎಂದು ನವಾಬ್ ಮಲಿಕ್ ಹೇಳಿದ್ದಾರೆ.
A member of Sameer Dawood Wankhede’s private army just held a Press Conference to misguide and divert the attention from the truth albeit unsuccessfully. I will reveal the truth tomorrow
— Nawab Malik نواب ملک नवाब मलिक (@nawabmalikncp) November 6, 2021
ಆರ್ಯನ್ ಖಾನ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಶಾರುಖ್ ಪುತ್ರನನ್ನು ಬಂಧಿಸಿದ್ದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಹಲವು ಆರೋಪಗಳು ಕೇಳಿಬಂದಿವೆ. ಅದರ ಬೆನ್ನಲ್ಲೇ ಸಮೀರ್ ವಾಂಖೆಡೆಗೆ ತನಿಖೆಯಿಂದ ಹೊರಗೆ ಉಳಿಯುವಂತೆ ಸೂಚಿಸಲಾಗಿದೆ. ಸದ್ಯ ಈ ಪ್ರಕರಣವನ್ನು ಕೇಂದ್ರದ ಉನ್ನತ ತಂಡ ವಹಿಸಿಕೊಂಡಿದೆ.
ಇದನ್ನೂ ಓದಿ:
Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್ ಖಾನ್ಗೆ ಈಗ ಮನೆಯವರಿಂದಲೇ ಬ್ಲಡ್ ಟೆಸ್ಟ್; ಕಾರಣ ಏನು?
‘ಅಪ್ಪ-ಅಮ್ಮನ ವೆಡ್ಡಿಂಗ್ ಆ್ಯನಿವರ್ಸರಿಗೆ ವಿಶ್ ಮಾಡ್ಬೇಕು, ವಿಡಿಯೋ ಕಾಲ್ ಮಾಡಿಕೊಡಿ ಪ್ಲೀಸ್’; ಆರ್ಯನ್ ಅಳಲು?