Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್​ ಖಾನ್​ಗೆ ಈಗ ಮನೆಯವರಿಂದಲೇ ಬ್ಲಡ್​ ಟೆಸ್ಟ್​; ಕಾರಣ ಏನು?

Shah Rukh Khan: ಮಗ ಆರ್ಯನ್​ ಖಾನ್​ಗೆ ಬ್ಲಡ್​ ಟೆಸ್ಟ್​ ಮಾಡಿಸಿ, ಅದರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ಗೌರಿ ಖಾನ್​ ತೀರ್ಮಾನಿಸಿದ್ದಾರೆ. ಪುತ್ರನ ಮಾನಸಿಕ ಆರೋಗ್ಯದ ಬಗ್ಗೆಯೂ ಅವರು ಕಾಳಜಿ ವಹಿಸುತ್ತಿದ್ದಾರೆ.

Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್​ ಖಾನ್​ಗೆ ಈಗ ಮನೆಯವರಿಂದಲೇ ಬ್ಲಡ್​ ಟೆಸ್ಟ್​; ಕಾರಣ ಏನು?
ಆರ್ಯನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 02, 2021 | 8:33 AM

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಸದ್ಯ ಜೈಲಿನಿಂದ ಹೊರಬಂದು ತಾತ್ಕಾಲಿಕ ರಿಲೀಫ್​ ಪಡೆದುಕೊಂಡಿದ್ದಾರೆ. ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿರುವ ಅವರಿಗೆ ಜಾಮೀನು ಕೊಡಿಸಲು ತಂದೆ ಶಾರುಖ್​ ಖಾನ್​, ತಾಯಿ ಗೌರಿ ಖಾನ್​ ಮಾಡಿದ ಸಾಹಸ ಅಷ್ಟಿಷ್ಟಲ್ಲ. ಕೊನೆಗೂ ಬೇಲ್​ ಪಡೆದ ಆರ್ಯನ್​ ಖಾನ್​ ಅ.30ರಂದು ತಮ್ಮ ನಿವಾಸ ‘ಮನ್ನತ್​’ಗೆ ಮರಳಿದರು. ಈಗ ಪುತ್ರನಿಗೆ ಗೌರಿ ಖಾನ್​ ಚೆನ್ನಾಗಿ ಆರೈಕೆ ಮಾಡುತ್ತಿದ್ದಾರೆ. ಅಚ್ಚರಿ ಏನೆಂದರೆ ಆರ್ಯನ್​ ಖಾನ್​ ಅವರ ರಕ್ತ ಪರೀಕ್ಷೆ ಕೂಡ ಮಾಡಿಸಲಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ.

ಡ್ರಗ್ಸ್​ ಸೇವನೆ ಆರೋಪವನ್ನು ಆರ್ಯನ್​ ಖಾನ್​ ಎದುರಿಸುತ್ತಿದ್ದಾರೆ. ಈ ನಡುವೆ ಗೌರಿ ಖಾನ್​ ಅವರು ಮಗನ ಬ್ಲಡ್​ ಟೆಸ್ಟ್​ ಮಾಡಿಸುತ್ತಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. 22 ದಿನಗಳ ಕಾಲ ಆರ್ಯನ್​ ಖಾನ್​ ಜೈಲಿನಲ್ಲಿ ಇದ್ದರು. ಅಷ್ಟೂ ದಿನಗಳ ಕಾಲ ಅವರು ಜೈಲಿನ ಆಹಾರವನ್ನೇ ಸೇವಿಸಿದ್ದರು. ಇದರಿಂದ ಅವರ ರೆಗ್ಯುಲರ್​ ಡಯೆಟ್​ಗೆ ತೊಂದರೆ ಆಗಿದೆ. ಹಾಗಾಗಿ ಮಗನಿಗೆ ಬ್ಲಡ್​ ಟೆಸ್ಟ್​ ಮಾಡಿಸಿ, ಅದರ ವರದಿ ಆಧರಿಸಿ ಸೂಕ್ತ ರೀತಿಯ ನ್ಯೂಟ್ರಿಶಿಯನ್​​ ಆಹಾರ ನೀಡಲು ಗೌರಿ ಖಾನ್​ ನಿರ್ಧರಿಸಿದ್ದಾರೆ ಎನ್ನುತ್ತಿವೆ ಮೂಲಗಳು.

ಹುಟ್ಟಿನಿಂದಲೂ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರು ಆರ್ಯನ್​ ಖಾನ್​. ಹಾಗಾಗಿ ಅವರಿಗೆ ಜೈಲಿನಲ್ಲಿ ಹೊಂದಿಕೊಳ್ಳಲು ಕಷ್ಟ ಆಗಿತ್ತು. ಜೈಲಿನ ಕಠಿಣ ವಾತಾವರಣವು ಅವರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಕೋರ್ಟ್​ ತೀರ್ಪು ನೀಡುವುದಕ್ಕೂ ಮುನ್ನವೇ ಒಂದು ವರ್ಗದ ಜನರು ಆರ್ಯನ್​ ಖಾನ್​ರನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇದರಿಂದ ಆರ್ಯನ್​ ಮನಸ್ಸಿಗೆ ಘಾಸಿ ಆಗಿದೆಯಂತೆ. ಆದ್ದರಿಂದ ಮಗನಿಗೆ ಆಪ್ತ ಸಮಾಲೋಚನೆ ಕೊಡಿಸಲು ಗೌರಿ ಖಾನ್​ ನಿರ್ಧರಿಸಿದ್ದಾರೆ. ಪುತ್ರನ ಮಾನಸಿಕ ಆರೋಗ್ಯದ ಬಗ್ಗೆ ಅವರು ಕಾಳಜಿ ವಹಿಸುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ಶಾರುಖ್​ ಖಾನ್​-ಗೌರಿ ಖಾನ್​ ವಿವಾಹ ವಾರ್ಷಿಕೋತ್ಸವ (ಅ.25) ಇತ್ತು. ಆಗ ಆರ್ಯನ್​ ಜೈಲಿನಲ್ಲಿದ್ದರು. ಗೌರಿ ಖಾನ್​ ಜನ್ಮದಿನಕ್ಕೂ (ಅ.8) ಅವರ ಅನುಪಸ್ಥಿತಿ ಕಾಡಿತ್ತು. ಆದರೆ ಇಂದು (ನ.2) ಶಾರುಖ್ ಖಾನ್​ ಜನ್ಮದಿನ. ಈ ಖುಷಿಯ ಸಂದರ್ಭದಲ್ಲಿ ಆರ್ಯನ್​ ಖಾನ್​ ಜಾಮೀನು ಪಡೆದು ಬಂದಿರುವುದು ತಂದೆ-ತಾಯಿಗೆ ಖುಷಿ ನೀಡಿದೆ. ಹಾಗಾಗಿ ಇಡೀ ‘ಮನ್ನತ್​’ ಮನೆಯನ್ನು ದೀಪಾಲಂಕಾರದಿಂದ ಸಿಂಗರಿಸಲಾಗಿದೆ.

ಇದನ್ನೂ ಓದಿ:

Aryan Khan: ಆರ್ಯನ್​ಗೆ ಜಾಮೀನು: ಒಂದೇ ಮಾತಲ್ಲಿ ರಮ್ಯಾ ಪ್ರತಿಕ್ರಿಯೆ; ಖುಷಿಪಟ್ಟ ಸೆಲೆಬ್ರಿಟಿಗಳು ಯಾರೆಲ್ಲ?

Shah Rukh Khan: ಶಾರುಖ್​ಗೆ ಜನ್ಮದಿನದ ಸಂಭ್ರಮ​; ಮನ್ನತ್​ ಮೇಲೆ ನಿಂತು ಅಭಿಮಾನಿಗಳಿಗೆ ಧನ್ಯವಾದ ಹೇಳಲಿದ್ದಾರೆ ಕಿಂಗ್​ ಖಾನ್?

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ