Shah Rukh Khan Birthday: ಶಾರುಖ್​ಗೆ ಸೊಕ್ಕು ಹೆಚ್ಚಾಯಿತು ಎನ್ನಿಸಿದಾಗ ಎಲ್ಲಿ ತೆರಳಾತ್ತರಂತೆ?; ಇಲ್ಲಿದೆ ನಟನ ಕುರಿತ ಮಜವಾದ ಸಂಗತಿಗಳು

Happy Birthday Shah Rukh Khan: ಇಂದು ನಟ ಶಾರುಖ್ ಖಾನ್ ಜನ್ಮದಿನ. ತಮ್ಮ ನಟನೆಯಲ್ಲಲ್ಲದೇ ತಮಾಷೆಯ ನಡವಳಿಕೆಯಿಂದ, ಕಾಲೆಳೆಯುವ ಪ್ರಶ್ನೆಗಳಿಗೆ ಅದೇ ಧಾಟಿಯಲ್ಲಿ ಉತ್ತರ ನೀಡುವುದರಲ್ಲೂ ಶಾರುಖ್ ನಿಸ್ಸೀಮರು. ಅಂತಹ ಕೆಲವು ಘಟನೆಗಳು ಇಲ್ಲಿವೆ.

Shah Rukh Khan Birthday: ಶಾರುಖ್​ಗೆ ಸೊಕ್ಕು ಹೆಚ್ಚಾಯಿತು ಎನ್ನಿಸಿದಾಗ ಎಲ್ಲಿ ತೆರಳಾತ್ತರಂತೆ?; ಇಲ್ಲಿದೆ ನಟನ ಕುರಿತ ಮಜವಾದ ಸಂಗತಿಗಳು
ಗೌರಿ ಖಾನ್, ಶಾರುಖ್ ಖಾನ್
Follow us
TV9 Web
| Updated By: shivaprasad.hs

Updated on:Nov 02, 2021 | 1:23 PM

ಬಾಲಿವುಡ್‌ ನಟ ಶಾರುಖ್ ಖಾನ್ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಸಾಲು ಸಾಲು ರೊಮ್ಯಾಂಟಿಕ್ ಹಿಟ್ ನೀಡಿ, ಬಾಲಿವುಡ್ ನ ರೊಮ್ಯಾಂಟಿಕ್ ಹೀರೋ, ಬಾಲಿವುಡ್ ಬಾದ್ ಷಾ ಎಂದೆಲ್ಲಾ ಅಭಿಮಾನಿಗಳು ಪ್ರೀತಿಯಿಂದ‌ ಶಾರುಖ್ ರನ್ನು‌ ಕರೆಯುತ್ತಾರೆ.  ಹೀಗಿರುವ ಶಾರುಖ್ ಕಾಮಿಡಿ ಟೈಮಿಂಗ್ ಕೂಡ ಅದ್ಭುತವಾಗಿದ್ದು, ತಮ್ಮ ತಮಾಷೆಯ ಉತ್ತರಗಳಿಂದ ಬಹಳಷ್ಟು ಬಾರಿ ಸುದ್ದಿಯಾಗಿದ್ದಾರೆ. ಕೆಲವೊಮ್ಮೆ ಅಭಿಮಾನಿಗಳು ಕಾಲೆಳೆಯುವಂತೆ ಪ್ರಶ್ನೆ ಕೇಳಿದಾಗ, ಅದಕ್ಕೆ ನಗುತ್ತಲೇ ಅವರದೇ ಭಾಷೆಯಲ್ಲಿ ಉತ್ತರಿಸಿ ಎಲ್ಲರ ಗಮನ ಸೆಳೆದದ್ದೂ ಇದೆ. ಅಂತಹ ಕೆಲವು ಅಪರೂಪದ ಪ್ರಸಂಗಗಳನ್ನು ಇಲ್ಲಿ‌ ನೀಡಲಾಗಿದೆ.

1. ಅಮೇರಿಕಾದವರು ನನ್ನ ಸ್ಟಾರ್ ಅಹಂ ಅನ್ನು ಇಳಿಸುತ್ತಾರೆ‌ ಎಂದು‌ ಅಮೇರಿಕಾದಲ್ಲೇ ಹೇಳಿದ್ದ ಶಾರುಖ್: ಯೇಲ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಲು ಹೋಗುತ್ತಿದ್ದ ಶಾರುಖ್ ಅವರನ್ನು 2012ರಲ್ಲಿ ಅಮೇರಿಕಾದ ವಿಮಾನ‌ ನಿಲ್ದಾಣದಲ್ಲಿ ತಡೆದು ಎರಡು ಗಂಟೆಗಳ‌ ಕಾಲ ಕೂರಿಸಲಾಗಿತ್ತು. ನಂತರ ಭಾಷಣದಲ್ಲಿ ಮಾತನಾಡುತ್ತಾ ಶಾರುಖ್, ನನಗೆ ನನ್ನ‌ ಕುರಿತು ಯಾವಾಗ ಅಹಂ‌ ಬರುತ್ತದೋ ಆಗೆಲ್ಲಾ ನಾನು ಅಮೇರಿಕಾ‌ ಪ್ರವಾಸ ಕೈಗೊಳ್ಳುತ್ತೇನೆ. ಅಧಿಕಾರಿಗಳು ನನ್ನ ಸ್ಟಾರ್ ಅಹಂಕಾರವನ್ನು ಇಳಿಸುತ್ತಾರೆ ಎಂದು ತಮಾಷೆ ಮಾಡಿದ್ದರು.

2. ತನಗೆ ಅವಾರ್ಡ್ ಸಿಕ್ಕೇ ಇಲ್ಲ‌ ಎಂದಿದ್ದ ಶಾರುಖ್: ಕಳೆದ ವರ್ಷ‌ ಶಾರುಖ್ ಪತ್ನಿ ಗೌರಿ‌ ಖಾನ್‌ ತಮಗೆ ಲಭಿಸಿದ ಪ್ರಶಸ್ತಿಯೊಂದರ ಚಿತ್ರ ಹಂಚಿಕೊಂಡಿದ್ದರು. ಅದನ್ನು ರಿಟ್ವೀಟ್ ಮಾಡಿದ್ದ‌ ಶಾರುಖ್, ‘ನಮ್ಮ‌‌ ಮನೆಯಲ್ಲಿ ಪ್ರಶಸ್ತಿ ಪಡೆಯುವವರು ಒಬ್ಬರಾದರೂ ಇದ್ದಾರಲ್ಲಾ’ ಎಂದು ತಮಾಷೆ ಮಾಡಿದ್ದರು. ಇದು ಎಲ್ಲರಲ್ಲೂ ನಗು ತರಿಸಿತ್ತು. ಕಾರಣ ಶಾರುಖ್ ನಿವಾಸದಲ್ಲಿ ಅವರಿಗೆ ಲಭಿಸಿದ ಪ್ರಶಸ್ತಿಗಳನ್ನು ಇಡುವುದಕ್ಕೆಂದೇ ಪ್ರತ್ಯೇಕ ಕೊಠಡಿಯಿದೆ.

3. ನಿಮ್ಮ‌‌ ಮತ್ತು ಸಲ್ಮಾನ್‌ ಸಂಬಂಧ ಹೇಗಿದೆ ಎಂಬ ಪ್ರಶ್ನೆಗೆ ಶಾರುಖ್‌ ಉತ್ತರಿಸುತ್ತಾ, ಬಹಳ ಚೆನ್ನಾಗಿದೆ. ನಾವು ಮಗು‌ ಪಡೆಯಲು ಯೋಚಿಸುತ್ತಿದ್ದೇವೆ ಎಂದು ನಕ್ಕಿದ್ದರು. ಇದು‌ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತ್ತು.

4. ನಿಮ್ಮ ಬಳಿ‌ ನೆಟ್ ಫ್ಲಿಕ್ಸ್ ಚಂದಾದಾರರಾಗಿದ್ದೀರಾ ಎಂದು ಅಭಿಮಾನಿಯೋರ್ವರು ಶಾರುಖ್ ಬಳಿ ಪ್ರಶ್ನಿಸಿದ್ದರು. ಆಗ ಶಾರುಖ್ ಇಲ್ಲ, ನೆಟ್ ಫ್ಲಿಕ್ಸ್ ಅವರೇ ನನ್ನ ಚಂದಾದಾರರಾಗಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.

5. ಹೊಸ‌ ಚಿತ್ರ ಬಿಡುಗಡೆಯಾಗ ಹಿನ್ನೆಲೆಯಲ್ಲಿ‌ ತಮಾಷೆ‌ ಮಾಡಿದ್ದ ಶಾರುಖ್: ಶಾರುಖ್ ಅವರ ಚಿತ್ರಗಳು ತಡರೆಗೆ ಬರದೇ‌ ಮೂರು ವರ್ಷಗಳು ಕಳೆದಿವೆ. 2018ರಲ್ಲಿ ‘ಜೀರೋ’ ಚಿತ್ರವೇ ಅವರ ಕೊನೆಯ ಚಿತ್ರ.‌ ಇದಕ್ಕೆ ಸಂಬಂಧಿಸಿದಂತೆ ಶಾರುಖ್ ಒಮ್ಮೆ ಜೋಕ್‌ ಮಾಡಿದ್ದರು. 2020ರಲ್ಲಿ ಗೌರಿ ಖಾನ್ ಟ್ವಿಟರ್ ನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರ ಒಂದು ಕಡೆ ಶಾರುಖ್ ಹಾಗೂ ಮತ್ತೊಂದು ಕಡೆ ಶಾರುಖ್ ಖಾನ್ ಅವರ ಮೇಣದ ಪ್ರತಿಮೆ ಇತ್ತು.‌ ಅದನ್ನು ಹಂಚಿಕೊಳ್ಳುತ್ತಾ, ‘ಇಬ್ಬರನ್ನು‌ ನಿರ್ವಹಿಸಲು ಕಷ್ಟವಾಗುತ್ತದೆ’ ಎಂಬರ್ಥದಲ್ಲಿ ತಮಾಷೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಸಿದ್ದ ಶಾರುಖ್, ಹೌದು ಕಳೆದ ಒಂದೂವರೆ ವರ್ಷದಿಂದ ಇಬ್ಬರೂ ಮನೆಯಲ್ಲೇ ಇದ್ದಾರೆ ಎಂದು ನಕ್ಕಿದ್ದರು.

ಹೀಗೆ ಶಾರುಖ್ ಅನೇಕ‌ ಬಾರಿ ತಮ್ಮ ಹಾಸ್ಯ ಧಾಟಿಯ ಉತ್ತರದಿಂದ ಎಲ್ಲರ ಗಮನಸೆಳೆದಿದ್ದಾರೆ. ಪ್ರಸ್ತುತ ನಟ ಪುತ್ರ ಆರ್ಯನ್ ಖಾನ್ ಬಿಡುಗಡೆಯಿಂದ ಸಮಾಧಾನ ಹೊಂದಿದ್ದು, ಅವರ ನಿವಾಸ ಮನ್ನತ್ ನಲ್ಲಿ‌ ಮತ್ತೆ ಸಂತಸ ಮನೆಮಾಡಿದೆ. ನಿವಾಸದ ಹೊರಗೆ ಅಭಿಮಾನಿಗಳು ಜಮಾಯಿಸಿ ಶಾರುಖ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಇದನ್ನೂ ಓದಿ:

Shah Rukh Khan Birthday: ಶಾರುಖ್ ನಟನೆಯ ಈ ರೊಮ್ಯಾಂಟಿಕ್ ಚಿತ್ರಗಳನ್ನು ಮಿಸ್ ಮಾಡಲೇಬೇಡಿ

Puneeth Rajkumar: ಇಂದಿನಿಂದಲೇ ಸಾರ್ವಜನಿಕರು ಪುನೀತ್ ದರ್ಶನ ಪಡೆಯಬಹುದು; ರಾಘವೇಂದ್ರ ರಾಜಕುಮಾರ್ ಮಾಹಿತಿ

Published On - 1:11 pm, Tue, 2 November 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ