AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan Birthday: ಶಾರುಖ್ ನಟನೆಯ ಈ ರೊಮ್ಯಾಂಟಿಕ್ ಚಿತ್ರಗಳನ್ನು ಮಿಸ್ ಮಾಡಲೇಬೇಡಿ

Happy birthday Shah Rukh Khan: ಇಂದು ಶಾರುಖ್ ಖಾನ್ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ಅತ್ಯುತ್ತಮ 5 ರೊಮ್ಯಾಂಟಿಕ್ ಚಿತ್ರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

Shah Rukh Khan Birthday: ಶಾರುಖ್ ನಟನೆಯ ಈ ರೊಮ್ಯಾಂಟಿಕ್ ಚಿತ್ರಗಳನ್ನು ಮಿಸ್ ಮಾಡಲೇಬೇಡಿ
ಶಾರುಖ್ ಖಾನ್
TV9 Web
| Edited By: |

Updated on: Nov 02, 2021 | 10:47 AM

Share

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅಭಿಮಾನಿಗಳಿಂದ ಬಾಲಿವುಡ್ ಬಾದ್​ಷಾ ಎಂದೇ ಕರೆಸಿಕೊಳ್ಳುತ್ತಾರೆ. ಇಂದು ಅವರು 56ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆ ಮುಖಾಂತರ ನಟನೆಗೆ ಪಾದಾರ್ಪಣೆ ಮಾಡಿದ ಅವರು, 1992ರಲ್ಲಿ ‘ದೀವಾನಾ’ ಚಿತ್ರದ ಮುಖಾಂತರ ಬಾಲಿವುಡ್ ಪ್ರವೇಶಿಸಿದರು. ಬಾಲಿವುಡ್​ನ ಯಶಸ್ವಿ ರೊಮ್ಯಾಂಟಿಕ್ ನಾಯಕನೆಂದೇ ಗುರುತಿಸಿಕೊಂಡಿರುವ ಶಾರುಖ್- ಕಾಜೊಲ್, ಮಾಧುರಿ ದೀಕ್ಷಿತ್, ಕರಿಷ್ಮಾ ಕಪೂರ್, ಜೂಹಿ ಚಾವ್ಲಾ, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಸುಷ್ಮಿತಾ ಸೇನ್, ಕರೀನಾ ಕಪೂರ್, ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಖ್ಯಾತ ನಾಯಕಿಯರೊಂದಿಗೆ ಬಣ್ಣ ಹಚ್ಚಿದ್ದಾರೆ. ಸಹಜ ಅಭಿನಯದಿಂದಲೇ ಎಲ್ಲರನ್ನೂ ಸೆಳೆಯುವ ಶಾರುಖ್​ಗೆ ವಿಶ್ವಾದ್ಯಂತ ಅಭಿಮಾನಿ ವೃಂದವಿದೆ. ಶಾರುಖ್ ನಟನೆಯ ಅತ್ಯುತ್ತಮ 5 ರೊಮ್ಯಾಂಟಿಕ್ ಚಿತ್ರಗಳ ಪಟ್ಟಿ ಇಲ್ಲಿದೆ.

1. ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ (DILWALE DULHANIA LE JAYENGE): 1995ರಲ್ಲಿ ಬಿಡುಗಡೆಯಾದ ಈ ಚಿತ್ರ ಡಿಡಿಎಲ್​ಜೆ ಎಂದೇ ಪ್ರಸಿದ್ಧವಾಗಿದ್ದು, ಶಾರುಖ್ ಖಾನ್ ಹಾಗೂ ಕಾಜೊಲ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ರಾಜ್ ಹಾಗೂ ಸಿಮ್ರಾನ್ ಪಾತ್ರಗಳು ಭಾರತೀಯ ಚಿತ್ರರಂಗದ ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಈ ಚಿತ್ರ ಬಹಳ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು.

2. ದಿಲ್ ತೋ ಪಾಗಲ್ ಹೈ (DIL TO PAGAL HAI): ಯಶ್ ಚೋಪ್ರಾ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್​ಗೆ ಜೋಡಿಯಾಗಿ ಮಾಧುರಿ ದೀಕ್ಷಿತ್ ಹಾಗೂ ಕರಿಷ್ಮಾ ಕಪೂರ್ ಅಭಿನಯಿಸಿದ್ದಾರೆ. ಅಕ್ಷಯ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. 1997ರಲ್ಲಿ ಬಿಡುಗಡೆಯಾದ ಈ ಚಿತ್ರ ಕೂಡ ಶಾರುಖ್ ವೃತ್ತಿ ಜೀವನದ ಯಶಸ್ವಿ ಚಿತ್ರಗಳಲ್ಲೊಂದು.

3. ಕುಛ್ ಕುಛ್ ಹೋತಾ ಹೈ (KUCH KUCH HOTA HAI): ಶಾರುಖ್ ಖಾನ್, ಕಾಜೊಲ್, ರಾಣಿ ಮುಖರ್ಜಿ, ಸಲ್ಮಾನ್ ಖಾನ್ ಅಭಿನಯಿಸಿರುವ ಈ ಚಿತ್ರವನ್ನು ಕರಣ್ ಜೋಹರ್ ನಿರ್ದೇಶಿಸಿದ್ದಾರೆ. 1998ರಲ್ಲಿ ಬಿಡುಗಡೆಯಾದ ಈ ಚಿತ್ರ ಎರಡು ತ್ರಿಕೋನ್ ಪ್ರೇಮಕಥೆಗಳನ್ನೊಳಗೊಂಡಿದೆ.

4. ದಿಲ್​ಸೆ (Dil Se): ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್​ಗೆ ಜೋಡಿಯಾಗಿ ಮನಿಷಾ ಕೊಯಿರಾಲ ಅಭಿನಯಿಸಿದ್ದರು. ಪ್ರೀತಿ ಜಿಂಟಾ ಕೂಡ ಈ ಚಿತ್ರದ ಮುಖಾಂತರ ಬಾಲಿವುಡ್​ಗೆ ಪ್ರವೇಶಿಸಿದರು. 1999ರಲ್ಲಿ ಬಿಡುಗಡೆಯಾದ ಈ ಚಿತ್ರ, ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿತ್ತು. ಈ ಚಿತ್ರದ ಛಾಯಾಗ್ರಹಣ ಹಾಗೂ ಎ.ಆರ್ ರೆಹಮಾನ್ ಅವರ ಸಂಗೀತ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರದ ಹಾಡುಗಳನ್ನು ಈಗಲೂ ಸಂಗೀತ ಪ್ರಿಯರು ಗುನುಗುತ್ತಾರೆ.

Dil Se

ದಿಲ್​ಸೆ ಚಿತ್ರದ ಪೋಸ್ಟರ್

5. ದೇವದಾಸ್: ಶರತ್ ಚಂದ್ರ ಚಟ್ಟೋಪಾಧ್ಯಾಯರ ಕಾದಂಬರಿ ಆಧರಿಸಿದ ಈ ಚಿತ್ರ 2002ರಲ್ಲಿ ತೆರೆಗೆ ಬಂದಿತ್ತು. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್​ರೊಂದಿಗೆ ಐಶ್ವರ್ಯಾ ರೈ ತೆರೆಹಂಚಿಕೊಂಡಿದ್ದರು. ಮಾಧುರಿ ದೀಕ್ಷಿತ್, ಜಾಕಿ ಶ್ರಾಫ್, ಚುನ್ನಿ ಬಾಬು ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಶಾರುಖ್ ಅಭಿನಯದ ಈ 5 ಚಿತ್ರಗಳಲ್ಲದೇ, ಅವರ ಹಲವಾರು ಚಿತ್ರಗಳು ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆದಿವೆ. ‘ಚಕ್​ದೆ ಇಂಡಿಯಾ, ಬಾದ್​ಷಾ, ಮೊಹಬ್ಬತೇನ್, ಡಾನ್, ಡಾನ್ 2, ಹ್ಯಾಪಿ ನ್ಯೂ ಇಯರ್, ಪಹೇಲಿ’ ಸೇರಿದಂತೆ ಹಲವಾರು ಚಿತ್ರಗಳು ಶಾರುಖ್ ಅಭಿಮಾನಿಗಳಿಗೆ ಅಚ್ಚುಮೆಚ್ಚಿನ ಚಿತ್ರಗಳಾಗಿವೆ.

ಇದನ್ನೂ ಓದಿ:

Shah Rukh Khan: ಶಾರುಖ್​ಗೆ ಜನ್ಮದಿನದ ಸಂಭ್ರಮ​; ಮನ್ನತ್​ ಮೇಲೆ ನಿಂತು ಅಭಿಮಾನಿಗಳಿಗೆ ಧನ್ಯವಾದ ಹೇಳಲಿದ್ದಾರೆ ಕಿಂಗ್​ ಖಾನ್?

Aryan Khan Jail: ಜೈಲಿನಿಂದ ಹೊರಬಂದ ಆರ್ಯನ್​ ಖಾನ್​; ಶಾರುಖ್​ ನಿವಾಸ ಮನ್ನತ್​ ಎದುರು ಫ್ಯಾನ್ಸ್​ ಸಂಭ್ರಮ

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!