Shah Rukh Khan: ಶಾರುಖ್​ಗೆ ಜನ್ಮದಿನದ ಸಂಭ್ರಮ​; ಮನ್ನತ್​ ಮೇಲೆ ನಿಂತು ಅಭಿಮಾನಿಗಳಿಗೆ ಧನ್ಯವಾದ ಹೇಳಲಿದ್ದಾರೆ ಕಿಂಗ್​ ಖಾನ್?

Shah Rukh Khan Birthday: ಶಾರುಖ್​ ಪತ್ನಿ ಗೌರಿ ಖಾನ್​ ಹಿಂದು ಆಗಿದ್ದರು. ಈ ಕಾರಣಕ್ಕೆ ಶಾರುಖ್​ ತಮ್ಮ ಮನೆಯಲ್ಲಿ ಪ್ರತಿ ವರ್ಷ ದೀಪಾವಳಿ ಆಚರಿಸುತ್ತಾರೆ. ಈ ಬಾರಿಯೂ ಬೆಳಕಿನ ಹಬ್ಬವನ್ನು ಕುಟುಂಬ ಸಮೇತವಾಗಿ ಆಚರಿಸಲು ಯೋಚನೆ ಮಾಡಿದ್ದಾರೆ.

Shah Rukh Khan: ಶಾರುಖ್​ಗೆ ಜನ್ಮದಿನದ ಸಂಭ್ರಮ​; ಮನ್ನತ್​ ಮೇಲೆ ನಿಂತು ಅಭಿಮಾನಿಗಳಿಗೆ ಧನ್ಯವಾದ ಹೇಳಲಿದ್ದಾರೆ ಕಿಂಗ್​ ಖಾನ್?
ಶಾರುಖ್​ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Nov 02, 2021 | 8:17 AM

ಶಾರುಖ್​ ಖಾನ್ ಇಂದು (ನವೆಂಬರ್​ 2) ಹುಟ್ಟುಹಬ್ಬದ ಸಂಭ್ರಮದಲಿದ್ದಾರೆ. ಬಾಲಿವುಡ್​​ನ ಈ ದೊಡ್ಡ ಸೆಲೆಬ್ರಿಟಿಗೆ 56ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಡ್ರಗ್​ ಕೇಸ್​ನಲ್ಲಿ ಜೈಲಿಗೆ ತೆರಳಿದ್ದ ಮಗ ಆರ್ಯನ್​ ಖಾನ್​ ರಿಲೀಸ್​ ಆಗಿದ್ದಾರೆ. ಇದು ಶಾರುಖ್​ ಬರ್ತ್​ಡೇ ಸಂಭ್ರಮವನ್ನು ಹೆಚ್ಚಿಸಿದೆ. ಆದಾಗ್ಯೂ, ಸಿಂಪಲ್​ ಆಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಈ ಮಧ್ಯೆ, ಕಷ್ಟದ ಸಂದರ್ಭದಲ್ಲಿ ಜೊತೆಗಿದ್ದ ಫ್ಯಾನ್ಸ್​ಗೆ ಅವರು ತಮ್ಮ ನಿವಾಸ ಮನ್ನತ್​ ಮೇಲೆ ನಿಂತು ಧನ್ಯವಾದ ಅರ್ಪಿಸಲಿದ್ದಾರೆ ಎನ್ನಲಾಗುತ್ತಿದೆ.

ಶಾರುಖ್​ ಖಾನ್​ ಅವರಿಗೆ ಈ ತಿಂಗಳು ಬಹಳ ವಿಶೇಷವಾದದ್ದು. ಏಕೆಂದರೆ, ಅವರು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಜತೆಗೆ ಕತ್ತಲಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವ ದೀಪಾವಳಿ ಹಬ್ಬ ಇದೆ. ನವೆಂಬರ್​ 13ರಂದು ಆರ್ಯನ್​ ಖಾನ್​ ಜನ್ಮದಿನ. ಈ ಎಲ್ಲಾ ಕಾರಣಕ್ಕೆ ಶಾರುಖ್​ ಎಗ್ಸೈಟ್​ ಆಗಿದ್ದಾರೆ. ಮತ್ತೆ ಕುಟುಂಬದಲ್ಲಿ ಸಂತಸ ಮೂಡಿದೆ. ಇಂದು ಕುಟುಂಬದವರ ಜತೆ ಸಿಂಪಲ್​ ಆಗಿ ಶಾರುಖ್​ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದಾರೆ. ಪ್ರತಿ ಬಾರಿ ಶಾರುಖ್​ ಜನ್ಮದಿನದಂದು ಅವರ ಮನೆಯ ಎದುರು ಸಾವಿರಾರು ಅಭಿಮಾನಿಗಳು ಬಂದು ನಿಲ್ಲುತ್ತಾರೆ. ಈ ಬಾರಿಯೂ ಅದು ಮುಂದುವರಿಯಲಿದೆ. ಶಾರುಖ್​ ಕುಟುಂಬ ಸಮೇತ ಮನೆಯ ಮೇಲೆ ಬಂದು ಅಭಿಮಾನಿಗಳಿಗೆ ಧನ್ಯವಾದ ಹೇಳಲಿದ್ದಾರೆ ಎನ್ನಲಾಗುತ್ತಿದೆ.

ಶಾರುಖ್​ ಪತ್ನಿ ಗೌರಿ ಖಾನ್​ ಹಿಂದು ಆಗಿದ್ದರು. ಈ ಕಾರಣಕ್ಕೆ ಶಾರುಖ್​ ತಮ್ಮ ಮನೆಯಲ್ಲಿ ಪ್ರತಿ ವರ್ಷ ದೀಪಾವಳಿ ಆಚರಿಸುತ್ತಾರೆ. ಈ ಬಾರಿಯೂ ಬೆಳಕಿನ ಹಬ್ಬವನ್ನು ಕುಟುಂಬ ಸಮೇತವಾಗಿ ಆಚರಿಸಲು ಯೋಚನೆ ಮಾಡಿದ್ದಾರೆ. ಆರ್ಯನ್​ ಖಾನ್​ ಬರ್ತ್​ಡೇ ಕೂಡ ಶಾರುಖ್​ ಮನೆಯಲ್ಲೇ ಸೆಲಬ್ರೇಟ್​ ಮಾಡಲಿದ್ದಾರೆ.

ಆರ್ಯನ್​ ಖಾನ್​ ಡ್ರಗ್​ ಪ್ರಕರಣದಿಂದ ಸಿನಿಮಾ ಕೆಲಸಗಳಿಗೆ ತೆರಳೋಕೆ ಶಾರುಖ್​ಗೆ ಸಾಧ್ಯವಾಗಿಲ್ಲ. ಮಗನ ಚಿಂತೆಯಲ್ಲಿ ಅವರು ಸರಿಯಾಗಿ ವರ್ಕೌಟ್​ ಕೂಡ ಮಾಡಿರಲಿಲ್ಲ. ಮಗನ ಬರ್ತ್​ಡೇ ನಂತರ ಅವರು ಮತ್ತೆ ಸಿನಿಮಾ ಕೆಲಸಗಳಿಗೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು, ಶಾರುಖ್​ ಬರ್ತ್​ಡೇ ಅಂಗವಾಗಿ ಅನೇಕ ಸೆಲೆಬ್ರಟಿಗಳು, ಅಭಿಮಾನಿಗಳು ವಿಶ್​ ಮಾಡುತ್ತಿದ್ದಾರೆ. ಶಾರುಖ್​ ನಟಿಸುತ್ತಿರುವ ಸಿನಿಮಾ ತಂಡದಿಂದ ಏನಾದರೂ ಅಪ್​ಡೇಟ್​ ಸಿಗಲಿದೆಯೇ ಎನ್ನುವ ಕುತೂಹಲವೂ ಅಭಿಮಾನಿಗಳಲ್ಲಿದೆ. ಇದಕ್ಕೆ ಇಂದೇ ಉತ್ತರ ಸಿಗಲಿದೆ.

ಇದನ್ನೂ ಓದಿ: Aryan Khan Jail: ಜೈಲಿನಿಂದ ಹೊರಬಂದ ಆರ್ಯನ್​ ಖಾನ್​; ಶಾರುಖ್​ ನಿವಾಸ ಮನ್ನತ್​ ಎದುರು ಫ್ಯಾನ್ಸ್​ ಸಂಭ್ರಮ

ಶಾರುಖ್​ ಖಾನ್​ ಪುತ್ರನ ಜಾಮೀನಿಗೆ ನಟಿ ಜೂಹಿ ಚಾವ್ಲಾರಿಂದ ಶ್ಯೂರಿಟಿ; 1 ಲಕ್ಷ ರೂ.ಬಾಂಡ್​ಗೆ ಸಹಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ