AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್​ ಖಾನ್​ ಪುತ್ರನ ಜಾಮೀನಿಗೆ ನಟಿ ಜೂಹಿ ಚಾವ್ಲಾರಿಂದ ಶ್ಯೂರಿಟಿ; 1 ಲಕ್ಷ ರೂ.ಬಾಂಡ್​ಗೆ ಸಹಿ

ಆರ್ಯನ್​ ಖಾನ್​ ಅವರ ಜಾಮೀನು ಅರ್ಜಿ ವಿಚಾರಣೆ ಗುರುವಾರ (ಅಕ್ಟೋಬರ್​ 28) ಪೂರ್ಣಗೊಂಡಿದೆ. ಬಾಂಬೆ ಹೈಕೋರ್ಟ್​ನ ಏಕ ಸದಸ್ಯ ಪೀಠವು ಆರ್ಯನ್​ ಜಾಮೀನು ಅರ್ಜಿಯನ್ನು ಪುರಸ್ಕರಿಸಿದೆ.

ಶಾರುಖ್​ ಖಾನ್​ ಪುತ್ರನ ಜಾಮೀನಿಗೆ ನಟಿ ಜೂಹಿ ಚಾವ್ಲಾರಿಂದ ಶ್ಯೂರಿಟಿ; 1 ಲಕ್ಷ ರೂ.ಬಾಂಡ್​ಗೆ ಸಹಿ
ಜೂಹಿ ಚಾವ್ಲಾ ಮತ್ತು ಶಾರುಖ್​ ಖಾನ್​
TV9 Web
| Edited By: |

Updated on:Oct 29, 2021 | 6:37 PM

Share

ಡ್ರಗ್ಸ್​ ಕೇಸ್​​ನಲ್ಲಿ ಜೈಲುಪಾಲಾಗಿದ್ದ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ಗೆ ನಿನ್ನೆ ಜಾಮೀನು ಮಂಜೂರಾಗಿದೆ. ಆದರೆ ಇನ್ನೆರಡು ದಿನ ಅವರು ಜೈಲಿನಲ್ಲಿಯೇ ಇರಲಿದ್ದಾರೆ. ಆದರೆ ಆರ್ಯನ್ ಖಾನ್ ಜಾಮೀನಿಗೆ ಸಂಬಂಧಪಟ್ಟಂತೆ ಈಗೊಂದು ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ನಟಿ ಜೂಹಿ ಚಾವ್ಲಾ ಅವರು ಶಾರುಖ್​ ಪುತ್ರನಿಗಾಗಿ 1 ಲಕ್ಷ ರೂಪಾಯಿ ಬಾಂಡ್​​ಗೆ ಸಹಿ ಹಾಕಿದ್ದಾರೆ ಎಂದು ಗೊತ್ತಾಗಿದೆ. ನಿನ್ನೆ ಬಾಂಬೆ ಹೈಕೋರ್ಟ್​ ಆರ್ಯನ್​​ರಿಗೆ ಷರತ್ತುಬದ್ಧ ಜಾಮೀನು ನೀಡಿದ್ದು, ಇಂದು ಜೂಹಿ ಚಾವ್ಲಾ ಎನ್​ಡಿಪಿಎಸ್​​  ಕೋರ್ಟ್​ಗೆ ತೆರಳಿ ಈ ಸಹಿ ಮಾಡಿದ್ದಾರೆ.   ಜೂಹಿ ಚಾವ್ಲಾ ಮತ್ತು ಶಾರುಖ್​ ಖಾನ್​ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದಾರೆ, ಒಟ್ಟಾಗಿ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಆರ್ಯನ್ ಹುಟ್ಟಿದಾಗಿನಿಂದಲೂ ಜೂಹಿ ಚಾವ್ಲಾರಿಗೆ ಪರಿಚಯ. ಹಾಗೇ ಇದೀಗ ಶಾರುಖ್​ ಪುತ್ರನಿಗೆ ಜೂಹಿ ಚಾವ್ಲಾ ಅವರೇ ಶ್ಯೂರಿಟಿ ನೀಡಿದ್ದಾರೆ. ಈ ಬಗ್ಗೆ ಆರ್ಯನ್​ ಖಾನ್​ ಪರ ವಕೀಲರಾದ ಸತೀಶ್​ ಮನೇಶಿಂಧೆ ಮಾಹಿತಿ ನೀಡಿದ್ದಾರೆ. 

ಬಾಂಬೆ ಹೈಕೋರ್ಟ್​​ ನೀಡಿದ ಜಾಮೀನು ಆದೇಶದ ಆಪರೇಟಿವ್​ ಭಾಗ ನಮಗೆ ಸಿಕ್ಕಿದೆ. ನಾವೀಗ ಶ್ಯೂರಿಟಿಯಂತಹ ಕಾನೂನು ಕ್ರಮಗಳನ್ನು ನಡೆಸುವ ಕೆಲಸದಲ್ಲಿ ತೊಡಗಿದ್ದೇವೆ. ನಮ್ಮ ಕಾನೂನು ತಂಡ ಈ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ನಡೆಸುತ್ತಿದೆ. ಆರ್ಯನ್​ ಖಾನ್​ರನ್ನು ಬೇಗನೇ ಜೈಲಿನಿಂದ ಬಿಡುಗಡೆ ಮಾಡಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ ಎಂದು ಮನೇಶಿಂಧೆ ತಿಳಿಸಿದ್ದಾರೆ. ಜೂಹಿ ಚಾವ್ಲಾ ಅವರೇ ಆರ್ಯನ್ ಖಾನ್​ ಜಾಮೀನಿಗೆ ಶ್ಯೂರಿಟಿ. ಅವರ ಹೆಸರು ಈಗ ಪಾಸ್​ಪೋರ್ಟ್​​ನಲ್ಲಿದೆ..ಆಧಾರ್​ ಕಾರ್ಡ್​​ನಲ್ಲಿದೆ ಎಂದು ಹೇಳಿದ್ದಾರೆ.

ಆರ್ಯನ್​ ಖಾನ್​ ಅವರ ಜಾಮೀನು ಅರ್ಜಿ ವಿಚಾರಣೆ ಗುರುವಾರ (ಅಕ್ಟೋಬರ್​ 28) ಪೂರ್ಣಗೊಂಡಿದೆ. ಬಾಂಬೆ ಹೈಕೋರ್ಟ್​ನ ಏಕ ಸದಸ್ಯ ಪೀಠವು ಆರ್ಯನ್​ ಜಾಮೀನು ಅರ್ಜಿಯನ್ನು ಪುರಸ್ಕರಿಸಿದೆ. ಈ ಮೂಲಕ ಒಂದು ತಿಂಗಳ ನಂತರದಲ್ಲಿ ಆರ್ಯನ್​ ಖಾನ್​ಗೆ ಜಾಮೀನು ಸಿಕ್ಕಿದೆ.  ಆರ್ಯನ್​ ಜತೆಗೆ, ಮುನ್​ಮುನ್​ ಧಮೇಚಾ ಮತ್ತು ಅರ್ಬಾಜ್ ಮರ್ಚೆಂಟ್​ಗೂ ಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ: Gokak Falls : ಹೇಳು ಘಟಪ್ರಭೇ, ವತ್ಸಲಾ ಟೀಚರ್​ಗೆ ನಿನ್ನ ಸೇತುವೆಯಲ್ಲಿ ಜಾಗವಿರಲಿಲ್ಲವೆ?

ಪವರ್ ಸ್ಟಾರ್ ಪುನೀತ್ ನಿಧನಕ್ಕೆ ಕನ್ನಡ ಮತ್ತು ಪರಭಾಷೆಯ ಚಿತ್ರರಂಗದ ಕಲಾವಿದರ ಕಂಬನಿ

Published On - 6:36 pm, Fri, 29 October 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್