Aryan Khan: ಆರ್ಯನ್​ಗೆ ಜಾಮೀನು: ಒಂದೇ ಮಾತಲ್ಲಿ ರಮ್ಯಾ ಪ್ರತಿಕ್ರಿಯೆ; ಖುಷಿಪಟ್ಟ ಸೆಲೆಬ್ರಿಟಿಗಳು ಯಾರೆಲ್ಲ?

Ramya Divya Spandana: ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಶಾರುಖ್ ಖಾನ್​​ ಪರವಾಗಿ ಮಾತನಾಡಿದ್ದಾರೆ. ಆರ್ಯನ್​ ಖಾನ್​ ಜಾಮೀನು ಪಡೆದು ಹೊರಬರುತ್ತಿರುವುದಕ್ಕೆ ರಮ್ಯಾ ಸೇರಿದಂತೆ ಹಲವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Aryan Khan: ಆರ್ಯನ್​ಗೆ ಜಾಮೀನು: ಒಂದೇ ಮಾತಲ್ಲಿ ರಮ್ಯಾ ಪ್ರತಿಕ್ರಿಯೆ; ಖುಷಿಪಟ್ಟ ಸೆಲೆಬ್ರಿಟಿಗಳು ಯಾರೆಲ್ಲ?
ರಮ್ಯಾ, ಆರ್ಯನ್​ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Oct 29, 2021 | 9:21 AM

ಸತತ ಹಿನ್ನಡೆ ಬಳಿಕ ಕಡೆಗೂ ಆರ್ಯನ್​ ಖಾನ್​ಗೆ​ ಜಾಮೀನು ಕೊಡಿಸುವಲ್ಲಿ ಅವರ ಪರ ವಕೀಲರು ಯಶಸ್ವಿ ಆಗಿದ್ದಾರೆ. 25 ದಿನಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವ ಶಾರುಖ್​ ಖಾನ್​ ಪುತ್ರನಿಗೆ ಸದ್ಯಕ್ಕೆ ರಿಲೀಫ್​ ಸಿಕ್ಕಿದೆ. ಕೆಲವು ಷರತ್ತುಗಳ ಮೇಲೆ ಆರ್ಯನ್​ಗೆ ಬಾಂಬೆ ಹೈಕೋರ್ಟ್​ ಗುರುವಾರ (ಅ.28) ಜಾಮೀನು ಮಂಜೂರು ಮಾಡಿದೆ. ಜೈಲಿನ ಕೆಲವು ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಆರ್ಯನ್​ ಮನೆಗೆ ಬರಲಿದಿದ್ದಾರೆ. ಅವರಿಗೆ ಜಾಮೀನು ಸಿಕ್ಕ ಸುದ್ದಿ ಹೊರಬೀಳುತ್ತಿದ್ದಂತೆಯೇ ಸ್ಯಾಂಡಲ್​ವುಡ್​ ನಟಿ ರಮ್ಯಾ ಸೇರಿದಂತೆ ಅನೇಕರು ಪ್ರತಿಕ್ರಿಯಿಸಿದ್ದಾರೆ.

ಆರ್ಯನ್ ಖಾನ್​​ ಬಂಧನದ ಬಗ್ಗೆ ರಮ್ಯಾ ಅವರು ಮೊದಲಿನಿಂದಲೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಬಂದಿದ್ದರು. ತನಿಖೆಯ ರೀತಿ-ನೀತಿ ಬಗ್ಗೆ ಅವರು ತಕರಾರು ಎತ್ತಿದ್ದರು. ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅನಿಸಿಕೆ ಹಂಚಿಕೊಳ್ಳುತ್ತಿದ್ದರು. ಈಗ ಆರ್ಯನ್​ ಖಾನ್​ಗೆ ಜಾಮೀನು ಮಂಜೂರು ಆದ ತಕ್ಷಣ ‘ಕಡೆಗೂ ಜಾಮೀನು ಸಿಕ್ತು’ ಎಂದು ನಿಟ್ಟುಸಿರು ಬಿಡುವ ರೀತಿಯಲ್ಲಿ ಅವರು ಸ್ಟೋರಿ ಪೋಸ್ಟ್​ ಮಾಡಿದ್ದಾರೆ.

ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಶಾರುಖ್​ ಪರವಾಗಿ ಮಾತನಾಡಿದ್ದಾರೆ. ಆರ್ಯನ್​ ಖಾನ್​ ಜಾಮೀನು ಪಡೆದು ಹೊರಬರುತ್ತಿರುವುದಕ್ಕೆ ಹಲವರು ಖುಷಿ ವ್ಯಕ್ತಪಡಿಸಿದ್ದಾರೆ. ಸೋನು ಸೂದ್​, ಸ್ವರಾ ಭಾಸ್ಕರ್​, ಆರ್. ಮಾಧವನ್​, ಸೋನಮ್​ ಕಪೂರ್​, ಮಿಕಾ ಸಿಂಗ್​, ಹನ್ಸಲ್​ ಮೆಹ್ತಾ, ಸಂಜಯ್​ ಗುಪ್ತಾ, ಮಲೈಕಾ ಅರೋರಾ, ಕರಣ್​ ಜೋಹರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಂತಸ ಹಂಚಿಕೊಂಡಿದ್ದಾರೆ.

ಆರ್ಯನ್​ ಖಾನ್​ ತಂಗಿ ಸುಹಾನಾ ಖಾನ್​ ಅವರು ತಮ್ಮಿಬ್ಬರ ಬಾಲ್ಯದ ಫೋಟೋಗಳನ್ನು ಹಂಚಿಕೊಂಡು, ‘ಐ ಲವ್​ ಯೂ’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ‘ಕಾಲವೇ ತೀರ್ಪು ನೀಡಿದಾಗ ಸಾಕ್ಷಿಗಳ ಅವಶ್ಯಕತೆ ಇರುವುದಿಲ್ಲ’ ಎಂದು ಸೋನು ಸೂದ್​ ಟ್ವೀಟ್​ ಮಾಡಿದ್ದಾರೆ. ‘ಧನ್ಯವಾದಗಳು ದೇವರೇ.. ಒಬ್ಬ ತಂದೆಯಾಗಿ ನನಗೆ ಈಗ ಸಮಾಧಾನ ಎನಿಸುತ್ತಿದೆ. ಒಳ್ಳೆಯ ಸಂಗತಿಗಳೇ ನಡೆಯಲಿ’ ಎಂದು ಆರ್​. ಮಾಧವನ್​ ಟ್ವೀಟ್​ ಮಾಡಿದ್ದಾರೆ.

ಶುಕ್ರವಾರ (ಅ.29) ಸಂಜೆ ಅಥವಾ ಶನಿವಾರ (ಅ.30) ಬೆಳಗ್ಗೆ ಆರ್ಯನ್​ ಖಾನ್​ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ. ಅವರನ್ನು ಬರಮಾಡಿಕೊಳ್ಳಲು ಈಗಾಗಲೇ ಶಾರುಖ್​ ಫ್ಯಾನ್ಸ್​ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಶಾರುಖ್​ ನಿವಾಸ ಮನ್ನತ್​ ಎದುರು ಅಭಿಮಾನಿಗಳ ದಂಡು ನೆರೆದಿದೆ. ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ.

ಇದನ್ನೂ ಓದಿ:

ರಮ್ಯಾಗೆ ಸಖತ್​ ಇಷ್ಟವಾಯ್ತು ‘ರತ್ನನ್​ ಪ್ರಪಂಚ’; ಈ ಚಿತ್ರಕ್ಕೆ ಅವರೇ ನಾಯಕಿ ಆಗಬೇಕಿತ್ತು, ಆದರೆ…

ವಯಸ್ಸಿನ ಬಗ್ಗೆ ರಮ್ಯಾ ಆಡಿದ ಮಾತಿಗೆ ಕಿಚ್ಚನ ಪ್ರತಿಕ್ರಿಯೆ; ‘ಕೋಟಿಗೊಬ್ಬ 3’ ಸುದ್ದಿಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ