ಶಾರುಖ್​ ಮಗನನ್ನು ಬಂಧಿಸಿದ್ದ ಸಮೀರ್​ ವಾಂಖೆಡೆಗೆ ಶಾಕ್​; ಪ್ರಕರಣದ ತನಿಖೆಯಿಂದಲೇ ಕೊಕ್‌

TV9 Digital Desk

| Edited By: Rajesh Duggumane

Updated on: Nov 05, 2021 | 7:42 PM

ಎನ್​ಸಿಬಿ ಅಧಿಕಾರಿಗಳು ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡರು ಮತ್ತು ಬಹುಕೋಟಿ ಡೀಲ್​ ಬಗ್ಗೆ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ ಎಂದು ಪ್ರಭಾಕರ್​ ಸೈಲ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಶಾರುಖ್​ ಮಗನನ್ನು ಬಂಧಿಸಿದ್ದ ಸಮೀರ್​ ವಾಂಖೆಡೆಗೆ ಶಾಕ್​; ಪ್ರಕರಣದ ತನಿಖೆಯಿಂದಲೇ ಕೊಕ್‌
ಸಮೀರ್​ ವಾಂಖೆಡೆ, ಆರ್ಯನ್​ ಖಾನ್​

Follow us on

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರನ್ನು ಬಂಧಿಸಿದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಮೇಲೆ ಅನೇಕ ಆರೋಪಗಳು ಕೇಳಿಬಂದಿವೆ. ಸ್ಟಾರ್​ ಪುತ್ರನ ಬಂಧನದ ಹಿಂದೆ ಸುಲಿಗೆ ಪ್ಲ್ಯಾನ್​ ಮಾಡಲಾಗಿತ್ತು ಎಂಬ ಆರೋಪ ಬಲವಾಗಿ ಕೇಳಿ ಬಂದಿತ್ತು. ಈ ಬೆನ್ನಲ್ಲೇ, ಪ್ರಕರಣದ ತನಿಖೆಯಿಂದ ಸಮೀರ್​ ವಾಂಖೆಡೆಯನ್ನು ಹೊರಗಿಡಲಾಗಿದೆ. ಈ ಪ್ರಕರದ ಬಗ್ಗೆ ಕೇಂದ್ರದ ಉನ್ನತ ತಂಡ ತನಿಖೆ ನಡೆಸಲಿದೆ.  

ಆರ್ಯನ್​ ಖಾನ್​ ಭಾಗಿಯಾಗಿದ್ದರು ಎನ್ನಲಾದ ರೇವ್​ ಪಾರ್ಟಿ ಮೇಲೆ ದಾಳಿ ನಡೆದ ದಿನ ಎನ್​ಸಿಬಿ ಅಧಿಕಾರಿಗಳ ಜೊತೆ ಖಾಸಗಿ ಡಿಟೆಕ್ಟೀವ್​ ಕಿರಣ್​ ಗೋಸಾವಿ ಮತ್ತು ಅವರ ಬಾಡಿಗಾರ್ಡ್​ ಪ್ರಭಾಕರ್​ ಸೈಲ್​ ಕೂಡ ಹಾಜರಿದ್ದರು. ಇವರಿಬ್ಬರು ಪ್ರಮುಖ ಸಾಕ್ಷಿಗಳಾಗಿದ್ದಾರೆ. ಆದರೆ ದಾಳಿ ಬಳಿಕ ಕಿರಣ್​ ಗೋಸಾವಿ ನಾಪತ್ತೆ ಆಗಿದ್ದರು. ಈಗ ಅವರು ಪುಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಎನ್​ಸಿಬಿ ಅಧಿಕಾರಿಗಳು ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡರು ಮತ್ತು ಬಹುಕೋಟಿ ಡೀಲ್​ ಬಗ್ಗೆ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ ಎಂದು ಪ್ರಭಾಕರ್​ ಸೈಲ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದರ ಜೊತೆ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ ಮುಖಂಡ ನವಾಬ್​ ಮಲಿಕ್​ ಕೂಡ ಸಮೀರ್​ ವಾಂಖೆಡೆ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ಇವುಗಳ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರವು ತನಿಖೆ ನಡೆಸಲು ವಿಶೇಷ ತಂಡ ರಚಿಸಿದೆ. ಈಗ ತನಿಖಾ ನೇತೃತ್ವವೂ ಅವರ ಕೈತಪ್ಪಿದೆ.

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್ ಅವರನ್ನು ಬಂಧಿಸಿದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಅವರನ್ನು ಜನರು ಶ್ಲಾಘಿಸುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಅವರ ಮೇಲೆ ಹಲವು ಅರೋಪಗಳನ್ನೂ ಹೊರಿಸಲಾಗಿದೆ. ಈ ಡ್ರಗ್ಸ್​ ಪ್ರಕರಣದ ತನಿಖೆ ಪಾರದರ್ಶಕವಾಗಿಲ್ಲ, ಇದು ರಾಜಕೀಯ ಪ್ರೇರಿತ ದಾಳಿ, ಇದರ ಹಿಂದೆ ಯಾರದ್ದೋ ಪಿತೂರಿ ಇದೆ ಎಂದೆಲ್ಲ ಹೇಳಲಾಗುತ್ತಿದೆ. ಈ ಟೀಕೆಗಳ ನಡುವೆ ಸಮೀರ್​ ವಾಂಖೆಡೆ ಅವರ ಫ್ಯಾಮಿಲಿ ವಿಚಾರವನ್ನೂ ಎಳೆದು ತರಲಾಗುತ್ತಿದೆ. ಅದು ಅತಿರೇಕಕ್ಕೆ ಕೂಡ ಹೋಗಿದೆ. ಈಗ ಎನ್​ಸಿಪಿ ಮುಖಂಡ ನವಾಬ್​ ಮಲಿಕ್​ ಅವರು ಸಮೀರ್​ ವಾಂಖೆಡೆಯ ಸಹೋದರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಬಂಧನದ ಭೀತಿಯಲ್ಲಿ ಸಮೀರ್​ ವಾಂಖೆಡೆ; ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ ಎನ್​ಸಿಬಿ ಅಧಿಕಾರಿಗೆ ಹಿನ್ನೆಡೆ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada