Updated on: Nov 05, 2021 | 2:46 PM
ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಬಾಲಿವುಡ್ ಸೆಲೆಬ್ರಿಟಗಳೂ ಕೂಡ ಹಬ್ಬ ಆಚರಿಸುತ್ತಿದ್ದಾರೆ.
ತಂದೆ ಬೋನಿ ಕಪೂರ್ ಜತೆ ಸೇರಿ ಜಾನ್ವೀ ಕಪೂರ್ ಹಬ್ಬ ಆಚರಿಸಿದ್ದಾರೆ.
ಫರ್ಹಾನ್ ಅಖ್ತರ್ ಮನೆಯಲ್ಲೂ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಈ ಫೋಟೋವನ್ನು ಕೆಲವರು ಟ್ರೋಲ್ ಮಾಡಿದ್ದಾರೆ.
ಹೃತಿಕ್ ರೋಶನ್ ಕೂಡ ಕುಟುಂಬದ ಜತೆ ಹಬ್ಬದ ಸಂಭ್ರಮದಲ್ಲಿ ಮಿಂದೆದಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕರೀನಾ ಕಪೂರ್ ಅವರು ಸೈಫ್ ಅಲಿ ಖಾನ್ ಜತೆ ಹಬ್ಬವನ್ನು ಆಚರಿಸಿದ್ದಾರೆ.
ಅರ್ಜುನ್ ಕಪೂರ್ ಪ್ರಿಯತಮೆ ಮಲೈಕಾ ಅರೋರಾ ಟ್ರೆಡೀಷನಲ್ ಆಗಿ ಕಾಣಿಸಿಕೊಂಡಿದ್ದಾರೆ.
ಅಮೆರಿಕದಲ್ಲಿ ಸೆಟಲ್ ಆಗಿರುವ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಜತೆ ಸೇರಿಕೊಂಡು ಹಬ್ಬವನ್ನು ಆಚರಣೆ ಮಾಡಿದ್ದಾರೆ.