ಎಲ್ಲರ ಜತೆ ಮಾತನಾಡುವುದನ್ನೇ ನಿಲ್ಲಿಸಿದ ಆರ್ಯನ್ ಖಾನ್? ಜೈಲುವಾಸದಿಂದ ಆಘಾತ
ಆರ್ಯನ್ ಖಾನ್ ಚಿಕ್ಕ ವಯಸ್ಸಿನಿಂದಲೂ ಸುಖದಲ್ಲೇ ಬೆಳೆದು ಬಂದವರು. ಅವರು ಹೊರಗೆ ತೆರಳುತ್ತಾರೆ ಎಂದರೆ ಬಾಡಿಗಾರ್ಡ್ ಇರಲೇಬೇಕು. ಮನೆಯಲ್ಲೂ ಅಷ್ಟೇ ಅವರು ಕೇಳಿದ್ದನ್ನೆಲ್ಲ ಮಾಡಿ ಹಾಕಲು ಸಿಬ್ಬಂದಿ ಇದ್ದಾರೆ. ಹೀಗಿರುವಾಗ ಏಕಾಏಕಿ ಜೈಲು ವಾಸ ಅನುಭವಿಸಬೇಕು ಎಂದರೆ ಅಷ್ಟು ಕಷ್ಟದ ಕೆಲಸ.
ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದಿದ್ದ ಆರ್ಯನ್ ಖಾನ್ (Aryan Khan) ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ, ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತ್ತು. ಆದರೆ, ಈಗ ಆರ್ಯನ್ ಖಾನ್ಗೆ ಕೊವಿಡ್ ಲಕ್ಷಣ ಕಾಣಿಸಿಕೊಂಡಿದೆ. ಹೀಗಾಗಿ, ಅವರು ವಿಚಾರಣೆಗೆ ಹಾಜರಾಗಿಲ್ಲ. ಈ ಬಗ್ಗೆ ಅವರು ಮಾಹಿತಿ ಕೂಡ ನೀಡಿದ್ದಾರೆ. ಚಿಕ್ಕಂದಿನಿಂದಲೂ ಐಷಾರಾಮಿಯಾಗಿಯೇ ಬೆಳೆದು ಬಂದ ಆರ್ಯನ್ ಖಾನ್ಗೆ ಜೈಲು ವಾಸದಿಂದ ತುಂಬಾನೇ ಆಘಾತಕ್ಕೆ ಒಳಗಾಗಿದ್ದಾರೆ. ಅವರ ಬಳಿ ಇದೆಲ್ಲವನ್ನೂ ತಡೆದುಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಡ್ರಗ್ ಕೇಸ್ನಲ್ಲಿ ಜೈಲು ಸೇರಿದ ಆರ್ಯನ್ ಖಾನ್ಗೆ ತೀವ್ರ ಅವಮಾನವಾಗಿದೆ ಎಂದು ವರದಿ ಆಗಿದೆ.
ಆರ್ಯನ್ ಖಾನ್ ಚಿಕ್ಕ ವಯಸ್ಸಿನಿಂದಲೂ ಸುಖದಲ್ಲೇ ಬೆಳೆದು ಬಂದವರು. ಅವರು ಹೊರಗೆ ತೆರಳುತ್ತಾರೆ ಎಂದರೆ ಬಾಡಿಗಾರ್ಡ್ ಇರಲೇಬೇಕು. ಮನೆಯಲ್ಲೂ ಅಷ್ಟೇ ಅವರು ಕೇಳಿದ್ದನ್ನೆಲ್ಲ ಮಾಡಿ ಹಾಕಲು ಸಿಬ್ಬಂದಿ ಇದ್ದಾರೆ. ಹೀಗಿರುವಾಗ ಏಕಾಏಕಿ ಜೈಲು ವಾಸ ಅನುಭವಿಸಬೇಕು ಎಂದರೆ ಅಷ್ಟು ಕಷ್ಟದ ಕೆಲಸ. ಆರ್ಯನ್ ಖಾನ್ ಈ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.
ಆರ್ಯನ್ ಖಾನ್ ಜೈಲಿನಿಂದ ರಿಲೀಸ್ ಆಗಿ ಕೆಲ ದಿನ ಕಳೆದಿದೆ. ಅವರು ಮನೆಯಲ್ಲಿ ಯಾರ ಜತೆಯೂ ಸರಿಯಾಗಿ ಮಾತನಾಡುತ್ತಿಲ್ಲ. ತಮ್ಮ ಕೊಠಡಿಯಲ್ಲಿ ಒಬ್ಬರೇ ಕೂತಿರುತ್ತಾರೆ. ಅವರು ಹೆಚ್ಚು ಮೌನಕ್ಕೆ ಶರಣಾಗಿದ್ದಾರೆ. ಅವರು ಯಾವ ಗೆಳೆಯರನ್ನೂ ಭೇಟಿ ಮಾಡುತ್ತಿಲ್ಲ.
ಶಾರುಖ್ ಮಗ ಮೊದಲಿನಿಂದಲೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮಾಧ್ಯಮಗಳ ಜತೆ ಮಾತನಾಡುವುದಕ್ಕೂ ಹೆಚ್ಚು ನಾಚಿಕೆ ಮಾಡಿಕೊಳ್ಳುತ್ತಿದ್ದರು. ಈಗ ಅದೆಲ್ಲವೂ ಹೆಚ್ಚಾಗಿದೆ. ಅವರು ಯಾವ ಆಪ್ತರ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಮೂಲಗಳು ಹೇಳಿವೆ.
ಆರ್ಯನ್‌ಗಾಗಿ ವಿಶೇಷವಾಗಿ ಅಂಗರಕ್ಷಕನನ್ನು ನೇಮಿಸಿಕೊಳ್ಳುವ ಯಾವುದೇ ಯೋಜನೆ ಶಾರುಖ್ಗೆ ಇಲ್ಲ. ಶಾರುಖ್ ಖಾನ್ ತಮ್ಮ ಮಗನಿಗಾಗಿ ಸಮಯ ಮೀಸಲಿಟ್ಟಿದ್ದಾರೆ. ಸದ್ಯಕ್ಕೆ ಶಾರುಖ್ ಅವರ ಎಲ್ಲಾ ಶೂಟಿಂಗ್ ಮುಂದೂಡಿದ್ದಾರೆ. ನವೆಂಬರ್ 13ರಂದು ಆರ್ಯನ್ ಖಾನ್ ಜನ್ಮದಿನ. ಈ ದಿನವನ್ನು ವಿಶೇಷವಾಗಿ ಆಚರಿಸಲು ಅವರು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ‘ಆರ್ಯನ್ ಖಾನ್ ಕಿಡ್ನಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್ ಮಲಿಕ್ ಗಂಭೀರ ಆರೋಪ
ಎನ್ಸಿಬಿ ವಿಚಾರಣೆಯಿಂದ ತಪ್ಪಿಸಿಕೊಂಡ ಆರ್ಯನ್ ಖಾನ್; ಶಾರುಖ್ ಮಗ ಕೊಟ್ಟ ಕಾರಣ ಏನು?
Published On - 3:50 pm, Tue, 9 November 21