ಕ್ಯಾನ್ಸರ್ ಪೀಡಿತರಿಗಾಗಿ ಕೂದಲು ದಾನ; ಮಾಧುರಿ ದೀಕ್ಷಿತ್ ಪುತ್ರ ರಿಯಾನ್ ಕಾರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ
ರಾಷ್ಟ್ರೀಯ ಕ್ಯಾನ್ಸರ್ ದಿನದ ಸಂದರ್ಭದಲ್ಲಿ, ನಾನು ನಿಜವಾಗಿಯೂ ವಿಶೇಷವಾದದ್ದನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕ್ಯಾನ್ಸರ್ನಿಂದಾಗಿ ಕೀಮೋಗೆ ಒಳಗಾಗುತ್ತಿರುವ ಹಲವಾರು ಜನರನ್ನು ನೋಡಿ ರಿಯಾನ್ ಬೇಸರಗೊಂಡಿದ್ದರು. ಹೀಗಾಗಿ ಅಂತಹವರಿಗೆ ತನ್ನ ಕೂದಲನ್ನು ದಾನ ಮಾಡಲು ರಿಯಾನ್ 2 ವರ್ಷಗಳ ಹಿಂದೆ ನಿರ್ಧರಿಸಿದ್ದರು ಎಂದು ಮಾಧುರಿ ದೀಕ್ಷಿತ್ ಪೋಸ್ಟ್ ಮಾಡಿದ್ದಾರೆ.
ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7) ತಮ್ಮ ತಲೆ ಕೂದಲನ್ನು ದಾನ ಮಾಡಿದ್ದಾರೆ. ರಿಯಾನ್ ತಲೆ ಕೂದಲು ಕ್ಷೌರ ಮಾಡುತ್ತಿರುವ ವಿಡಿಯೋವನ್ನು ತಾಯಿ ಮಾಧುರಿ ದೀಕ್ಷತ್(Madhuri dixit) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕ್ಯಾನ್ಸರ್ ಪೀಡಿತರಿಗೆ ಅವಶ್ಯಕವಾದ ಉದ್ದದ ತಲೆ ಕೂದಲನ್ನು ದಾನ ಮಾಡಲು 2 ವರ್ಷಗಳಿಂದ ತಮ್ಮ ಮಗ ರಾಯನ್ ತಲೆ ಕೂದಲು ಕತ್ತರಿಸಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಜತೆಗೆ ಮಗ ರಾಯನ್ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಕ್ಯಾನ್ಸರ್ ದಿನದ ಸಂದರ್ಭದಲ್ಲಿ, ನಾನು ನಿಜವಾಗಿಯೂ ವಿಶೇಷವಾದದ್ದನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕ್ಯಾನ್ಸರ್ನಿಂದಾಗಿ ಕೀಮೋಗೆ ಒಳಗಾಗುತ್ತಿರುವ ಹಲವಾರು ಜನರನ್ನು ನೋಡಿ ರಿಯಾನ್ ಬೇಸರಗೊಂಡಿದ್ದರು. ಹೀಗಾಗಿ ಅಂತಹವರಿಗೆ ತನ್ನ ಕೂದಲನ್ನು ದಾನ ಮಾಡಲು ರಿಯಾನ್ 2 ವರ್ಷಗಳ ಹಿಂದೆ ನಿರ್ಧರಿಸಿದ್ದರು. ರಿಯಾನ್ ಈ ನಿರ್ಧಾರ ನಮಗೆ ಆಶ್ಚರ್ಯವನ್ನುಂಟು ಮಾಡಿದೆ. ಅಲ್ಲದೆ ಅತಿ ಹೆಚ್ಚು ಹೆಮ್ಮೆ ಉಂಟು ಮಾಡಿದೆ ಎಂದು ಮಾಧುರಿ ದೀಕ್ಷಿತ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ
ಮಾಧುರಿ ದೀಕ್ಷಿತ್ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವ ಉದಾತ್ತ ಉದ್ದೇಶಕ್ಕೆ ಬದ್ಧರಾದ ರಿಯಾನ್ ಅವರನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೇ ನಟಿ ಶಿಲ್ಪಾ ಶೆಟ್ಟಿ, ಚಲನಚಿತ್ರ ನಿರ್ಮಾಪಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ಕೂಡ ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದು, ರಿಯಾನ್ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
View this post on Instagram
ನೆಟ್ಟಿಗರು ಕೂಡ ಕಮೆಂಟ್ ಮೂಲಕ ಶ್ಲಾಫಿಸಿದ್ದು, ಅದರಲ್ಲಿ ಒಬ್ಬರು, ಉತ್ತಮ ಚಿಂತನೆ ಮತ್ತು ಕೊಡುಗೆ, ರಿಯಾನ್‌ಗೆ ಆಲ್ ದಿ ಬೆಸ್ಟ್ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿಮ್ಮ ಮಗನ ಬಗ್ಗೆ ಹೆಮ್ಮೆಯಾಗುತ್ತದೆ ಮತ್ತು ಉತ್ತಮ ಪೋಷಕರಿಗೆ ಅಭಿನಂದನೆಗಳು ಎಂದು ಕಮೆಂಟ್ ಮಾಡಿ ಶ್ಲಾಫಿಸಿದ್ದಾರೆ.
ನಟಿ ಮಾಧುರಿ ದೀಕ್ಷಿತ್ ಅಕ್ಟೋಬರ್ 17, 1999 ರಂದು ವೈದ್ಯ ಶ್ರೀರಾಮ್ ನೆನೆ ಅವರನ್ನು ವಿವಾಹವಾದರು. ದಂಪತಿಗಳಿಗೆ ಇಬ್ಬರು ಪುತ್ರರಿದ್ದಾರೆ. ಆರಿನ್ ಮೊದಲ ಪುತ್ರನಾಗಿದ್ದು, ರಿಯಾನ್ ದ್ವೀತಿಯ ಪುತ್ರ.
ಇದನ್ನೂ ಓದಿ: ‘3 ತಿಂಗಳ ವೇತನ ಸೇರಿಸಿದರೂ ಅದನ್ನು ಖರೀದಿಸೋಕಾಗಲ್ಲ’; ಮಾಧುರಿ ದೀಕ್ಷಿತ್ ತೊಟ್ಟ ಲೆಹೆಂಗಾ ಬೆಲೆ ನೋಡಿ ಹೌಹಾರಿದ ಅಭಿಮಾನಿಗಳು
Published On - 10:50 am, Tue, 9 November 21