ನಿನ್ನ ಚಿಂತನೆಗಳಿಂದಲೇ ಎಂದಿಗೂ ನಮ್ಮ ಜತೆ ಇರುತ್ತೀಯಾ, ತಮ್ಮ ಪುನೀತ್​ನನ್ನು ನೆನೆದು ಭಾವನಾತ್ಮಕ ಪೋಸ್ಟ್ ಮಾಡಿದ ರಾಘಣ್ಣ

ಯಾರಿಗೂ ಗೊತ್ತಾಗದಂತೆ ನೀನು ಸಮಾಜ ಸೇವೆ ಮಾಡಿದೆ. ನಿನ್ನಂತೆ ಸಮಾಜಸೇವೆ ಮಾಡುವ ಶಕ್ತಿಯನ್ನು ನನಗೆ ನೀಡು. ನಿನ್ನ ಚಿಂತನೆಗಳಿಂದಲೇ ಎಂದಿಗೂ ನಮ್ಮ ಜತೆ ಇರುತ್ತೀಯಾ ಎಂದು ತಮ್ಮ ಪುನೀತ್ ನೆನೆದು ರಾಘವೇಂದ್ರ ರಾಜ್‌ಕುಮಾರ್ ಫೇಸ್‌ಬುಕ್ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ನಿನ್ನ ಚಿಂತನೆಗಳಿಂದಲೇ ಎಂದಿಗೂ ನಮ್ಮ ಜತೆ ಇರುತ್ತೀಯಾ, ತಮ್ಮ ಪುನೀತ್​ನನ್ನು ನೆನೆದು ಭಾವನಾತ್ಮಕ ಪೋಸ್ಟ್ ಮಾಡಿದ ರಾಘಣ್ಣ
ಪುನೀತ್​ ರಾಜ್​ಕುಮಾರ್ ನೆನಪಲ್ಲಿ ರಾಘವೇಂದ್ರ ರಾಜ್‌ಕುಮಾರ್ (ಫೇಸ್​ಬುಕ್)
Follow us
TV9 Web
| Updated By: ಆಯೇಷಾ ಬಾನು

Updated on:Nov 09, 2021 | 10:43 AM

ಬೆಂಗಳೂರು: ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) ನಮ್ಮನ್ನು ಅಗಲಿ ಇಂದಿಗೆ 12ದಿನಗಳು ಕಳೆದಿವೆ. ಆದರೆ ಅವರ ಅಭಿಮಾನಿಗಳ ಮನಸಲ್ಲಿನ ನೋವು ಸ್ವಲ್ಪವೂ ಕಮ್ಮಿಯಾಗಿಲ್ಲ. ಅವರ ಸಾವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಆ ದೇವರು ನೀಡಿಲ್ಲ. ಪ್ರತಿ ದಿನ ಸಾವಿರಾರು ಅಭಿಮಾನಿಗಳು ಅಪ್ಪು ಸಮಾಧಿ ದರ್ಶನ ಮಾಡ್ತಿದ್ದಾರೆ. ಅಪ್ಪು ಎದ್ದು ಬನ್ನಿ, ಮತ್ತೆ ಹುಟ್ಟಿ ಬನ್ನಿ ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿನ ಅಭಿಷೇಕ ಮಾಡ್ತಿದ್ದಾರೆ. ಇನ್ನು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಇಂದು ಬೆಳಗ್ಗೆ 11 ಗಂಟೆಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಆರಂಭವಾಗಲಿದೆ. 25 ರಿಂದ 30 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ರಾಘವೇಂದ್ರ ರಾಜ್‌ಕುಮಾರ್(Raghavendra Rajkumar) ಪುನೀತ್ ನೆನೆದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಯಾರಿಗೂ ಗೊತ್ತಾಗದಂತೆ ನೀನು ಸಮಾಜ ಸೇವೆ ಮಾಡಿದೆ. ನಿನ್ನಂತೆ ಸಮಾಜಸೇವೆ ಮಾಡುವ ಶಕ್ತಿಯನ್ನು ನನಗೆ ನೀಡು. ನಿನ್ನ ಚಿಂತನೆಗಳಿಂದಲೇ ಎಂದಿಗೂ ನಮ್ಮ ಜತೆ ಇರುತ್ತೀಯಾ ಎಂದು ತಮ್ಮ ಪುನೀತ್ ನೆನೆದು ರಾಘವೇಂದ್ರ ರಾಜ್‌ಕುಮಾರ್ ಫೇಸ್‌ಬುಕ್ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಸದಾ ಅಪ್ಪುನನ್ನು ಮಗನೇ ಮಗನೇ ಎಂದು ನೆನೆಪಿಸಿಕೊಳ್ಳುವ ರಾಘಣ್ಣ ಪುನೀತ್​ರನ್ನು ತಮ್ಮನಿಗಿಂತ ಮಗನಂತೆ ಮುದ್ದ ಕಂದಮ್ಮನಂತೆ ಪ್ರೀತಿ ಕೊಡುತ್ತಿದ್ದರು. ಆದರೆ ಪುನೀತ್​ರ ಅಗಲಿಕೆ ರಾಘಣ್ಣನನ್ನು ಕಾಡಿದ್ದು ನಾನು ನಿರುದ್ಯೋಗಿಯಾಗಿದ್ದೆ. ನೀನು ನನಗೆ ಸಮಾಜ ಸೇವೆಯ ಕೆಲಸ ಕೊಟ್ಟಿದ್ದೀಯಾ. ಸಮಾಜಸೇವೆಯಲ್ಲಿ ಮುನ್ನಡೆಯುವಂತೆ ಮಾಡಿದ್ದೀಯಾ. ಸೇವೆ ಮಾಡುವಾಗ ಕಿವುಡರಾಗಿ, ಕುರುಡರಾಗಿರಿ ಇಂತಹ ನಿನ್ನ ಆಲೋಚನೆಗಳು ಬದುಕುವ ಶಕ್ತಿ ನೀಡುತ್ತೆ. ನಿನ್ನ ಆಲೋಚನೆಗಳ ಜೊತೆ ಪ್ರೀತಿಸುತ್ತಾ ಬದುಕುತ್ತೇನೆ ಎಂದು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡೋ ದಿನವೇ ರಾಘವೇಂದ್ರ ರಾಜ್‌ಕುಮಾರ್ ಭಾವುಕರಾಗಿ ಫೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಈ ನೋವಿನ ಜತೆ ಬದುಕೋಕೆ ಶಕ್ತಿಕೊಡು ಎಂದು ದೇವರಲ್ಲಿ ಕೇಳಿಕೊಳ್ಳಬೇಕಷ್ಟೆ; ರಾಘವೇಂದ್ರ ರಾಜ್​ಕುಮಾರ್​

Published On - 8:20 am, Tue, 9 November 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ