Puneeth Rajkumar: ಅರಮನೆ ಮೈದಾನದಲ್ಲಿ ನಟ ಶಿವರಾಜ್​ಕುಮಾರ್​ ರಕ್ತದಾನ

ಪುನೀತ್ ರಾಜ್​ಕುಮಾರ್ ಹೆಸರಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಟ ಶಿವರಾಜ್​ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸಿದ್ದಾರೆ. ಆ ಬಳಿಕ ಶಿವಣ್ಣ ರಕ್ತದಾನ ಮಾಡಿದ್ದಾರೆ.

Puneeth Rajkumar: ಅರಮನೆ ಮೈದಾನದಲ್ಲಿ ನಟ ಶಿವರಾಜ್​ಕುಮಾರ್​ ರಕ್ತದಾನ
ಪುನೀತ್​ ರಾಜ್​ಕುಮಾರ್, ಶಿವರಾಜ್​ಕುಮಾರ್
Follow us
TV9 Web
| Updated By: preethi shettigar

Updated on:Nov 09, 2021 | 2:43 PM

ಬೆಂಗಳೂರು: ಪುನೀತ್ ರಾಜ್​ಕುಮಾರ್​ (Puneeth Rajkumar) ಅಗಲಿ ಇಂದಿಗೆ (ನವೆಂಬರ್ 9) 12 ದಿನಗಳಾಗಿವೆ. ಈ ಕಾರಣಕ್ಕೆ ದೊಡ್ಮನೆ ಕುಟುಂಬ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡುತ್ತಿದೆ. ಪುನೀತ್ ರಾಜ್​ಕುಮಾರ್ ಹೆಸರಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಟ ಶಿವರಾಜ್​ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸಿದ್ದಾರೆ. ಆ ಬಳಿಕ ಶಿವಣ್ಣ ರಕ್ತದಾನ ಮಾಡಿದ್ದಾರೆ.

ಅಪ್ಪುನಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ: ನಟ ಶಿವರಾಜ್‌ಕುಮಾರ್ ಪುನೀತ್ ಆಸೆ ಈ ರೀತಿ ನೆರವೇರಬೇಕೆಂದು ದೇವರ ಇಚ್ಛೆ ಇತ್ತು ಎಂದು ಅನಿಸುತ್ತದೆ. ಅಪ್ಪುನಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಬಲಗೈಯಲ್ಲಿ ಮಾಡಿದ್ದು, ಎಡಗೈಗೆ ಗೊತ್ತಾಗಬಾರದು. ಅದನ್ನೇ ನಾವೆಲ್ಲರೂ ಅನುಸರಿಸಬೇಕು. ಇಂದು ಎಲ್ಲರಿಗೂ ಉಟದ ವ್ಯವಸ್ಥೆ ಆಗುತ್ತಿದೆ. ಎಲ್ಲರೂ ನಿಧಾನವಾಗಿ ಬಂದು ಊಟ ಮಾಡಿಕೊಂಡು ಹೋಗಿ. ನವೆಂಬರ್​ 16ರಂದು ಚಿತ್ರರಂಗದಿಂದ ಕಾರ್ಯಕ್ರಮ ನಡೆಯುತ್ತಿದೆ ಎಂದು ಅರಮನೆ ಮೈದಾನದಲ್ಲಿ ನಟ ಶಿವರಾಜ್‌ಕುಮಾರ್ ಹೇಳಿಕೆ ನೀಡಿದ್ದಾರೆ.

ಇಂದು ಅಭಿಮಾನಿಗಳು, ಗಣ್ಯರಿಗೆ ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿದೆ. ಎಲ್ಲಾ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಊಟ ಸ್ವೀಕರಿಸಬಹುದು. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. 2 ಸಾವಿರಕ್ಕೂ ಹೆಚ್ಚು ಚೇರ್, ಊಟದ ಟೇಬಲ್ ಹಾಕಲಾಗಿದೆ. 600ಕ್ಕೂ ಹೆಚ್ಚು ಅಡುಗೆ ಭಟ್ಟರು, ಹೆಲ್ಪರ್ಗಳು ಭಾಗಿಯಾಗುತ್ತಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯಿಂದ ಅನ್ನಸಂತರ್ಪಣೆ ಪ್ರಾರಂಭವಾಗಲಿದೆ.

20 ಸಾವಿರ ಜನರಿಗೆ ಮಾಂಸಾಹಾರಿ ಊಟದ ವ್ಯವಸ್ಥೆ ಮಾಡಲಾಗಿದೆ. 5 ಸಾವಿರ ಜನರಿಗೆ ಸಸ್ಯಾಹಾರಿ ಊಟಕ್ಕೆ ವ್ಯವಸ್ಥೆ ನಡೆಸಲಾಗುತ್ತಿದೆ. ಒಟ್ಟು 25 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಊಟದ ಸಂದರ್ಭದಲ್ಲಿ ನೂಕುನುಗ್ಗಲು ಆಗದಿರಲಿ ಎನ್ನುವ ಕಾರಣಕ್ಕೆ ಅರಮನೆ ಮೈದಾನದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಒಂದು ಸಾವಿರಕ್ಕೂ ಹೆಚ್ಚು ಬಾಣಸಿಗರಿಂದ ಅಡುಗೆ ರೆಡಿ ಮಾಡಲಾಗುತ್ತಿದೆ. 25 ಸಾವಿರ ಸೋನಾ ಮಸೂರಿ ಅಕ್ಕಿ, 750 ಲೀ. ಅಡುಗೆ ಎಣ್ಣೆ, 100 ಕಟ್ಟು ಪುದೀನ ಸೊಪ್ಪು, 100 ಕೆ.ಜಿ ಟೊಮ್ಯಾಟೋ, ತಲಾ 50 ಕೆ.ಜಿ ಈರುಳ್ಳಿ, ಬೆಳ್ಳುಳ್ಳಿ, 3 ಸಾವಿರ ಕೆ.ಜಿ. ಚಿಕನ್, 8500 ಕೋಳಿ ಮೊಟ್ಟೆ, 50, 60,70 ಮತ್ತು 80 ಕೆಜಿಯ ದೊಡ್ಡ ಪಾತ್ರೆಗಳಲ್ಲಿ ಗೀರೈಸ್ ತಯಾರಿ ಮಾಡಲಾಗುತ್ತಿದೆ. 50 ಕೆೆ.ಜಿಯ ಐದಾರು ದೊಡ್ಡ ಪಾತ್ರೆಗಳಲ್ಲಿ ಮೊಟ್ಟೆಗಳನ್ನು ಬೇಯಿಸಲಾಗುತ್ತಿದೆ. ಹನ್ನೊಂದು ಗಂಟೆ ಸುಮಾರಿಗೆ ಊಟ ಸಿದ್ಧವಾಗಲಿದೆ ಎಂದು ಹಿರಿಯ ಹೆಡ್ ಕುಕ್ ಹೊನಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ:

‘ಪುನೀತ್ ಇಲ್ಲದಿದ್ದಾಗ ದೂರು ಏಕೆ? ದಯವಿಟ್ಟು ಬೇಡ’: ಶಿವರಾಜ್​ಕುಮಾರ್​ ಮನವಿ

‘ಆ ದಿನ ಪುನೀತ್ ಡಲ್ ಆಗಿದ್ದರು’; ಅಪ್ಪು ಸಾವಿನ ನಂತರ ಅಚ್ಚರಿಯ ವಿಚಾರ ಬಿಚ್ಚಿಟ್ಟ ಶಿವರಾಜ್​ಕುಮಾರ್​

Published On - 12:43 pm, Tue, 9 November 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್