ಅಭಿಮಾನಿಗಳಿಗೆ ಪ್ರೀತಿಯಿಂದ ಊಟ ಬಡಿಸಿದ ಶಿವರಾಜ್ಕುಮಾರ್, ಅಶ್ವಿನಿ
20 ಸಾವಿರ ಜನರಿಗೆ ಮಾಂಸಾಹಾರಿ ಊಟದ ವ್ಯವಸ್ಥೆ ಮಾಡಲಾಗಿದೆ. 5 ಸಾವಿರ ಜನರಿಗೆ ಸಸ್ಯಾಹಾರಿ ಊಟಕ್ಕೆ ವ್ಯವಸ್ಥೆ ನಡೆಸಲಾಗಿದೆ. ಅಪಾರ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಒಟ್ಟು 25 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ದೊಡ್ಡ ಅಭಿಮಾನಿ ಬಳಗವನ್ನು ತೊರೆದು ಹೋಗಿದ್ದಾರೆ. ಅವರು ಸಿನಿಮಾ ಹಾಗೂ ಸಾಮಾಜಿಕ ಕೆಲಸದ ಮೂಲಕ ಜನರ ಮನದಲ್ಲಿ ಅಚ್ಚು ಮೂಡಿಸಿ ಹೋಗಿದ್ದಾರೆ. ಅವರು ಅಗಲಿ ಇಂದಿಗೆ (ನವೆಂಬರ್ 9) 12 ದಿನಗಳಾಗಿವೆ. ಈ ಕಾರಣಕ್ಕೆ ದೊಡ್ಮನೆ ಕುಟುಂಬ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಿದೆ. ಪುನೀತ್ ರಾಜ್ಕುಮಾರ್ ಹೆಸರಲ್ಲಿ ಈ ಕಾರ್ಯಕ್ರಮ ನಡೆದಿದೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ.
20 ಸಾವಿರ ಜನರಿಗೆ ಮಾಂಸಾಹಾರಿ ಊಟದ ವ್ಯವಸ್ಥೆ ಮಾಡಲಾಗಿದೆ. 5 ಸಾವಿರ ಜನರಿಗೆ ಸಸ್ಯಾಹಾರಿ ಊಟಕ್ಕೆ ವ್ಯವಸ್ಥೆ ನಡೆಸಲಾಗಿದೆ. ಅಪಾರ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಒಟ್ಟು 25 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಊಟದ ಸಂದರ್ಭದಲ್ಲಿ ನೂಕುನುಗ್ಗಲು ಆಗದಿರಲಿ ಎನ್ನುವ ಕಾರಣಕ್ಕೆ ಅರಮನೆ ಮೈದಾನದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪುನೀತ್ ಸಹೋದರ ಶಿವರಾಜ್ಕುಮಾರ್ ಹಾಗೂ ಅಪ್ಪು ಪತ್ನಿ ಅಶ್ವಿನಿ ಅಭಿಮಾನಿಗಳಿಗೆ ಊಟ ಬಡಿಸಿ ತೆರಳಿದ್ದಾರೆ.
ಇದನ್ನೂ ಓದಿ: Puneeth Rajkumar: ಅರಮನೆ ಮೈದಾನದಲ್ಲಿ ನಟ ಶಿವರಾಜ್ಕುಮಾರ್ ರಕ್ತದಾನ
Published on: Nov 09, 2021 02:31 PM
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್ಲೈನ್ ಫಿಕ್ಸ್

