ಭಕ್ತಿಗೀತೆ ಹಾಡುವುದರ ಕುರಿತು ಮತ್ತಷ್ಟು ವಿವರಿಸಿರುವ ಸೋನು ನಿಗಮ್, ‘‘ಭಕ್ತಿಗೀತೆಗಳನ್ನು ಹಾಡಲು ಹಲವು ಅಂಶಗಳಿವೆ. ಒಂದು, ಅದನ್ನು ನಮ್ಮ ಹೃದಯದಿಂದ ಧ್ವನಿಸಬೇಕು. ಎರಡನೆಯದಾಗಿ, ಎಲ್ಲಾ ಧರ್ಮಗಳ ಹೆಚ್ಚಿನ ಭಕ್ತಿಗೀತೆಗಳು ತರಬೇತಿ ಪಡೆದ ಧ್ವನಿಯ ಅಗತ್ಯ ಹೊಂದಿದೆ. ಕಳೆದ 30 ವರ್ಷಗಳಲ್ಲಿ ಭಕ್ತಿಗೀತೆಗಳ ಕಾರಣದಿಂದಾಗಿ, ನನ್ನ ಗಾಯನವು ಬಹುಮುಖಿಯಾಗಿದೆ (Versatile). ಇದು ಚಲನಚಿತ್ರ ಮತ್ತು ಪಾಪ್ ಹಾಡುಗಳಲ್ಲದೇ ಕೇಳುಗರ ಹೃದಯದಲ್ಲಿ ಬಲವಾದ ಸ್ವತಂತ್ರ ಸ್ಥಾನ ಪಡೆಯಲು ಕಾರಣವಾಗಿದೆ’’ ಎಂದಿದ್ದಾರೆ.
ಈ ಹಿಂದೆ ಮುಂಬೈನಲ್ಲಿ ಛಟ್ ಹಬ್ಬಗಳಲ್ಲಿ ಸಾಕಷ್ಟು ಹಾಡಿದ್ದೇನೆ. ಆದರೆ ಛಟ್ ಮಾಯಿಯಾ ಕುರಿತ ಹಾಡಿಗೆ ಇಷ್ಟು ದೊಡ್ಡಪ್ರತಿಕ್ರಿಯೆ ವ್ಯಕ್ತವಾಗಿರುವುದು ಅಚ್ಚರಿ ಹಾಗೂ ಸಂತಸ ಮೂಡಿಸಿದೆ ಎಂದು ಸೋನು ನಿಗಮ್ ಹೇಳಿದ್ದಾರೆ. ಭಕ್ತಿಗೀತೆಗಳನ್ನು ಹಾಡುವುದನ್ನು ತಾನು ಬಹಳ ಆನಂದಿಸುತ್ತೇನೆ. ಆದರೆ ಅವುಗಳನ್ನು ಹಾಡುವಾಗ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿರುತ್ತದೆ ಎಂದು ಸೋನು ನಿಗಮ್ ಹೇಳಿದ್ದಾರೆ.
ಸೋನು ನಿಗಮ್ಗೆ ಬಾಲಿವುಡ್ ಹಾಡುಗಳು ತಂದುಕೊಟ್ಟಷ್ಟೇ ಜನಪ್ರಿಯತೆ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದಾಗಲೂ ಲಭ್ಯವಾಗಿದೆ. ಕನ್ನಡದಲ್ಲೂ ಅವರ ಧ್ವನಿಗೆ ಚಿತ್ರಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಅಂತೆಯೇ ಅವರ ನೂತನ ಆಲ್ಬಂ ಸಾಂಗ್ ಕೂಡ ಪ್ರಾದೇಶಿಕ ಭಾಷೆಯಲ್ಲೇ ಇದೆ. ಈ ಕುರಿತು ಮಾತನಾಡಿರುವ ಸೋನು ನಿಗಮ್, ‘‘ಪ್ರಾದೇಶಿಕ ಭಾಷೆಗಳ ಹಲವು ಖ್ಯಾತ ಸಂಗೀತ ನಿರ್ದೇಶಕರು, ಸಾಹಿತಿಗಳು ಹಾಗೂ ಗಾಯಕರೊಂದಿಗೆ ಕೆಲಸ ಮಾಡಿದ್ದೇನೆ. ಈ ಬಾರಿ ಪವನ್ ಸಿಂಗ್ ಅವರೊಂದಿಗೆ ಕೆಲಸ ಮಾಡಿರುವುದು ಖುಷಿ ತಂದಿದೆ. ಕೇವಲ ನಾಲ್ಕು ದಿನದಲ್ಲಿ ಚಿತ್ರದ ಚಿತ್ರೀಕರಣವನ್ನೂ ಪೂರ್ತಿಗೊಳಿಸಲು ನಮಗೆ ಸಾಧ್ಯವಾಗಿತ್ತು’’ ಎಂದು ಸೋನಿ ನಿಗಮ್ ಹೇಳಿದ್ದಾರೆ.
ಸೋನು ನಿಗಮ್ ಹೊಸ ಹಾಡು ಇಲ್ಲಿದೆ:
ಸೋನು ನಿಗಮ್ ಹಾಡಿರುವ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈಗಾಗಲೇ ಸುಮಾರು 17 ಮಿಲಿಯನ್ಗೂ ಅಧಿಕ ವೀಕ್ಷಣೆಯನ್ನು ಈ ಹಾಡು ಕಂಡಿದೆ. ಈ ಹಾಡಿನಲ್ಲಿ ಕನ್ನಡತಿ ಹರ್ಷಿಕಾ ಪೂಣಚ್ಚ ತೆರೆ ಮೇಲೆ ಕಾಣಿಸಿಕೊಂಡಿರುವುದು ವಿಶೇಷ.
ಇದನ್ನೂ ಓದಿ:
ಸುದೀಪ್ ಅನಾರೋಗ್ಯದ ವೇಳೆ ಮಾಡಿಕೊಂಡಿದ್ದ ಹರಕೆ ತೀರಿಸಿದ ಫ್ಯಾನ್ಸ್; ಮಲೆ ಮಹದೇಶ್ವರನ ಬೆಟ್ಟದಲ್ಲಿ ಉರುಳು ಸೇವೆ
ಅಭಿಮಾನಿಗಳಿಗೆ ಊಟ ಮಾಡಿಸುವುದು ಅಪ್ಪುನ ಆಸೆಯಾಗಿತ್ತು, ಅವನಾಸೆಯಂತೆ ಊಟದ ಏರ್ಪಾಟು ಮಾಡಲಾಗಿದೆ: ರಾಘವೇಂದ್ರ ರಾಜಕುಮಾರ್