AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​ ಅನಾರೋಗ್ಯದ ವೇಳೆ ಮಾಡಿಕೊಂಡಿದ್ದ ಹರಕೆ ತೀರಿಸಿದ ಫ್ಯಾನ್ಸ್​; ಮಲೆ ಮಹದೇಶ್ವರನ ಬೆಟ್ಟದಲ್ಲಿ ಉರುಳು ಸೇವೆ

ಕಿಚ್ಚ ಸುದೀಪ್​ ಬೇಗ ಗುಣಮುಖರಾದರೆ ಉರುಳು ಸೇವೆ ಮಾಡುವುದಾಗಿ ಹಲವು ಅಭಿಮಾನಿಗಳು ಹರಕೆ ಮಾಡಿಕೊಂಡಿದ್ದರು. ಮಂಗಳವಾರ (ನ.9) ಆ ಹರಕೆಯನ್ನು ತೀರಿಸಿದ್ದಾರೆ. ಮಲೆ ಮಹದೇಶ್ವರನ ಬೆಟ್ಟದಲ್ಲಿ ಅಭಿಮಾನಿಗಳು ಉರುಳು ಸೇವೆ ಮಾಡಿದ್ದಾರೆ.

ಸುದೀಪ್​ ಅನಾರೋಗ್ಯದ ವೇಳೆ ಮಾಡಿಕೊಂಡಿದ್ದ ಹರಕೆ ತೀರಿಸಿದ ಫ್ಯಾನ್ಸ್​; ಮಲೆ ಮಹದೇಶ್ವರನ ಬೆಟ್ಟದಲ್ಲಿ ಉರುಳು ಸೇವೆ
ಮಲೆ ಮಹದೇಶ್ವರನ ಬೆಟ್ಟದಲ್ಲಿ ಉರುಳು ಸೇವೆ
TV9 Web
| Edited By: |

Updated on: Nov 10, 2021 | 7:59 AM

Share

ಕಿಚ್ಚ ಸುದೀಪ್​ ಅವರ ಅಭಿಮಾನಿ ಬಳಗ ದೊಡ್ಡದು. ಫ್ಯಾನ್ಸ್​ ಬಗ್ಗೆ ಸುದೀಪ್​ ಅಪಾರ ಕಾಳಜಿ ತೋರಿಸುತ್ತಾರೆ. ಅನಾರೋಗ್ಯದಲ್ಲಿದ್ದ ಎಷ್ಟೋ ಕುಟುಂಬಗಳಿಗೆ ಕಿಚ್ಚ ಸುದೀಪ್​ ಚಾರಿಟೇಬಲ್​ ಸೊಸೈಟಿ ವತಿಯಿಂದ ಸಹಾಯ ಆಗಿದೆ. ಅದೇ ರೀತಿ ಸುದೀಪ್​ ಆರೋಗ್ಯಕ್ಕಾಗಿ ಅಭಿಮಾನಿಗಳು ಕೂಡ ಪ್ರತಿ ದಿನ ದೇವರಲ್ಲಿ ಪ್ರಾರ್ಥಿಸುತ್ತಾರೆ. ಕೆಲವೇ ತಿಂಗಳ ಹಿಂದೆ ಸುದೀಪ್​ ಅವರಿಗೆ ಕೊರೊನಾ ವೈರಸ್​ ತಗುಲಿತ್ತು. ಆ ಸಂದರ್ಭದಲ್ಲಿ ಅವರು ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್​ ಹರಕೆ ಕಟ್ಟಿಕೊಂಡಿದ್ದರು. ಈಗ ಅದನ್ನು ತೀರಿಸಲಾಗಿದೆ.

ತಮ್ಮ ನೆಚ್ಚಿನ ಹೀರೋ ಬೇಗ ಗುಣಮುಖರಾದರೆ ಉರುಳು ಸೇವೆ ಮಾಡುವುದಾಗಿ ಹಲವು ಅಭಿಮಾನಿಗಳು ಹರಕೆ ಮಾಡಿಕೊಂಡಿದ್ದರು. ಮಂಗಳವಾರ (ನ.9) ಆ ಹರಕೆಯನ್ನು ತೀರಿಸಿದ್ದಾರೆ. ಮಲೆ ಮಹದೇಶ್ವರನ ಬೆಟ್ಟದಲ್ಲಿ ಅಭಿಮಾನಿಗಳು ಉರುಳುಸೇವೆ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಆ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಅದನ್ನು ಕಂಡು ಕಿಚ್ಚ ಸುದೀಪ್​ ಧನ್ಯವಾದ ಅರ್ಪಿಸಿದ್ದಾರೆ. ಜನರ ಅಭಿಮಾನಕ್ಕೆ ಅವರು ಮನಸೋತಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದನ್ನು ಕೆಲವರು ಬೇರೆ ರೀತಿಯ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ‘ಸುದೀಪ್​ ಅವರೇ, ನಾನು ನಿಮ್ಮ ವ್ಯಕ್ತಿತ್ವವನ್ನು ಆರಾಧಿಸುತ್ತೇನೆ. ಆದರೆ ಅಭಿಮಾನಿಗಳಲ್ಲಿ ಇರುವ ಈ ರೀತಿಯ ಮೂಢನಂಬಿಕೆಯನ್ನು ನೀವು ಪ್ರೋತ್ಸಾಹಿಸಬಾರದು’ ಎಂದು ವ್ಯಕ್ತಿಯೊಬ್ಬರು ಕಮೆಂಟ್​ ಮಾಡಿದ್ದಾರೆ.

ಕಿಚ್ಚ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ನಿರೂಪಣೆ ಮಾಡುತ್ತಿರುವಾಗ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆದ್ದರಿಂದ ಅವರು ಕೆಲವು ವಾರಗಳ ಕಾಲ ನಿರೂಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಇಷ್ಟು ವರ್ಷಗಳ ಬಿಗ್​ ಬಾಸ್​ ಜರ್ನಿಯಲ್ಲಿ ಸುದೀಪ್ ಯಾವತ್ತೂ ಹೀಗೆ ಗೈರಾಗಿರಲಿಲ್ಲ. ಈ ಬಾರಿ ಏನೋ ಸೀರಿಯಸ್​ ಆಗಿದೆ ಎಂದು ಅಭಿಮಾನಿಗಳಿಗೆ ಸಂಶಯ ಮೂಡಿತ್ತು. ಹಾಗಾಗಿ ಕಿಚ್ಚನಿಗೋಸ್ಕರ ಅನೇಕರು ಹರಕೆ ಕಟ್ಟಿಕೊಂಡಿದ್ದರು.

ಸುದೀಪ್​ ಅವರಿಗೆ ಕೊರೊನಾ ವೈರಸ್​ ತಗುಲಿತ್ತು ಎಂದು ನಂತರ ತಿಳಿಯಿತು. ಆ ವೇಳೆಗಾಗಲೇ ಅವರು ಚೇತರಿಸಿಕೊಂಡಿದ್ದರು. ಹಲವು ದಿನಗಳ ಗ್ಯಾಪ್​ ಬಳಿಕ ಅವರು ಮತ್ತೆ ಬಿಗ್​ ಬಾಸ್​ ವೇದಿಕೆಗೆ ಮರಳಿದ್ದರು. ಆಗ ಎಲ್ಲ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದರು.

ಸಿನಿಮಾಗಳ ವಿಚಾರಕ್ಕೆ ಬರೋದಾದರೆ, ‘ಕೋಟಿಗೊಬ್ಬ 3’ ಚಿತ್ರ ತೆರೆಕಂಡು ಯಶಸ್ವಿ ಆಗಿದೆ. ಈಗ ಸುದೀಪ್​ ಅಭಿಮಾನಿಗಳ ಕಣ್ಣು ‘ವಿಕ್ರಾಂತ್​ ರೋಣ’ ಚಿತ್ರದ ಮೇಲಿದೆ. ಅನೂಪ್​ ಭಂಡಾರಿ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಸುದೀಪ್​ ಜೊತೆ ನಿರೂಪ್​ ಭಂಡಾರಿ, ಜಾಕ್ವೆಲಿನ್​ ಫರ್ನಾಂಡಿಸ್​ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ:

Puneeth Rajkumar: ಪುನೀತ್​ಗೆ ಸುದೀಪ್​ ನುಡಿ ನಮನ; ಅಂತ್ಯಕ್ರಿಯೆ ವೇಳೆ ಮಕ್ಕಳ ಬಗ್ಗೆ ಯೋಚಿಸಿ ಕಣ್ಣೀರಿಟ್ಟ ಕಿಚ್ಚ

‘ಆ ದೃಶ್ಯ ಇನ್ನೂ ನನ್ನನ್ನು ಕಾಡುತ್ತಿದೆ’; ಪುನೀತ್​ ರಾಜ್​ಕುಮಾರ್​ಗೆ ಸುದೀಪ್​ ಭಾವುಕ ನುಡಿ ನಮನ

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ