ಅಭಿಮಾನಿಗಳ ಪ್ರೀತಿಗೆ ಮಾತೇ ಬರುತ್ತಿಲ್ಲ ಎಂದ ಶಿವರಾಜ್ಕುಮಾರ್
ಪುನೀತ್ ರಾಜ್ಕುಮಾರ್ ಅವರ ಹೆಸರಲ್ಲಿ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗಿ ಆಗಿದ್ದರು. ಈ ಮೂಲಕ ಪುನೀತ್ ಅಭಿಮಾನಿ ಬಳಗ ಎಷ್ಟು ದೊಡ್ಡದಿತ್ತು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇಂದು (ನವೆಂಬರ್ 9) ಅಭಿಮಾನಿಗಳು, ಗಣ್ಯರಿಗೆ ಪುನೀತ್ ರಾಜ್ಕುಮಾರ್ ಕುಟುಂಬ ಅನ್ನಸಂತರ್ಪಣೆ ಆಯೋಜನೆ ಮಾಡಿತ್ತು. ಸುಮಾರು 30 ಸಾವಿರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಊಟ ಸ್ವೀಕರಿಸಿದ್ದಾರೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗಿತ್ತು. 2 ಸಾವಿರಕ್ಕೂ ಹೆಚ್ಚು ಚೇರ್, ಊಟದ ಟೇಬಲ್ ಹಾಕಲಾಗಿತ್ತು. ವೆಜ್ ಮತ್ತು ನಾನ್ವೆಜ್ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಿವರಾಜ್ಕುಮಾರ್ ಕೂಡ ಊಟ ಬಡಿಸುವ ಕೆಲಸ ಮಾಡಿದ್ದರು. ಆ ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಪುನೀತ್ ರಾಜ್ಕುಮಾರ್ ಅವರ ಹೆಸರಲ್ಲಿ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗಿ ಆಗಿದ್ದರು. ಈ ಮೂಲಕ ಪುನೀತ್ ಅಭಿಮಾನಿ ಬಳಗ ಎಷ್ಟು ದೊಡ್ಡದಿತ್ತು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ವಿಚಾರ ಶಿವರಾಜ್ಕುಮಾರ್ ಅವರಿಗೆ ಖುಷಿ ನೀಡಿದೆ. ಈ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೊಡ್ಮನೆಯಿಂದ ಅನ್ನಸಂತರ್ಪಣೆ; ಪುನೀತ್ ಹೆಸರಲ್ಲಿ 25 ಸಾವಿರ ಜನರಿಗೆ ಊಟದ ವ್ಯವಸ್ಥೆ
Latest Videos